»   » ವಿದ್ಯಾ ಬಾಲನ್, ರಾಣಿ ಮುಖರ್ಜಿ ಕೋಳಿ ಕದನ

ವಿದ್ಯಾ ಬಾಲನ್, ರಾಣಿ ಮುಖರ್ಜಿ ಕೋಳಿ ಕದನ

Posted By:
Subscribe to Filmibeat Kannada

ವಿದ್ಯಾ ಬಾಲನ್ ಮತ್ತು ರಾಣಿ ಮುಖರ್ಜಿ ಹಿಂದೊಮ್ಮೆ ಒಂದೇ ಚಿತ್ರದಲ್ಲಿ ನಟಿಸಿದ್ದವರು. ಇದೀಗ ಇಬ್ಬರ ಮಧ್ಯೆ ಮನಸ್ತಾಪ ಮೂಡಿದೆ. 'ನೋ ಒನ್ ಕಿಲ್ಡ್ ಜೆಸ್ಸಿಕಾ' ಚಿತ್ರದಲ್ಲಿ ರಾಣಿ ಮತ್ತು ವಿದ್ಯಾ ಒಟ್ಟಾಗಿ ನಟಿಸಿದ್ದರು. ಪರಿಣಿತಾ ಚಿತ್ರದ ನಂತರ ವಿದ್ಯಾ ಬಾಲನ್ ನಟಿಸಿದ ಈ ಚಿತ್ರ ಬಾಲಿವುಡ್ ನಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು.  

ಆ ಚಿತ್ರದಲ್ಲಿ ಈ ಇಬ್ಬರು ನಟಿಯರ ಕೆಮೆಸ್ಟ್ರಿ ಸಖತ್ ವರ್ಕೌಟ್ ಆಗಿತ್ತು. ಈಗ ಅದೇ ಇಬ್ಬರು ನಟಿಯರು ವೃತ್ತಿ ಸಂಬಂಧ ಕಚ್ಚಾಡತೊಡಗಿದ್ದಾರೆ. ಕೋಳಿ ಜಗಳ ಎನ್ನಬಹುದಾದರೂ ಜಗಳ ಮಾಡುವಷ್ಟು ವೇಳೆ ವಿದ್ಯಾ ಬಾಲನ್ ಗೆ ಅವರಿಗೆ ಅದ್ಹೇಗೆ ಸಿಗುತ್ತದೆ ಎಂಬುದು ಎಲ್ಲರ ಆಶ್ಚರ್ಯಕ್ಕೆ ಕಾರಣ. ರಾಣಿ ಮುಖರ್ಜಿ ಬಿಡಿ, ಅವರಿಗೀಗ ಚಿತ್ರಗಳಿಗಿಂತ ಮದುವೆಯೇ ಮುಖ್ಯ.

ಆದರೆ ಈ ಇಬ್ಬರ ಮನಸ್ತಾಪದ ರಹಸ್ಯ ಇಲ್ಲಿದೆ. ರಾಣಿ ಮಾಡಬೇಕಾಗಿದ್ದ 'ಗಾನ್ ಚಕ್ಕರ್' ಚಿತ್ರದ ಪಾತ್ರ ವಿದ್ಯಾ ಪಾಲಾಗಿದ್ದರೆ ವಿದ್ಯಾ ಮಾಡಬೇಕಾಗಿದ್ದ 'ಬೇಗಮ್ ಸಮ್ರು' ಪಾತ್ರ ರಾಣಿ ಪಾಲಾಗಿದೆ. ಪರಸ್ಪರ ತಪ್ಪಿದ ಅವೆರಡೂ ಪಾತ್ರಗಳು ಇಬ್ಬರಿಗೂ ಇಷ್ಟವಾಗಿದ್ದವು. ಹಾಗಾಗಿ, ಇಬ್ಬರಲ್ಲಿ ಒಡಕು ಮೂಡಿದೆ ಅಷ್ಟೇ. (ಏಜೆನ್ಸೀಸ್)

English summary
Vidya Balan and Rani Mukherjee who shared sizzling chemistry in the movie No One Killed Jessica are now involved in a cat-fight. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada