»   » ಹಲೋ ಮ್ಯಾಗಜಿನ್ ನಲ್ಲಿ ಬೆತ್ತಲಾದ ಐಶ್ವರ್ಯ ರೈ!

ಹಲೋ ಮ್ಯಾಗಜಿನ್ ನಲ್ಲಿ ಬೆತ್ತಲಾದ ಐಶ್ವರ್ಯ ರೈ!

Posted By:
Subscribe to Filmibeat Kannada

ಪ್ರತಿಷ್ಠಿತ 'ಹಲೋ ಮ್ಯಾಗಜಿನ್' ಏಪ್ರಿಲ್ ಸಂಚಿಕೆಯಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ ಬೆತ್ತಲಾಗಿದ್ದಾರೆ. ಅರೆ ಇದೇನಿದು!ಎಂದು ಆಶ್ಚರ್ಯಪಡುವ ಅವಶ್ಯಕತೆಯಿಲ್ಲ. ಅವರು ಬೆತ್ತಲಾಗಿರುವುದು ದೈಹಿಕವಾಗಿ ಅಲ್ಲ, ಮಾನಸಿಕವಾಗಿ! ಹೌದು ಐಶ್ವರ್ಯ ರೈ ತಮ್ಮ ಸುಖ ದುಃಖ, ನೋವು ನಲಿವುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರಂತೆ.

ಐಶ್ವರ್ಯ ರೈ ಅವರನ್ನು ಖ್ಯಾತ ಅಂಕಣಗಾರ್ತಿ ಶೋಭಾ ಡೇ ಪತ್ರಿಕೆಗಾಗಿ ಸಂದರ್ಶಿಸಿದ್ದಾರೆ. ಮೂರನೇ ವಾರ್ಷಿಕೋತ್ಸವದ ಪ್ರಯುಕ್ತ ಪತ್ರಿಕೆ ವಿಶೇಷ ಸಂಚಿಕೆಯನ್ನು ಹೊರತರುತ್ತಿದೆ. ಕಣ್ಣಿಗೆ ರಾಚುವ, ಮನಕ್ಕೆ ತಂಪೆಯುವ ಐಶ್ವರ್ಯ ರೈ ವರ್ಣಚಿತ್ರದ ಜಾಹೀರಾತನ್ನು ಪ್ರಕಟಿಸಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ.

'ಶೋಭಾ ಡೇ ಅವರೊಂದಿಗೆ ಇದುವರೆಗೂ ಪ್ರಕಟವಾಗದ ಐಶ್ವರ್ಯ ರೈ ಸಂದರ್ಶನ', 'ಐಶ್ವರ್ಯ ರೈ ಬಚ್ಚನ್ ಅವರೊಂದಿಗೆ ವಾರ್ಷಿಕೋತ್ಸವ ಸಂಭ್ರಮ' ಎಂಬ ಶೀರ್ಷಿಕೆಗಳೊಂದಿಗೆ ಪತ್ರಿಕೆ ಗಮನ ಸೆಳೆಯುತ್ತದೆ. ಐಶ್ವರ್ಯ ರೈ ಎಷ್ಟರ ಮಟ್ಟಿಗೆ ಮಾನಸಿಕವಾಗಿ ಬೆತ್ತಲಾಗಿದ್ದಾರೆ ಎಂಬುದನ್ನು ಸಂದರ್ಶನ ಬಹಿರಂಗಪಡಿಸಲಿದೆ.

ಮಾಜಿ ಪ್ರೇಮಿಗಳಾದ ಸಲ್ಮಾನ್ ಖಾನ್ ಮತ್ತು ವಿವೇಕ್ ಒಬೆರಾಯ್ ಬಗ್ಗೆ ಮಾತನಾಡಿದ್ದಾರೆಯೇ? ತಾಯಿಯಾಗುವುದು ಯಾವಾಗ? ಎಂಬಅಂಶಗಳ ಬಗ್ಗೆ ಐಶೂ ಬಾಯ್ಬಿಟ್ಟಿದ್ದಾರೆಯೇ? ಪತ್ರಿಕೆ ಕೈಸೇರುವವರೆಗೂ ಕುತೂಹಲ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಐಶೂ ಅಭಿಮಾನಿಗಳು ಪತ್ರಿಕೆಯ ನಿರೀಕ್ಷೆಯಲ್ಲಿದ್ದಾರೆ. 'ಹಲೋ ಮ್ಯಾಗಜಿನ್' ವಿಶೇಷ ಸಂಚಿಕೆಯ ಬೆಲೆ ನೂರು ರೂಪಾಯಿ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada