For Quick Alerts
ALLOW NOTIFICATIONS  
For Daily Alerts

125 ಕೋಟಿ ಹಾಕಿ 500 ಕೋಟಿ ಎತ್ತುವ ಆಸೆ ಕಿಂಗ್ ಖಾನ್ ಗೆ

By Mahesh
|

ಈಗ ಎಲ್ಲೆಡೆ ರಾ.ಒನ್ ಚಿತ್ರದ್ದೇ ಜಪ. ದೀಪಾವಳಿ ಸಮಯದಲ್ಲಿ ಸುಮಾರು 3000 ಸ್ಕ್ರೀನ್ ಗಳಲ್ಲಿ ಜಿ.ಒನ್ ಹಾಗೂ ರಾ.ಒನ್ ದಾಳಿ ಮಾಡಲಿದ್ದಾರೆ. 500 ಸ್ಕ್ರೀನ್ 3Dಗೆ ಮೀಸಲಿಡಲಾಗಿದೆ.

ಕಿಂಗ್ ಖಾನ್ ಶಾರುಖ್ ಅಭಿನಯದ ಚಿತ್ರ ಪ್ರೇಕ್ಷಕರಿಗೆ ಮೆಚ್ಚುಗೆಯಾಗುತ್ತದೋ ಅಥವಾ ಫ್ಲಾಪ್ ಆಗುತ್ತದೋ ಗೊತ್ತಿಲ್ಲ.

ಆದರೆ, ನಿರ್ಮಾಪಕನಾಗಿ ಸುಮಾರು 125 ಕೋಟಿ ವೆಚ್ಚದಲ್ಲಿ ತಯಾರಿಸಿದ ಚಿತ್ರದಿಂದ ಈಗಾಗಲೇ 150 ಕೋಟಿ ರೂ.ಗೂ ಅಧಿಕ ಗಳಿಸಿದ್ದಾನೆ.

ಒಟ್ಟಾರೆ 500 ಕೋಟಿ ರು ಲಾಭ ಪಡೆಯುವ ನಿರೀಕ್ಷೆ ಹೊಂದಿರುವ ಶಾರುಖ್ ಎಲ್ಲರಿಗೂ ಮಾರ್ಕೆಟಿಂಗ್ ಪಾಠ ಹೇಳಿಕೊಟ್ಟಿದ್ದಾನೆ.

ನಿರ್ಮಾಣ ವೆಚ್ಚ: 125 ಕೋಟಿ ರು + 25 ಕೋಟಿ ರು(ಪ್ರಚಾರಕ್ಕೆ) + 150 ಕೋಟಿ(3D ಪರಿವರ್ತನೆಗೆ)

ಸಾಗರೋತ್ತರ ವ್ಯಾಪಾರ: ಯುಎಸ್ ಹಾಗೂ ಯುಕೆಯಲ್ಲಿ ಶಾರುಖ್ ಚಿತ್ರಗಳಿಗೆ ಬೇಡಿಕೆ ಇದ್ದು, ಹಿಂದಿನ ಚಿತ್ರ ಮೈ ನೇಮ್ ಇಸ್ ಖಾನ್ 35 ಕೋಟಿ ರು ಗಳಿಸಿತ್ತು. ರಾ.ಒನ್ MNIK ಗಿಂತ ಶೇ.20ರಷ್ಟು ಹೆಚ್ಚು ಗಳಿಸುವ ಸಾಧ್ಯತೆಯಿದೆ. ಜರ್ಮನಿಗೂ ಚಿತ್ರ ಡಬ್ ಆಗಿರುವುದು ವಿಶೇಷ. ವಿತರಕರ ಷೇರು ಲೆಕ್ಕದಂತೆ ಸುಮಾರು 45 ಕೋಟಿ ಗಳಿಕೆ ಖಚಿತ.

ಸ್ಯಾಟಲೈಟ್ ಹಕ್ಕುಗಳು: 40 ಕೋಟಿ ರು.

ಆಡಿಯೋ ಹಕ್ಕುಗಳು: 7ಕೋಟಿ ರು. ಐಟ್ಯೂನ್ ನಲ್ಲಿ ರಾ.ಒನ್ ಸೂಪರ್ ಹಿಟ್ ಆಗಿದೆ.

ತಮಿಳು, ತೆಲುಗು ಡಬ್ ನಿಂದ ಲಾಭ: 3ಡಿ ಹಾಗೂ 2ಡಿ ಆವೃತ್ತಿಯಲ್ಲಿ ತಮಿಳು ಹಾಗೂ ತೆಲುಗಿನಲ್ಲಿ ರಾ.ಒನ್ ತೆರೆ ಕಾಣಲಿದ್ದು, 1 ಕೋಟಿ ರು ಗಳಿಕೆ ಸಾಧ್ಯತೆಯಿದೆ. ರಜನಿಕಾಂತ್ ದೆಸೆಯಿಂದ ಲಾಭದ ಸಂಖ್ಯೆ ಹೆಚ್ಚಾಗುವ ಸಂಭವವಿದೆ.

ಭಾರತದೆಲ್ಲೆಡೆ ಗಳಿಕೆ: ಚಿತ್ರ ಬಿಡುಗಡೆಯಾಗಿ ಮೊದಲ ವಾರದಲ್ಲೇ ಒಟ್ಟಾರೆ 70 ರಿಂದ 90 ಕೋಟಿ ರು ಗಳಿಸುವ ಸಾಧ್ಯತೆಯಿದೆ ಎಂದು ಬಾಲಿವುಡ್ ನ ವಿಮರ್ಶಕರು ಲೆಕ್ಕಾಚಾರ ಹಾಕಿದ್ದಾರೆ. ಮುಂದಿನ ಎರಡು ಮೂರು ವಾರಗಳಲ್ಲಿ ಸುಲಭವಾಗಿ 40-50 ಕೋಟಿ ರು ಗಳಿಸುವ ಸಾಧ್ಯತೆಯಿದೆ.

ಒಟ್ಟಾರೆ 160 ರಿಂದ 195 ಕೋಟಿ ರು ಗಳಿಕೆಯ ಅಂದಾಜು ಲೆಕ್ಕದ ನಿರೀಕ್ಷೆಯಲ್ಲಿ ಚಿತ್ರ ತಂಡ ಇದೆ. ಆದರೆ ಶಾರುಖ್ ಖಾನ್ ಆರಂಭದಲ್ಲೇ 250 ಕೋಟಿ ರು ಗಳಿಸಿ ದಾಖಲೆ ನಿರ್ಮಿಸುವ ಉತ್ಸಾಹದಲ್ಲಿದ್ದಾರೆ. ಒಟ್ಟಾರೆ 500 ಕೋಟಿ ರು ಗಳಿಸುವ ಕನಸು ಕಾಣುತ್ತಿದ್ದಾರೆ ಕಿಂಗ್ ಖಾನ್ ಶಾರುಖ್.

English summary
Ra.One’s domestic box office collection is estimated to be Rs 100 crore But Shahrukh Khan eyes gross of Rs.500crores from most expected movie of the year. Superstar and Producer king khan has spent around Rs 125 Crores and Rs 25 to 40 crores for publicity and Rs 150 crores for 3D conversion.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more