»   » ಕಿಂಗ್ ಖಾನ್ ಜೋಡಿ ಐಶ್ವರ್ಯಾ ಮತ್ತೆ ಬೆಳ್ಳಿತೆರೆಗೆ

ಕಿಂಗ್ ಖಾನ್ ಜೋಡಿ ಐಶ್ವರ್ಯಾ ಮತ್ತೆ ಬೆಳ್ಳಿತೆರೆಗೆ

Posted By:
Subscribe to Filmibeat Kannada

ಮಾಜಿ ವಿಶ್ವಸುಂದರಿ, ಬಚ್ಚನ್ ಕುಟುಂಬದ ಮುದ್ದಿನ ಸೊಸೆ ಐಶ್ವರ್ಯಾ ರೈ ಸದ್ಯ ಬೇಟಿ 'ಬಿ' ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಅವರು ವಾಪಸ್ ಚಿತ್ರರಂಗಕ್ಕೆ ಬರುವುದು ಯಾವಾಗ ಎಂಬ ಪ್ರಶ್ನೆಗೆ ಶಾರುಖ್ ಖಾನ್ ನಟನೆಯ, ಸಂಜಯ್ ಲೀಲಾ ಬನ್ಸಾಲಿ ಚಿತ್ರದಲ್ಲಿ ಐಶೂ ನಟಿಸಲಿದ್ದಾರೆ ಎಂದು ಕಳೆದ ವರ್ಷವೇ ಒನ್ ಇಂಡಿಯಾ ಕನ್ನಡದಲ್ಲಿ ಪ್ರಕಟಿಸಿದ್ದೆವು.

ಆದರೆ, ಹೊಸ ಸುದ್ದಿ ಪ್ರಕಾರ ಸಂಜಯ್ ಲೀಲಾ ಬನ್ಸಾಲಿ ಚಿತ್ರಕ್ಕೂ ಮುನ್ನ ಕಿಂಗ್ ಖಾನ್ ಹಾಗೂ ಐಶ್ ಇನ್ನೊಂದು ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಶ್ರೀರಾಮ್ ರಾಘವನ್ ಅವರ 'ಹ್ಯಾಪಿ ಬರ್ಥಡೇ' ಚಿತ್ರದಲ್ಲಿ ಶಾರುಖ್ ಗೆ ಜೋಡಿಯಾಗಿ ಐಶ್ವರ್ಯಾ ನಟಿಸುವುದು ಖಾತ್ರಿಯಾಗಿದೆ.

ಮೊದಲಿಗೆ ಜಾನ್ ಅಬ್ರಹಾಂ ನಟಿಸಬೇಕಿದ್ದ ಚಿತ್ರ ಈಗ ಶಾರುಖ್ ಪಾಲಾಗಿದೆ. ವೈಜ್ಞಾನಿಕ ಕಥಾ ಹಂದರವಿರುವ ಹ್ಯಾಪಿ ಬರ್ಥಡೇ ಚಿತ್ರಕ್ಕೆ ಗೌರಂಗ್ ದೋಷಿ ಸಾಕಷ್ಟು ಹಣ ಸುರಿಯಲು ಸಿದ್ಧರಾಗಿದ್ದಾರೆ.

ಆದರೆ, ಈ ಚಿತ್ರಕ್ಕೆ ಐಶ್ವರ್ಯಾ ಒಪ್ಪಿರುವ ಬಗ್ಗೆ ಇನ್ನೂ ಅನುಮಾನಗಳಿದೆ. ಗೆಳೆಯ ಸಂಜಯ್ ಅವರ ಕನಸಿನ ಕೂಸು 'ಬಾಜಿರಾವ್ ಮಸ್ತಾನಿ' ಚಿತ್ರದ ನಂತರವೇ ಮುಂದಿನ ಚಿತ್ರ ಒಪ್ಪಿಕೊಳ್ಳುವುದಾಗಿ ಐಶ್ವರ್ಯಾ ಹಿಂದೊಮ್ಮೆ ಹೇಳಿದ್ದರು. ಆದರೆ, ಶ್ರೀರಾಮ್ ಮಾತ್ರ ಶಾರುಖ್ ಹಾಗೂ ಐಶ್ ಜೋಡಿಗೆ ನಿರ್ದೇಶನ ನೀಡಲು ಸರ್ವಸಿದ್ಧರಾಗಿದ್ದಾರೆ.

English summary
Aishwarya Rai Bachchan will reportedly make a comeback in film, post delivery with Sriram Raghavan’s film Happy Birthday opposite Shahrukh Khan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada