»   » ಜಾಹೀರಾತುಗಳ ಮಿಂಚಿನ ರಾಣಿ ದೀಪಿಕಾ

ಜಾಹೀರಾತುಗಳ ಮಿಂಚಿನ ರಾಣಿ ದೀಪಿಕಾ

Posted By:
Subscribe to Filmibeat Kannada

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಇದೀಗ ಜಾಹೀರಾತು ಪ್ರಪಂಚದಲ್ಲಿ ಓಡುವ ಕುದುರೆ. ಬಾಲಿವುಡ್ ಗೆ ಅಡಿಯಿಟ್ಟ ದಿನಗಳಲ್ಲಿ ದೀಪಿಕಾ ಯಾರ ಕಣ್ಣಿಗೂ ಬೀಳದ ಕಪ್ಪು ಕುದುರೆಯಾಗಿದ್ದರು. ಸಿನಿಮಾಗಳಿಗೆ ಹೋಲಿಸಿದರೆ ಜಾಹೀರಾತುಗಳಲ್ಲಿ ದೀಪಿಕಾ ಯಶಸ್ಸಿಯಾಗಿ ಮುನ್ನುಗ್ಗುತ್ತಿದ್ದಾರೆ.

2007-08ರ ಸಾಲಿಗೆ ಹೋಲಿಸಿದರೆ 2009 ಸಾಲಿನ ಜಾಹೀರಾತುಗಳಲ್ಲಿ ದೀಪಿಕಾ ಆದಾಯ ದುಪ್ಪಟ್ಟಾಗಿದೆ. ಜನಪ್ರಿಯ ಉತ್ಪನ್ನಗಳಿಂದ ಹಿಡಿದು ದುಬಾರಿ ವಸ್ತುಗಳ ತನಕ ದೀಪಿಕಾ ಜಾಹೀರಾತುಗಳಿವೆ. ದುಬಾರಿ ಕೈಗಡಿಯಾರ, ವಿಮಾನಯಾನ ಸಂಸ್ಥೆಗಳು, ಉಡುಗೆ ತೊಡುಗೆಗಳು ಸೇರಿದಂತೆ ಚೂಯಿಂಗ್ ಗಮ್ಮು ಹೀಗೆ ತರಹೆವಾರಿ ಜಾಹೀರಾತುಗಳಲ್ಲಿ ದೀಪಿಕಾ ಕಾಣಿಸುತ್ತಾರೆ ಎನ್ನುತ್ತಾರೆ ಮಾಧ್ಯಮ ವಿಶ್ಲೇಷಕರು.

ಜಾಹೀರಾತು ಉದ್ಯಮದ ಪ್ರಕಾರ, ಈ ಹಿಂದೆ ಜಾಹೀರಾತೊಂದಕ್ಕೆ ದೀಪಿಕಾ ರು.60 ಪಡೆಯುತ್ತಿದ್ದರು. ಈಗ ದೀಪಿಕಾ ಬರೋಬ್ಬರಿ ಜಾಹೀರಾತೊಂದಕ್ಕೆ ರು.1.5 ಕೋಟಿ ಚಾರ್ಜ್ ಮಾಡುತ್ತಾರೆ.
ಅದೇ ಕರೀನಾ ಮತ್ತು ಕತ್ರಿನಾ ಕೈಫ್ ಜಾಹೀರಾತೊಂದಕ್ಕೆ ಹೆಚ್ಚುಕಡಿಮೆ ರು.2 ಕೋಟಿ ಕೇಳುತ್ತಾರೆ. ಪ್ರಿಯಾಂಕ ಚೋಪ್ರಾ ಬೆಲೆ ರು.1.5ರಿಂದ 2 ಕೋಟಿ.

ದೀಪಿಕಾ ಮಾರುಕಟ್ಟೆ ಬೆಲೆ ಹೀಗೆ ಏರಿಕೆಯಾದರೆ ಮುಂದೊಂದು ದಿನ ಕರೀನಾ ಮತ್ತು ಕತ್ರಿನಾರನ್ನು ಹಿಂದಿಕ್ಕುವ ಸಾಧ್ಯತೆಗಳಿವೆ. ಇನ್ನು ದುಬಾರಿ ಉತ್ಪನ್ನಗಳ ಜಾಹೀರಾತುಗಳಲ್ಲಿ ಐಶ್ವರ್ಯ ರೈ ಅವರನ್ನು ಇವರಾರು ಮೀರಿಸಲು ಸಾಧ್ಯವೆ ಇಲ್ಲ ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು.

ಮಂತ್ರಮುಗ್ಧಗೊಳಿಸುವ ಸೌಂದರ್ಯ ಜೊತೆಗೆ ನೆರೆಮನೆ ಹುಡುಗಿ ತರಹ ಕಾಣುವ ಜಾಯಮಾನವೇ ತನಗೆ ವರವಾಗಿದೆ ಎನ್ನುತ್ತಾರೆ ದೀಪಿಕಾ. ಚಿತ್ರರಂಗದ ಬಗ್ಗೆ ನನಗೆ ಉತ್ಕಟವಾದ ಆಕಾಂಕ್ಷೆ ಇದೆ. ನನ್ನ ನಟನಾ ಕೌಶಲ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಶಕ್ತಿ ಮೀರಿ ಶ್ರಮಿಸುತ್ತೇನೆ. ಸಂಭಾವನೆ ವಿಚಾರವಾಗಿ ನನಗೆ ತೃಪ್ತಿ ಇದೆ. ಹಾಗಂತ ಇಷ್ಟಕ್ಕೆ ಸುಮ್ಮನಾಗುವಂತಿಲ್ಲ ಎನ್ನುತ್ತಾರೆ ದೀಪಿಕಾ.

ಕತ್ರಿನಾ ಅವರ ಯಶಸ್ಸಿನ ಬಗ್ಗೆ ದೀಪಿಕಾಗೆ ಮೆಚ್ಚುಗೆ ಇದೆಯಂತೆ. ಕತ್ರಿನಾ ಯಶಸ್ಸಿನ ಹಿಂದೆ ಸಾಕಷ್ಟು ಶ್ರಮ ಇದೆ ಎನ್ನುವ ದೀಪಿಕಾಗೆ ಪ್ರಿಯಾಂಕಾ ಬಗೆಗೂ ಮೆಚ್ಚುಗೆ ಇದೆ. ಜಾಹೀರಾತಿನಲ್ಲಿ ಮಿಂಚುತ್ತಿರುವ ದೀಪಿಕಾರ ಐದು ಚಿತ್ರಗಳು 2010ರಲ್ಲಿ ತೆರೆಕಾಣಲು ಸಿದ್ಧತೆ ನಡೆಸಿವೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada