»   » ಕರೀನಾ ನಿರ್ದೇಶನದಲ್ಲಿ ಕರಣ್ ಜೋಹರ್ ಚಿತ್ರ?

ಕರೀನಾ ನಿರ್ದೇಶನದಲ್ಲಿ ಕರಣ್ ಜೋಹರ್ ಚಿತ್ರ?

Posted By:
Subscribe to Filmibeat Kannada

ಅಂದುಕೊಂಡಂತೆ ನಡೆದರೆ ಸದ್ಯದಲ್ಲೇ ಕರೀನಾ ಕಪೂರ್ ನಿರ್ದೇಶಕಿ ಆಗಲಿದ್ದಾರೆ. ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ಅವರಿಗಾಗಿ ನಟಿ ಕರೀನಾ ಕಪೂರ್ ಚಿತ್ರವೊಂದನ್ನು ನಿರ್ದೇಶಿಸಲಿದ್ದು ಇದು 'ಧರ್ಮ ಪ್ರೊಡಕ್ಷನ್ಸ್' ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿದೆ.

ತಾತ ರಾಜ್ ಕಪೂರ್ ಅವರಿಂದ ನಿರ್ದೇಶನದ ಪ್ರತಿಭೆ ಕರೀನಾ ಕಪೂರ್ ಅವರಿಗೆ ಬಳುವಳಿಯಾಗಿ ಬಂದಿದೆ. ಇಷ್ಟು ದಿನ ಕ್ಯಾಮರಾ ಮುಂದೆ ನಟಿಸುತ್ತಿದ್ದ ನಟಿ ಕರೀನಾ ಈಗ ಕ್ಯಾಮೆರಾ ಹಿಂದೆ ನಿಂತು ಆಕ್ಷನ್ ಕಟ್ ಹೇಳಲಿದ್ದಾರೆ. ಅವರ ನಿರ್ದೇಶನದ ಪ್ರತಿಭೆ 'ಏಕ್ ಮೈ ಔರ್ ಏಕ್ ತೂ' ಚಿತ್ರದ ಚಿತ್ರೀಕರಣದ ವೇಳೆ ಬಹಿರಂಗಗೊಂಡಿದೆ.

ಕರಣ್ ಜೋಹರ್ ತಮ್ಮ ಸ್ನೇಹಿತೆ ಕರೀನಾ ಕಪೂರ್ ಅವರಲ್ಲಿ ಅಡಗಿದ್ದ ನಿರ್ದೇಶನದ ಪ್ರತಿಭೆಯಿಂದ ಸಖತ್ ಖುಷಿಯಾಗಿದ್ದಾರೆ. ತಮ್ಮ ನಿರ್ಮಾಣದ ಮುಂದಿನ ಚಿತ್ರದಲ್ಲಿ ಕರೀನಾ ನಿರ್ದೇಶನಕ್ಕೆ ಛಾನ್ಸ್ ಕೊಡುವುದಾಗಿ ಹೇಳಿದ್ದಾರೆ. ಕರೀನಾಗೆ ಖುಷಿ. ಕರಣ್ ಜೋಹರ್ ಗೆ ಡಬ್ಬಲ್ ಖುಷಿ. ಬಾಲಿವುಡ್ ಪ್ರೇಕ್ಷಕರಿಗೆ ಚಿತ್ರ ಚೆನ್ನಾಗಿದ್ದರೆ ಡಬಲ್ ಧಮಾಕಾ...(ಏಜೆನ್ಸೀಸ್)

English summary
Kareena Kapoor to turn filmmaker as she might direct a film for her friend Karan Johar, for Dharma Production.
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X