»   » ಕೈ ಕಚ್ಚಿದ ಹುಡುಗಿಗೆ ಜಾನ್ ಅಬ್ರಹಾಂ ಕಪಾಳಮೋಕ್ಷ

ಕೈ ಕಚ್ಚಿದ ಹುಡುಗಿಗೆ ಜಾನ್ ಅಬ್ರಹಾಂ ಕಪಾಳಮೋಕ್ಷ

Posted By:
Subscribe to Filmibeat Kannada
John Abraham
ಮಂಗಳೂರಿಗೆ ಮಳಿಗೆ ಉದ್ಘಾಟನೆಗೆಂದು ಬಂದಿದ್ದಾರೆ ಬಾಲಿವುಡ್ ನಟ ಜಾನ್ ಅಬ್ರಹಾಂ. ಮೊದಲೇ ಸಾಕಷ್ಟು ಸುದ್ದಿ ಹಬ್ಬಿದ್ದರಿಂದ ಜಾನ್ ಅವರನ್ನು ನೋಡಲು ಬಹಳಷ್ಟು ಅಭಿಮಾನಿಗಳು ನೆರೆದಿದ್ದರು. ಆ ವೇಳೆ ಅಭಿಮಾನಿ ಹುಡುಗಿಯೊಬ್ಬಳು (ಅಭಿಮಾನ ಹೆಚ್ಚಾಗಿ?!) ಜಾನ್ ಕೈ ಕಚ್ಚಿದ್ದಾಳೆ. ಕೋಪಗೊಂಡ ಜಾನ್ ಆಕೆಯ ಕೆನ್ನೆಗೆ 'ಫಟಾರ್' ಎಂದು ಭಾರಿಸಿದ್ದಾನೆ.

ಜಾನ್ ಅಬ್ರಹಾಂ ಬಾಲಿವುಡ್ ನ ಸುರಸುಂದರಾಂಗ. ಇತ್ತೀಚಿನ 'ದೇಸಿ ಬಾಯ್ಸ್' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿಯಾಗಿದೆ. ಹಾಗಾಗಿ ಜನರಿಗೆ ಮೊದಲಿಗಿಂತಲೂ ಜಾನ್ ಕ್ರೇಜ್ ಜಾಸ್ತಿಯಾಗಿದೆ. ಅದರಲ್ಲೂ ಹುಡುಗಿಯರಿಗೆ ಜಾನ್ ಅಬ್ರಹಾಂ ಕನಸಿನ ರಾಜಕುಮಾರ. ಆದರೂ ಕೈಗೆ ಸಿಕ್ಕರೆ ಕಚ್ಚಿಬಿಡುವಷ್ಟು ಅಭಿಮಾನವಿದೆ ಎಂಬುದು ಸ್ವತಃ ಜಾನ್ ಗೂ ತಿಳಿದಿರಲಿಲ್ಲವೇನೋ!

ಒಟ್ಟಿನಲ್ಲಿ, ಒಮ್ಮೆಲೆ ಮಂಗಳೂರಿನಲ್ಲಿ 50 ಸಾವಿರಕ್ಕಿಂತ ಹೆಚ್ಚು ಜಾನ್ ಅಬ್ರಹಾಂ ಅಭಿಮಾನಿಗಳು ಸೇರಿ ನೂಕುನುಗ್ಗಲು ಪ್ರಾರಂಭವಾಗಿದೆ. ಕಕ್ಕಾಬಿಕ್ಕಿಯಾದ ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲಾಗದೇ ಒದ್ದಾಡಿ ಕೊನೆಗೆ ಲಾಠಿ ಪ್ರಹಾರ ಮಾಡಿದ್ದಾರೆ. ನಂತರ ಅಭಿಮಾನಿಗಳ ಗುಂಪು ಚದುರಿದೆ. ಅಷ್ಟರಲ್ಲಿ ಜಾನ್ ಕೈ, ಹುಡುಗಿಯ ಬಾಯಿ ಪಾಲಾಗಿದೆ. ಹುಡುಗಿಯ ಕೆನ್ನೆ, ಜಾನ್ ಕೈ ಹೊಡೆತಕ್ಕೆ ತುತ್ತಾಗಿದೆ. (ಒನ್ ಇಂಡಿಯಾ ಕನ್ನಡ)

English summary
Bollywood Actor John Abraham came to Mangalore for inauguration of a Mall. A Girl, one of his fan bites John's hand. Then, John Abraham Slapped that girl. 
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X