»   » ಮಲ್ಲುಗಳ ಚಿತ್ರದಲ್ಲಿ ಅಮಿತಾಬ್ ಬಿಟ್ಟಿ ನಟನೆ

ಮಲ್ಲುಗಳ ಚಿತ್ರದಲ್ಲಿ ಅಮಿತಾಬ್ ಬಿಟ್ಟಿ ನಟನೆ

Posted By:
Subscribe to Filmibeat Kannada

ಬಾಲಿವುಡ್‌ನ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಬಹುದಿನಗಳ ಕನಸು ನನಸಾಗಿದೆ. ಬಹುಬೇಡಿಕೆಯ ನಟ ಅಮಿತಾಬ್ ಇನ್ನೂ ಹೆಸರಿಡದ ಮಲಯಾಳಂ ಸಿನಿಮಾವೊಂದರಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರಂತೆ. ಅದು ಪೂರ್ತಿ ಪುಕ್ಕಟೆಯಾಗಿ. ಈ ಚಿತ್ರದಲ್ಲಿ ಮೋಹನ್ ಲಾಲ್ ಅವರೊಂದಿಗೆ ಅಭಿನಯಿಸುತ್ತಿರುವುದು ಬಚ್ಚನ್ ಸಂತೋಷ ತಂದಿದೆಯಂತೆ. ಮೋಹನ್ ಲಾಲ್ ಅವರ ನಟನೆಯನ್ನು ಹೊಗಳಿರುವ ಬಿಗ್ ಬಿ, ಮೋಹನ್‌ಲಾಲ್ ಮಲೆಯಾಳಂನ ಅದ್ಬುತ ನಟನೆಂದು ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.

ಈ ಚಿತ್ರದ ಆಭಿನಯಕ್ಕಾಗಿ ಸಂಭಾವನೆ ಬೇಡ ಅಂತಾ ನಿರ್ದೇಶಕ ರವಿಗೆ ಸೂಚಿಸಿದ್ದಾರಂತೆ. ಮೂರು ದಿನಗಳ ಗೆಸ್ಟ್ ಅಪ್ಪಿಯರನ್ಸ್ ಗಾಗಿ ಸಂಭಾವನೆ ಪಡೆಯುವುದಿಲ್ಲ ಎಂದಿದ್ದಾರಂತೆ. ಸಿನಿಮಾದ ಬಹುತೇಕ ಚಿತ್ರೀಕರಣ ಊಟಿಯ ಹಿಲ್ ಸ್ಟೇಷನ್‌ಗಳಲ್ಲಿ ನಡೆಯಲಿದೆಯಂತೆ. ಕಳೆದ ಡಿಸೆಂಬರ್‌ನಲ್ಲಿ ಆಸ್ಕರ್ ವಿಜೇತ ರಸೂಲ್ ಪೂಕುಟ್ಟಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮೋಹನ್ ಲಾಲ್ ಅವರನ್ನು ಭೇಟಿಯಾದಾಗಲೇ ಮಲಯಾಳಂ ಸಿನಿಮಾದಲ್ಲಿ ಅಭಿನಯಿಸಲು ಬಚ್ಚನ್ ನಿರ್ಧರಿಸಿದ್ದರಂತೆ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ ಎಂದು ಅಮಿತಾಬ್ ಸಂತಸ ವ್ಯಕ್ತಪಡಿಸಿದ್ದಾರೆ.

1999ರ ಕಂದಹಾರ್ ವಿಮಾನ ಅಪಹರಣ ಆಧಾರಿತ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಬಿಗ್ ಬಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಕನ್ನಡದ ಅಮೃತಧಾರೆ ಚಿತ್ರದಲ್ಲಿ ಅಮಿತಾಬ್ ಕಾಣಿಸಿಕೊಂಡಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada