»   » ಮಾಧುರಿ ಜೊತೆ ಸ್ಪರ್ಧೆಗೆ ಬಿದ್ದ ಪ್ರಿಯಾಂಕ ಚೋಪ್ರಾ

ಮಾಧುರಿ ಜೊತೆ ಸ್ಪರ್ಧೆಗೆ ಬಿದ್ದ ಪ್ರಿಯಾಂಕ ಚೋಪ್ರಾ

Posted By:
Subscribe to Filmibeat Kannada

ಫ್ಯಾಷನ್ ಚಿತ್ರ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾಗೆ ಬ್ರೇಕ್ ನೀಡಿದ ಚಿತ್ರ. ಅಷ್ಟೇ ಅಲ್ಲ, ಆ ಚಿತ್ರದಲ್ಲಿ ಮಿಂಚಿದಷ್ಟು ಬೇರೆ ಯಾವ ಚಿತ್ರದಲ್ಲೂ ಮಿಂಚಿಲ್ಲ ಪ್ರಿಯಾಂಕ. ಇದೀಗ ಫ್ಯಾಷನ್ 2 ಚಿತ್ರವನ್ನು ಅದೇ ಮಧುರ್ ಭಂಡಾರ್ಕರ್ ನಿರ್ದೇಶಿಸಲು ಯೋಚಿಸುತ್ತಿದ್ದಾರೆ.

ಆ ಚಿತ್ರದಲ್ಲೂ ಲೀಡ್ ರೋಲ್ ನಲ್ಲಿ ಮಿಂಚಲು ತುದಿಗಾಲಲ್ಲಿ ಕಾಯುತ್ತಿದ್ದಾರೆ ಪ್ರಿಯಾಂಕಾ ಚೋಪ್ರಾ. ಸದ್ಯಕ್ಕೆ ಕರೀನಾ ಕಪೂರ್ ಪ್ರಧಾನ ಭೂಮಿಕೆಯಲ್ಲಿರುವ 'ಹೀರೋಯಿನ್' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಮಧುರ್, ತಮ್ಮ ಮುಂದಿನ ಚಿತ್ರ ಫ್ಯಾಷನ್ 2 ಚಿತ್ರಕಥೆಯಲ್ಲೂ ತೊಡಗಿಕೊಂಡಿದ್ದಾರೆ.

ಆದರೆ ಆ ಚಿತ್ರದ ಪ್ರಧಾನ ಪಾತ್ರಕ್ಕೆ ಅವರು ಹಿರಿಯ ನಟಿ ಮಾಧುರಿ ದೀಕ್ಷಿತ್ ಅವರನ್ನು ಸಂಪರ್ಕಿಸಿದ್ದಾರೆ. ಮಾಧುರಿಯ 'ಯಸ್' ಅಥವಾ 'ನೋ' ಮೇಲೆ ಪ್ರಿಯಾಂಕಾ ಭವಿಷ್ಯ ಅವಲಂಬಿಸಿದೆ. ಆದರೆ ಪ್ರಿಯಾಂಕಾ ಮಾತ್ರ ಫ್ಯಾಷನ್ 2 ಕನಸು ನನಸು ಮಾಡಿಕೊಳ್ಳಲು ಪಣತೊಟ್ಟಿದ್ದಾರೆ. ಮಾಧುರಿ ಒಪ್ಪಿಕೊಳ್ಳುತ್ತಾರೆ ಎಂದೇ ಬಾಲಿವುಡ್ ಪಂಡಿತರು ಹೇಳುತ್ತಿದ್ದಾರೆ. (ಏಜೆನ್ಸೀಸ್)

English summary
Priyanka Chopra is trying hard to replace Madhuri Dixit in Madhur Bhandarkar's Fashion 2.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada