For Quick Alerts
  ALLOW NOTIFICATIONS  
  For Daily Alerts

  ಮೇ ತಿಂಗಳಾಂತ್ಯಕ್ಕೆ ಕರಾವಳಿ ಚೆಲುವೆ ಶಿಲ್ಪಾಗೆ ಡೆಲಿವರಿ

  By Rajendra
  |

  ಬಾಲಿವುಡ್ ಬೆಡಗಿ ಹಾಗೂ ಕರಾವಳಿ ಚೆಲುವೆ ಶಿಲ್ಪಾ ಶೆಟ್ಟಿ ತುಂಬು ಗರ್ಭಿಣಿ ಎಂಬುದು ಇಡೀ ಜಗತ್ತಿಗೆ ಗೊತ್ತಿರುವ ಸಂಗತಿ. ಆಕೆಯ ಡೆಲಿವರಿ ಡೇಟ್ ಯಾವಾಗ ಎಂದು ಆಕೆಯ ಅಭಿಮಾನಿಗಳು ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ. ಈ ಬಗ್ಗೆ ಆಕೆಯ ಪತಿ ರಾಜ್ ಕುಂದ್ರಾ ಸುಳಿವು ನೀಡಿದ್ದು, ಶಿಲ್ಪಾರ ಡೆಲಿವರಿ ಡೇಟನ್ನು ಬಹಿರಂಗಪಡಿಸಿದ್ದಾರೆ.

  "ಶಿಲ್ಪಾ ಶೆಟ್ಟಿ ಈಗ ಏಳು ತಿಂಗಳ ಗರ್ಭಿಣಿ. ನಾವಿಬ್ಬರೂ ಮಗುವಿನ ನಿರೀಕ್ಷೆಯಲ್ಲಿದ್ದೇವೆ. ಮೇ ತಿಂಗಳಾಂತ್ಯಕ್ಕೆ ಶಿಲ್ಪಾ ಮಗುವಿಗೆ ಜನ್ಮ ನೀಡುವ ನಿರೀಕ್ಷೆ ಇದೆ" ಎಂದು ರಾಜ್ ತಿಳಿಸಿದ್ದಾರೆ. ಅಭಿಮಾನಿಗಳಿಂದ ಈಗಾಗಲೆ ಶಿಲ್ಪಾಗೆ ಶುಭಹಾರೈಕೆಗಳ ಮಹಾಪೂರವೇ ಹರಿದುಬರುತ್ತಿದೆ.

  ಕಳೆದ ವರ್ಷ ಡಿಸೆಂಬರ್‌ನಲ್ಲಿ ಶಿಲ್ಪಾ ಶೆಟ್ಟಿ ಗರ್ಭಿಣಿ ಎಂಬ ಅಂಶ ಬಯಲಾಗಿತ್ತು. ಬಳಿಕ ಶಿಲ್ಪಾ ಶೆಟ್ಟಿ ಕೂಡ ಅಷ್ಟಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಎಲ್ಲೋ ಅಲ್ಲೊಂದು ಇಲ್ಲೊಂದು ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಂಡು ಸುದ್ದಿ ಮಾಡಿದ್ದರು. (ಏಜೆನ್ಸೀಸ್)

  English summary
  Many fans of actress Shilpa Shetty are curious to know about when she is going to deliver her first baby. Here is a news for all those people. Her husband, businessman Raj Kundra revealed that she would give birth to her baby in May-end.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X