Just In
Don't Miss!
- News
ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶಾರುಖ್ ಸಲ್ಮಾನ್ ಹಗೆ ಕೊಲ್ಲುವುದೇ ಮಾಧುರಿ ನಗೆ?
ಬಾಲಿವುಡ್ ನ ಮರೆಯಲಾಗದ ಮಂದಹಾಸ ಮಾಧುರಿ ಮತ್ತೊಮ್ಮೆ ತಮ್ಮ ಜಾದು ಹರಡಲು ಸಿದ್ಧರಾಗುತ್ತಿದ್ದಾರೆ. ಈ ಬಾರಿ ಕಿಂಗ್ ಖಾನ್ ಶಾರುಖ್ ಹಾಗೂ ಸಲ್ಲೂ ಮಿಯಾ ಜೋಡಿಯಾಗಿ ಒಟ್ಟಿಗೆ ತೆರೆಮೇಲೆ ರೋಮಾನ್ಸ್ ಮಾಡುವ ತಮ್ಮ ಬಹುದಿನ ಬಯಕೆಯನ್ನು ಹೊರಹಾಕಿದ್ದಾರೆ. ಎರಡು ಮುದ್ದಾದ ಮಕ್ಕಳ ತಾಯಿಯಾಗಿರುವ ಮಾಧುರಿ ದೀಕ್ಷಿತ್ ಗೆ ಶಾರುಖ್ ಹಾಗೂ ಸಲ್ಮಾನ್ ಜೋಡಿ ನಟಿಸುವುದೆಂದರೆ ಎಲ್ಲಿಲ್ಲದ ಆನಂದವಂತೆ.
ಈ ಇಬ್ಬರು ಖಾನ್ ಗಳ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಮಾಧುರಿ, ಸದಾ ಎಣ್ಣೆ ಸಿಗೇಕಾಯಿ ಥರಾ ಕಚ್ಚಾಡೋ ಇಬ್ಬರನ್ನು ಒಟ್ಟಿಗೆ ಸೇರಿಸುವ ತಂತ್ರ ಏನಾದರೂ ಮಾಡುತ್ತಿದ್ದಾರಾ? ಇದು ಸಾಧ್ಯನಾ ಎಂದು ಬಾಲಿವುಡ್ ಮಂದಿ ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುತ್ತಿದ್ದಾರೆ. ಆದರೆ, ನಗೆ ಕೊಲ್ಲುವಂತೆ ಹಗೆ ಕೊಲ್ಲಲಾರದು ಎಂಬ ಮಾತಿನಂತೆ ಮಾಧುರಿಯ ಮಂದಹಾಸ ಇಬ್ಬರ ಹಗೆಯನ್ನು ದೂರ ಮಾಡಿದರೂ ಆಶ್ಚರ್ಯವಿಲ್ಲ.
ಈ ಹಿಂದೆ ಸಲ್ಮಾನ್ ಜೋಡಿಯಾಗಿ ಸಾಜನ್, ಹಮ್ ಆಪ್ಕೆ ಹೈ ಕೌನ್ ಚಿತ್ರದಲ್ಲಿ ಹಾಗೂ ಶಾರುಖ್ ಜೋಡಿಯಾಗಿ ಅಂಜಾಮ್, ದಿಲ್ ತೋ ಪಾಗಲ್ ಹೈ, ಕೋಯ್ಲಾ, ಗಜ ಗಾಮಿನಿ ಹಾಗೂ ದೇವದಾಸ್ ಮುಂತಾದ ಬಿಗ್ ಹಿಟ್ ಚಿತ್ರಗಳನ್ನು ಮಾಧುರಿ ನೀಡಿದ್ದಾರೆ.
ಸಲ್ಮಾನ್ ಕುಣಿತ ಎಂದರೆ ನನ್ನ ಮಕ್ಕಳಿಗೂ ಇಷ್ಟ. ಶಾರುಖ್ ಅಭಿನಯ ಕೂಡಾ ಮೆಚ್ಚುತ್ತಾರೆ. ಈ ದಿನಗಳಲ್ಲಿ ಸಲ್ಮಾನ್ ಅದೃಷ್ಟ ರೇಖೆ ಚೆನ್ನಾಗಿದ್ದು, ಒಳ್ಳೆ ಸಕ್ಸಸ್ ಸಿಗುತ್ತಿದೆ. ಒಳ್ಳೆ ಸ್ಕ್ರಿಪ್ಟ್ ಇದ್ದರೆ ನಾನು ಇಬ್ಬರ ಜೊತೆ ನಟಿಸಲು ಇಷ್ಟಪಡುತ್ತೇನೆ ಎಂದು ಮಾಧುರಿ ಹೇಳುತ್ತಾರೆ.
ಹಮ್ ತುಮರೇ ಹೈ ಸನಂ ನಲ್ಲಿ ಶಾರುಖ್, ಸಲ್ಮಾನ್ ಮಾಧುರಿ ಜೋಡಿ ಜನ ಮೆಚ್ಚುಗೆ ಗಳಿಸಿತ್ತು. ಇದಲ್ಲದೆ ಕೆಲವು ಶಾರುಖ್ ಮಾಧುರಿ ಚಿತ್ರಗಳಲ್ಲಿ ಅತಿಥಿ ನಟನಾಗಿ ಸಲ್ಮಾನ್ ಕಾಣಿಸಿಕೊಂಡಿದ್ದರು. ನಾವು ಮೂವರು ಇದ್ದರೆ ಆ ಚಿತ್ರ ಭರ್ಜರಿ ಯಶಸ್ಸು ಖಂಡಿತ ಎಂಬುದು ಮಾಧುರಿ ಮಾತು. ಆದರೆ, ಮೂವರನ್ನು ಒಟ್ಟುಗೂಡಿಸಿ ಸಿನಿಮಾ ನಿರ್ಮಿಸುವ ಸಾಹಸಕ್ಕೆ ಯಾವ ನಿರ್ಮಾಪಕ ಕೈ ಹಾಕುತ್ತೇನೆ ಎಂಬುದು ಸದ್ಯದ ಕುತೂಹಲದ ಸಂಗತಿ.