»   » ಟ್ವಿಟ್ಟರ್ ನಲ್ಲಿ ಅಮಿತ್ ಜೊತೆ ಅಭಿಷೇಕ್ ಜಟಾಪಟಿ

ಟ್ವಿಟ್ಟರ್ ನಲ್ಲಿ ಅಮಿತ್ ಜೊತೆ ಅಭಿಷೇಕ್ ಜಟಾಪಟಿ

Posted By:
Subscribe to Filmibeat Kannada

ಟ್ವಿಟ್ಟರ್ ಮೂಲಕ ಮಾತುಕತೆ ನಡೆಸುವ ಸ್ಟಾರ್ ಗಳಲ್ಲಿ ಬಾಲಿವುಡ್ ಛೋಟಾ ಬಚ್ಚನ್ ಅಭಿಷೇಕ್ ಕೂಡ ಒಬ್ಬರು. ಆದರೆ ಇದೇ ಟ್ವಿಟ್ಟರ್ ಅವರಿಗೆ ತಿರುಗುಬಾಣವಾಗಿದೆ. ಅವರ ಅಭಿಮಾನಿಯೊಬ್ಬ ಟ್ವಿಟ್ಟರ್ ಬಳಸಿಕೊಂಡು ಅಭಿಷೇಕ್ ಅವರಿಗೆ ಅವಮಾನ ಮಾಡಿದ್ದಾನೆ. ಮೊದಲಿಗೆ ಕೋಪಗೊಂಡ ಅಭಿಷೇಕ್ ಎರಡನೇ ಬಾರಿಗೆ ಅವರಿಗೆ ತಣ್ಣಗೆ ಉತ್ತರ ನೀಡಿದ್ದಾರೆ.

ಅಭಿಮಾನಿ ಅಮಿತ್ (@amit_scabal) ಲಂಡನ್ ನಿಂದ ಅಭಿಷೇಕ್ ಅವರಿಗೆ 'ನೋ ಕ್ಲಾಸ್' ಎಂದು ಮೆಸೇಜ್ ಮಾಡಿದ್ದಾನೆ. ಅದಕ್ಕೆ ಕಾರಣ ಅಭಿ ಆತನನ್ನು ಉಪೇಕ್ಷಿಸಿದ್ದು ಎಂಬುದು ಆತನ ಹೇಳಿಕೆ. ಆತ "ನೀವು ಮತ್ತು ನಿಮ್ಮ ಕುಟುಂಬವೊಮ್ಮೆ ಲಂಡನ್ನಿನ ನೈಟ್ಸ್ ಬ್ರಿಡ್ಜ್ ನಲ್ಲಿ ಸಿಕ್ಕಾಗ ನಿಮ್ಮ ತಂದೆ ಮತ್ತು ತಾಯಿ ನನ್ನನ್ನು ಚೆನ್ನಾಗಿ ಮಾತನಾಡಿಸಿದ್ದಾರೆ. ಆದರೆ ನೀವು ನಿರಾಸಕ್ತಿ ತೋರಿಸಿದ್ದೀರಿ" ಎಂದಿದ್ದಾನೆ. ಅದಕ್ಕೇ ಆತ ಜೂನಿಯರ್ ಬಚ್ಚನ್ ಲೋಕಲ್, ಕ್ಲಾಸ್ ಅಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾನೆ.

ಇದಕ್ಕೆ ಕೋಪಗೊಂಡ ಅಭಿ, "ಇನ್ನೂ ಬಾಲಿವುಡ್ ನಲ್ಲಿ ಹೆಜ್ಜೆಯಿಡುತ್ತಿರುವ ನನ್ನ ಬಗ್ಗೆ ಕ್ಲಾಸ್ ಹೌದೋ ಅಲ್ಲವೋ ಎಂದೆಲ್ಲಾ ನಿರ್ಧರಿಸಲು ನಿನ್ನಿಂದ ಸಾಧ್ಯವಿಲ್ಲ. ಅಷ್ಟೇ ಅಲ್ಲ, ನನಗೆ ಕೆಲವೊಂದು ವಿಷಯಗಳಲ್ಲಿ ಆಸಕ್ತಿಯೂ ಇಲ್ಲ" ಎಂದಿದ್ದಾರೆ. ಆದರೆ ಮತ್ತೊಮ್ಮೆ ಸ್ವಲ್ಪ ಮೃದು ಧೋರಣೆ ತಳೆದಿರುವ ಅಭಿ, "ನಾನೂ ಯಾರನ್ನೂ ಉಪೇಕ್ಷೆ ಮಾಡಿ ನೋಯಿಸುವ ಮನಸ್ಥಿತಿ ಹೊಂದಿಲ್ಲ. ಬಹುಶಃ ನಾನು ಆಗ ಇನ್ನೇನನ್ನೋ ಯೋಚಿಸುತ್ತಿದ್ದಿರಬಹುದು. ಆದರೆ ಅಷ್ಟಕ್ಕೇ ನೀವು ನನಗೆ ಹಾಗೆ ಹೇಳಬೇಕಾಗಿರಲಿಲ್ಲ" ಎಂದು ಉತ್ತರಿಸಿದ್ದಾರೆ. (ಏಜೆನ್ಸೀಸ್)

English summary
Abhishek Bachchan fights with a twitter user for calling him no class. Abhishek allegedly ignored the user in London while shopping. An angry Abhishek also slammed him back.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X