»   » ಸೆಕ್ಸ್ ಗುರು ಓಶೋ ಪಾತ್ರದಲ್ಲಿ ಕಮಲ ಹಾಸನ್

ಸೆಕ್ಸ್ ಗುರು ಓಶೋ ಪಾತ್ರದಲ್ಲಿ ಕಮಲ ಹಾಸನ್

Posted By:
Subscribe to Filmibeat Kannada

'ಸೆಕ್ಸ್ ಗುರು' ಎಂದೇ ಖ್ಯಾತರಾಗಿರುವ ಓಶೋ ಜೀವನಗಾಥೆಯನ್ನು ಬೆಳ್ಳಿತೆರೆಗೆ ತರುವ ಪ್ರಯತ್ನಗಳು ನಡೆಯುತ್ತಿವೆ. ವಿಲಕ್ಷಣ, ವಿವಾದಾತ್ಮಕ ಅಧ್ಯಾತ್ಮಿಕ ಗುರು ಎಂದೇ ಓಶೋ ಜನಪ್ರಿಯರಾಗಿದ್ದರು. ಸಮಾಜವಾದ, ಮಹಾತ್ಮಾಗಾಂಧಿ, ಲೈಂಗಿಕತೆ ಕುರಿತ ಓಶೋ ಚಿಂತನೆಗಳು ಸಹ ಅಷ್ಟೇ ವಿವಾದಾತ್ಮಕವಾಗಿದ್ದವು.

ಓಶೋ ಕಾಲವಶವಾಗಿ ಎರಡು ದಶಗಳು ಸರಿದುಹೋಗಿವೆ. ಇಂದಿಗೂ ಅವರ ಪ್ರವಚನಗಳಿಗೆ ಪ್ರಭಾವಿತರಾಗುವವರ ಸಂಖ್ಯೆಗೇನು ಕಡಿಮೆಯಿಲ್ಲ. ಓಶೋ ಜೀವನಗಾಥೆಯನ್ನು ಇಟಲಿಯ ನಿರ್ದೇಶಕ ಆಂಟೋನಿನೋ ಲಕ್ಷಿನ್ ಸುಕಮೇಲಿ ಎಂಬುವವರು ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದಾರೆ.

ಆಂಟೋನಿ ಸಹ ಓಶೋ ಸಿದ್ಧಾಂತಗಳನ್ನು ನಂಬುವ ಪೈಕಿಯವ. ಕಳೆದ ಐದು ವರ್ಷಗಳಿಂದ ವಿವಿಧ ಆಶ್ರಮಗಳಿಗೆ ಭೇಟಿ ನೀಡಿ ಓಶೋ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕಲೆಹಾಕಿದ್ದಾರೆ. ಓಶೋ ಪಾತ್ರದಲ್ಲಿ ಕಮಲ್ ಹಾಸನ್ ನಟಿಸಿದರೆ ಆ ಪಾತ್ರಕ್ಕೆ ನ್ಯಾಯ ಸಲ್ಲಿಸಿದಂತಾಗುತ್ತದೆ ಎಂಬುದು ಆಂಟೋನಿ ಅಭಿಪ್ರಾಯ.

ಈಗಾಗಲೆ ಕಮಲ್ ಹಾಸನ್ ಅವರನ್ನು ಸಂಪರ್ಕಿಸಿದ್ದಾಗಿ ಬಾಲಿವುಡ್ ಮೂಲಗಳು ತಿಳಿಸಿವೆ. ಆದರೆ ಓಶೋ ಚಿತ್ರದ ಬಗ್ಗೆ ಕಮಲ್ ಅಭಿಪ್ರಾಯ ಹೊರಬಿದ್ದಿಲ್ಲ. ಒಂದು ವೇಳೆ ಕಮಲ್ ಒಪ್ಪದಿದ್ದರೆ ಓಶೋ ಪಾತ್ರಕ್ಕೆ ಬಾಲಿವುಡ್ ನಟ ಸಂಜಯ್ ದತ್ ಅವರನ್ನು ಕರೆತರುವ ಪ್ರಯತ್ನ ಮಾಡಲಾಗುತ್ತದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada