For Quick Alerts
  ALLOW NOTIFICATIONS  
  For Daily Alerts

  ದಾವೂದ್ ತೋಳ ತೆಕ್ಕೆಗೆ ಬಿದ್ದ ಸೋನಾಕ್ಷಿ ಸಿನ್ಹಾ?

  By Mahesh
  |

  ಹೀಗೊಂದು ಗಾಳಿಸುದ್ದಿ ಹಬ್ಬಿದೆ. ಪಾತಕ ಲೋಕದ ಚಕ್ರವರ್ತಿ ದಾವೂದ್ ಇಬ್ರಾಹಿಂ ತೋಳ ತೆಕ್ಕೆಗೆ ಶತ್ರುಘ್ನ ಸಿನ್ಹಾ ಮಗಳು ಸೋನಾಕ್ಷಿ ಸಿನ್ಹಾ ಬೀಳುತ್ತಿದ್ದಾಳಂತೆ. ಸೋನಾಕ್ಷಿಯನ್ನು ದಾವೂದ್ ನ ಒಲವಿನ ಗೆಳತಿ ಮಾಡಲು ಕಿರುತೆರೆ ಸೀರಿಯಲ್ ಕ್ವೀನ್ ಏಕ್ತಾ ಕಪೂರ್ ಸಿದ್ಧತೆ ನಡೆಸಿದ್ದಾರಂತೆ. ಕತ್ರೀನಾ ಕೈಫ್, ಕರೀನಾ ಕಪೂರ್ ಬದಲಿಗೆ ಸೋನಾಕ್ಷಿಗೆ ಈ ಅವಕಾಶ ಸಿಕ್ಕಿರುವುದಕ್ಕೆ ಬಾಲಿವುಡ್ ಮಂದಿಗೆ ಆಶ್ಚರ್ಯವಾಗಿದೆಯಂತೆ.

  ವಿಷ್ಯ ಏನಪ್ಪಾ ಅಂದ್ರೆ, ದಾವೂದ್ ಇಬ್ರಾಹಿಂನ ಒಲವಿನ ಗೆಳತಿ ಮಂದಾಕಿನಿಯಾಗಿ ಸೋನಾಕ್ಷಿ ಸಿನ್ಹಾ ನಟಿಸುತ್ತಿದ್ದಾರೆ. ಏಕ್ತಾ ಕಪೂರ್ ನಿರ್ಮಾಣದ " ಒನ್ಸ್ ಅಪನ್ ಎ ಟೈಮ್ ಇನ್ ಮುಂಬೈ" ಚಿತ್ರದಲ್ಲಿ ಸೋನಾಕ್ಷಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಅಜಯ್ ದೇವಗನ್ ಅಭಿನಯದ "Once Upon A Time In Mumbaai" ಚಿತ್ರದ ಮೊದಲ ಭಾಗದಲ್ಲಿ ದಾವೂದ್ ಇಬ್ರಾಹಿಂಗಿಂತ ಹಾಜಿ ಮಸ್ತಾನ್ ಪಾತ್ರಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ಈಗ ಭಾಗ ಎರಡರಲ್ಲಿ ದಾವೂದ್ ಇಬ್ರಾಹಿಂ ಹಾಗೂ ಬಾಲಿವುಡ್ ನಟಿ ಮಂದಾಕಿನಿ ಪ್ರೇಮ ಕಥೆ ಅನಾವರಣಗೊಳ್ಳಲಿದೆ.

  ವಿದ್ಯಾ ಬಾಲನ್ ಅಭಿನಯದ ದ ಡರ್ಟಿ ಪಿಕ್ಚರ್ ಚಿತ್ರೀಕರಣದ ನಂತರ ಮುಂಬೈ 2 ಕೈಗೆತ್ತಿಕೊಳ್ಳಲು ಬಾಲಾಜಿ ಟೆಲಿ ಫಿಲ್ಮಂಸ್ ನ ಏಕ್ತಾ ಯೋಜಿಸಿದ್ದಾರೆ. ಸದ್ಯಕ್ಕೆ ಈ ಚಿತ್ರಕ್ಕೆ ಅಕ್ಷಯ್ ಕುಮಾರ್ ಹೆಸರನ್ನು ಅಂತಿಮ ಗೊಳಿಸುವ ಸಾಧ್ಯತೆಯಿದೆ. ಸೋನಾಕ್ಷಿ ಅಕ್ಷಯ್ ಗೆ ಜೋಡಿಯಾದರೆ ಚೆನ್ನ ಎಂದು ನಿರ್ದೇಶಕ ಮಿಲನ್ ಲೂಥಾರಿಯಾ ಹಾಗೂ ನಿರ್ಮಾಪಕಿ ಏಕ್ತಾ ನಿರ್ಧರಿಸಿದ್ದಾರೆ. ಉಳಿದ ತಾರಾಗಣವನ್ನು ನಂತರ ಆಯ್ಕೆ ಮಾಡುವ ಸಾಧ್ಯತೆಯಿದೆ.

  English summary
  Sonakshi Sinha to play Mandakani, Dawood’s love interest in Once Upon A Time in Mumbaai film produced by Balaji Tele films Ekta Kapoor.Akshay and Sonakshi are again seen has leading pair in Milan Lutharia's sequel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X