twitter
    For Quick Alerts
    ALLOW NOTIFICATIONS  
    For Daily Alerts

    ಪಾಕ್ ಐಎಸ್ಐಗೂ ಶಾರುಖ್‌ಗೂ ಎಲ್ಲಿಂದೆಲ್ಲಿಯ ಸಂಬಂಧ?

    By Prasad
    |

    ಮುಂಬೈ, ಮಾ. 10 : ಪಾಕಿಸ್ತಾನಿ ಸಿನಿಪ್ರಿಯರಿಗೆ ಶಾರುಖ್ ಖಾನ್ ಚಿತ್ರಗಳೆಂದರೆ ಪಂಚಪ್ರಾಣ. ಚಿತ್ರ ಬಿಡುಗಡೆಯಾದರೆ ಮುಗಿಬಿದ್ದು ನೋಡುತ್ತಾರೆ. ಶಾರುಖ್‌ಗೂ ಪಾಕಿಸ್ತಾನಿಗಳಿಗೂ ಇಷ್ಟೇ ಸಂಬಂಧವೆಂದು ತಿಳಿದಿದ್ದರೆ, ಸ್ವಲ್ಪ ತಾಳಿ. ಪಾಕಿಸ್ತಾನದ ಜೊತೆ ಶಾರುಖ್‌ಗಿರುವ ಹೊಸ ನಂಟು ನಿಜಕ್ಕೂ ಆಶ್ಚರ್ಯಹುಟ್ಟಿಸುವಂಥದ್ದು.

    ಈಗ ಪಾಕಿಸ್ತಾನದ ಬೇಹುಗಾರಿಕಾ ಇಲಾಖೆ ಐಎಸ್ಐ ಮುಖ್ಯಸ್ಥನಾಗಿರುವ ಲೆ.ಜೆ. ಜಾಹಿರ್-ಉಲ್-ಇಸ್ಲಾಂ ಅವರು ಬಾಲಿವುಡ್ ನಟ ಶಾರುಖ್ ಖಾನ್‌ಗೆ ಬಹುದೂರದ ಸಂಬಂಧಿ. ಈ ಸಂಬಂಧದ ಸಂಕೋಲೆಯನ್ನು ಬಿಡಿಸಬೇಕಿದ್ದರೆ ಸ್ವಾತಂತ್ರ್ಯಪೂರ್ವದ ಕಾಲಕ್ಕೆ ಜಿಗಿಯಬೇಕು. ಭಾರತ ಮತ್ತು ಪಾಕಿಸ್ತಾನ ಬೇರೆಬೇರೆಯಾದಾಗ ಈ ಕುಟುಂಬದ ಕೆಲವರು ಪಾಕಿಸ್ತಾನದಲ್ಲಿ ಉಳಿದರೆ, ಕೆಲವರು ಭಾರತದಲ್ಲಿ ಉಳಿದರು.

    ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿ, ಎರಡನೇ ವಿಶ್ವ ಯುದ್ಧದಲ್ಲಿ ಭಾಗವಹಿಸಿದ್ದ ಶಾಹ್ ನವಾಜ್ ಖಾನ್ ಅವರ ಸಹೋದರನ ಮಗನೇ ಜಾಹಿರ್-ಉಲ್-ಇಸ್ಲಾಂ. ಇಸ್ಲಾಂ ಅವರ ಅಪ್ಪ ಕೂಡ ಪಾಕಿಸ್ತಾನದ ಭೂಸೇನೆಯಲ್ಲಿ ಸೇವೆ ಸಲ್ಲಿಸಿದ್ದರು.

    ಶಾರುಖ್ ಖಾನ್ ಅವರು ತಾಯಿ ದಿ.ಲತೀಫ್ ಫಾತಿಮಾ ಅವರನ್ನು ಶಾಹ್ ನವಾಜ್ ಖಾನ್ ಅವರು ದತ್ತುಮಗಳನ್ನಾಗಿ ಸ್ವೀಕರಿಸಿದ್ದರು. ಹಾಗಾಗಿ, ಶಾರುಖ್ ಖಾನ್ ಅವರ ಅಜ್ಜ ಶಾಹ್ ನವಾಜ್ ಖಾನ್ ಅವರು ಐಎಸ್ಐ ಮುಖ್ಯಸ್ಥ ಜಾಹಿರ್-ಉಲ್-ಇಸ್ಲಾಂ ಅವರ ಸೋದರ ಸಂಬಂಧಿಯಾಗುತ್ತಾರೆ. ವೆಬ್ ಸೈಟುಗಳಲ್ಲಿ ಪ್ರಕಟವಾದ ಶಾರುಖ್ ಅವರ ಜೀವನಚರಿತ್ರೆಯ ಪುಟಗಳಲ್ಲಿ ಈ ಸಂಬಂಧ ಬಹಿರಂಗವಾಗಿದೆ.

    English summary
    Most of the Indians and Pakistanis would be shocked after reading this article as it would reveal a shocking relation between Bollywood superstar Shahrukh Khan and Pakistan intelligence agency ISI. Don't be surprised, to get the detail information, read on.
    Saturday, March 10, 2012, 15:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X