»   » ವರ್ಷದ ನಂತರ ಮತ್ತೆ ಐಶ್ವರ್ಯಾ ರೈ ಬೆಳ್ಳಿತೆರೆಗೆ

ವರ್ಷದ ನಂತರ ಮತ್ತೆ ಐಶ್ವರ್ಯಾ ರೈ ಬೆಳ್ಳಿತೆರೆಗೆ

Posted By:
Subscribe to Filmibeat Kannada
ಬಚ್ಚನ್ ಬಹು, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಸದ್ಯ ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಅವರು ವಾಪಸ್ ಚಿತ್ರರಂಗಕ್ಕೆ ಬರುವುದು ಯಾವಾಗ ಎಂಬುದು ಎಲ್ಲರ ಪ್ರಶ್ನೆ. ಆ ಪ್ರಶ್ನೆಗೀಗ ಉತ್ತರ ಸಿಕ್ಕಿದೆ. ಇನ್ನೊಂದು ವರ್ಷದ ನಂತರ ಐಶೂ ಚಿತ್ರರಂಗಕ್ಕೆ ಮರಳಲಿದ್ದಾರೆ.

ಶಾರುಖ್ ಖಾನ್ ನಟನೆಯ, ಸಂಜಯ್ ಲೀಲಾ ಬನ್ಸಾಲಿ ಚಿತ್ರದಲ್ಲಿ ನಟಿಸಲಿರುವ ಐಶೂ, ಮುಂದಿನ ವರ್ಷಕ್ಕೆ ಕಾಲ್ ಶೀಟ್ ಕೊಟ್ಟಿದ್ದಾರೆ. ಅದಕ್ಕೂ ಮುನ್ನ ಯಾವುದೇ ಚಿತ್ರಕ್ಕೆ ಐಶೂ ಕಾಲ್ ಶೀಟ್ ಕೊಟ್ಟ ಸುದ್ದಿ ಇಲ್ಲ. ಸದ್ಯದಲ್ಲೇ ಮತ್ತೆ ಬಣ್ಣಹಚ್ಚುತ್ತಾರೆಂಬ ಸುದ್ದಿ ಹಬ್ಬಿತ್ತು. ಆದರದು ಸುಳ್ಳಾಗಿದೆ.

ಸದ್ಯಕ್ಕಂತೂ ಮಗುವಿನ ಆರೈಕೆಯಲ್ಲಿ ಹಾಗೂ ತಾಯ್ತನದಲ್ಲಿ ಸಖತ್ ಖುಷಿ ಅನುಭವಿಸುತ್ತಿರುವ ಈಕೆ ಪ್ರೇಕ್ಷಕರನ್ನು ಖುಷಿಪಡಿಸಲು ಮುಂದಿನ ವರ್ಷದವರೆಗೆ ಕಾಯಲೇಬೇಕು. ಮಗುವಿನ ಹೆಸರಿಗಾಗಿ ಜಗತ್ತಿಗೆಲ್ಲ ಬೇಡಿಕೆ ಇಟ್ಟಿದ್ದ ಬಚ್ಚನ್ ಪರಿವಾರ ಕೊನೆಗೂ ಹೆಸರು ಸಿಗದೇ ಜ್ಯೋತಿಷ್ಯದ ಮೊರೆ ಹೋಗಿರುವುದು ಸುದ್ದಿಯಾಗಿದೆ. (ಒನ್ ಇಂಡಿಯಾ ಕನ್ನಡ)

English summary
Aishwarya Rai Bachchan is busy with her newborn and has not plan to return to silver screen so soon. She is expected to make her comeback after one year.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada