»   »  ಪೋರ್ಚುಗಲ್ ಭಾಷೆ ಕಲಿತ ಐಶ್, ಹೃತಿಕ್

ಪೋರ್ಚುಗಲ್ ಭಾಷೆ ಕಲಿತ ಐಶ್, ಹೃತಿಕ್

Subscribe to Filmibeat Kannada

ಹೃತಿಕ್ ರೋಷನ್, ಐಶ್ವರ್ಯ ರೈ ಜತೆಯಾಗಿ ಅಭಿನಯಿಸುತ್ತಿರುವ ಚಿತ್ರ 'ಗುಜಾರಿಷ್'. ಈ ಚಿತ್ರವನ್ನು ಸಂಜಯ್ ಲೀಲಾ ಭನ್ಸಾಲಿ ನಿರ್ದೇಶಿಸುತ್ತಿದಾರೆ. ರು.80 ಕೋಟಿ ಭಾರಿ ಬಜೆಟ್ ನೊಂದಿಗೆ ಚಿತ್ರ ಸೆಟ್ಟೇರುತ್ತಿದೆ.

ಈ ಚಿತ್ರದ ನಾಯಕ ಮತ್ತು ನಾಯಕಿ ಪೋರ್ಚುಗಲ್ ಭಾಷೆಯನ್ನು ಮಾತನಾಡಬೇಕಾಗುತ್ತದೆ. ಚಾರಿತ್ರಿಕ ಹಿನ್ನೆಲೆಯುಳ್ಳ ಕತೆಯಾದ್ದರಿಂದ ಹೃತಿಕ್ ಮತ್ತು ಐಶ್ವರ್ಯ ರೈಗೆ ಪೋರ್ಚುಗಲ್ ಭಾಷೆ ಕಲಿಯುತ್ತಿದ್ದಾರೆ.ಇಬರಿಬ್ಬರೂ ಪೋರ್ಚುಗಲ್ ಭಾಷೆಯಲ್ಲಿ ತರಬೇತಿಯನ್ನೂ ನೀಡಲಾಗುತ್ತಿದೆ.

ಗತಕಾಲದ ನಿರ್ಮಾಣಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಚಿತ್ರಕ್ಕಾಗಿ ಭಾರಿ ಸೆಟ್ಟೆಂಗ್ ಗಳನ್ನು ಹಾಕಲಾಗುತ್ತಿದೆ. ಸವ್ಯಸಾಚಿ ಮುಖರ್ಜಿ ನೇತೃತ್ವದಲ್ಲಿ ಈ ಕೆಲಸ ನಡೆಯುತ್ತಿದೆ. ಇವರು 'ರಾವಣ', 'ಪಾ' ಚಿತ್ರಗಳಿಗೆ ಸಹ ಕಲಾ ನಿರ್ದೇಶನ ಮಾಡುತ್ತಿದ್ದಾರೆ.

ಈ ಚಿತ್ರಕ್ಕಾಗಿ ಹೃತಿಕ್ ತೂಕ ಇಳಿಸಿಕೊಳ್ಳಬೇಕು ಎಂದು ಭನ್ಸಾಲಿ ಸೂಚಿಸಿದ್ದರು. ಹಾಗಾಗಿ ಹೃತಿಕ್ ಕೆಲವು ಕಿಲೋ ತೂಕ ಇಳಿಸಿಕೊಂಡು ತೆಳ್ಳಗಾಗಿದ್ದಾರೆ. ಉದ್ದನೆಯ ಕೂದಲು ಗಡ್ಡದೊಂದಿಗೆ ಹೃತಿಕ್ ಹೊಸ ಗೆಟಪ್ ನಲ್ಲಿ ತಯಾರಾಗಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada