ಐಟಂ ಗರ್ಲ್ ಆಗಿ ಬದಲಾದ ಬೆಡಗಿ ವಿದ್ಯಾ ಬಾಲನ್
ಊ ಲಾ ಲಾ ಎಂದು ಎದೆಯುಬ್ಬಿಸಿ ಕುಣಿದು ಪಡ್ಡೆಗಳ ಹೃದಯಕ್ಕೆ ಕಿಚ್ಚಿಟ್ಟಿದ್ದ ವಿದ್ಯಾ ಬಾಲನ್‌ಗೆ ಮತ್ತೊಂದು ಮಸ್ತ್ ಆಫರ್ ಬಂದಿದೆ. ವಿಧು ವಿನೊದ್ ಚೋಪ್ರಾ ನಿರ್ಮಾಣದ 'ಫೆರಾರಿ ಕಿ ಸವಾರಿ' ಚಿತ್ರದಲ್ಲಿ ಐಟಂ ಪಾತ್ರ ಸಿಕ್ಕಿದೆ. ಈ ಚಿತ್ರದ ಹಾಡಿನಲ್ಲಿ ವಿದ್ಯಾ ಗ್ಲಾಮರಸ್ ಆಗಿ ಕಾಣಿಸಲಿದ್ದಾರೆ.
ವಿದ್ಯಾ ಈ ಹಿಂದೆಂದೂ ಈ ರೀತಿಯ ಹಾಡಿನಲ್ಲಿ ಕುಣಿದಿರಲಿಲ್ಲ. ಈ ಹಾಡಿನ ಕಾನ್ಸೆಪ್ಟ್ ವಿಭಿನ್ನವಾಗಿದ್ದು ಚಿತ್ರೀಕರಣ ಮುಂಬರುವ ದಿನಗಳಲ್ಲಿ ನಡೆಯಲಿದೆ. ಈ ಹಾಡು ಬಾಲಿವುಡ್‌ನ ಮತ್ತೊಂದು ವಿಭಿನ್ನ ಐಟಂ ಹಾಡಾಗಿ ಹೊರಹೊಮ್ಮಲಿದೆ ಎಂದಿದ್ದಾರೆ ಚಿತ್ರದ ನಿರ್ದೇಶಕ ರಾಜೇಶ್ ಮಪುಸ್ಕರ್.
ಶರ್ಮಾನ್ ಜೋಷಿ ಈ ಚಿತ್ರದ ನಾಯಕ ನಟ. ಕುಟುಂಬ ಪ್ರಧಾನ ಚಿತ್ರವಾದ ಇದರಲ್ಲಿ ವಿದ್ಯಾ ಐಟಂ ಡಾನ್ಸ್ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬ ಕುತೂಹಲ ಇದ್ದೇ ಇದೆ. ಈ ಐಟಂ ಹಾಡಿಗೆ ನೃತ್ಯ ಸಂಯೋಜನೆ ಯಾರು ಮಾಡಲಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದೆ. (ಏಜೆನ್ಸೀಸ್)
More from Filmibeat
English summary
The Dirty Picture girl Vidya Balan turns Item girl in Vidhu Vinod Chopra's upcoming film Ferrari Ki Sawari. The song will be a major highlight of the Rajesh Mapuskar-directed film.


Click it and Unblock the Notifications











