For Quick Alerts
  ALLOW NOTIFICATIONS  
  For Daily Alerts

  ಹುಸೇನ್ ಸಾವಿಗೆ ಕಂಬನಿ ಮಿಡಿದ ಗಜ ಗಾಮಿನಿ ಮಾಧುರಿ

  By Rajendra
  |

  ಖ್ಯಾತ ಕುಂಚ ಕಲಾವಿದ ಎಂ ಎಫ್ ಹುಸೇನ್‌ ನಿಧನಕ್ಕೆ ಬಾಲಿವುಡ್ ಸಿನಿಮಾ ತಾರೆ ಮಾಧುರಿ ದೀಕ್ಷಿತ್ ಕಣ್ಣೀರು ಗರೆದಿದ್ದಾರೆ. ಮಾಧುರಿ ಅವರನ್ನು ತಮ್ಮ ಕುಂಚದಲ್ಲಿ ಹುಸೇನ್ ಅದ್ಭುತವಾಗಿ ಬಿಡಿಸಿದ್ದರು. ಶಾರುಖ್ ಖಾನ್ ಜೊತೆ ಆಕೆ ಅಭಿನಯದ'ಗಜ ಗಾಮಿನಿ' (2000)ಚಿತ್ರವನ್ನು ನಿರ್ದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

  ಹುಸೇನ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮಾಧುರಿ, ಈ ದಿನ ನನ್ನ ಜೀವನದಲ್ಲಿ ತುಂಬಾ ದುಃಖದ ದಿನ. ಅವರ ಕಲಾಕೃತಿಗಳು ಕೇವಲ ಹೃದಯದಿಂದಮಾತ್ರ ಹೊರಹೊಮ್ಮಿದವಲ್ಲ, ಅವರಿಗೆ ಅಪಾರ ಜ್ಞಾನವೂ ಇತ್ತು. ಭಾರತದಲ್ಲಿ ಹುಟ್ಟಿದರು ತಮ್ಮ ಕೊನೆ ದಿನಗಳನ್ನು ಅವರು ಇಲ್ಲಿ ಕಳೆಯಲಾಗಲಿಲ್ಲ ಎಂದಿದ್ದಾರೆ.

  ಮಾಧುರಿ ದೀಕ್ಷಿತ್ ಅಭಿನಯದ 'ಹಮ್ ಆಪ್ಕೆ ಹೈ ಕೌನ್' ಚಿತ್ರವನ್ನು ತಾವು 73 ಬಾರಿ ನೋಡಿದ್ದಾಗಿ ಹುಸೇನ್ ಒಮ್ಮೆ ಹೇಳಿಕೊಂಡಿದ್ದರು. ಮಾಧುರಿ ದೀಕ್ಷಿತ್, ಟಬು ಮತ್ತು ಅಮೃತಾ ರಾವ್ ಅವರನ್ನು ತಮ್ಮ ಕುಂಚದಲ್ಲಿ ಬಿಡಿಬಿಡಿಯಾಗಿ ಬಿಡಿಸಿದ್ದರು ಹುಸೇನ್. ಬಾಲಿವುಡ್ ತಾರೆ ಅನುಷ್ಕಾ ಶರ್ಮಾರನ್ನು ಬಣ್ಣಗಳಲ್ಲಿ ಬಿಡಿಸುವ ಕನಸು ಅವರು ಹೊತ್ತಿದ್ದರು. (ಪಿಟಿಐ)

  English summary
  MF Husain's muse Madhuri Dixit, who fascinated him so much that he became a filmmaker and cast her in his debut work, is very sad over the iconic painter's demise away from home... It's a very sad day for me today... His paintings not only came from his heart but also from the knowledge he had about various topics," she told a TV news channel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X