For Quick Alerts
  ALLOW NOTIFICATIONS  
  For Daily Alerts

  ಸಂಸಾರ ಸಮೇತ ಭಾರತಕ್ಕೆ ಮರಳಲಿರುವ ಮಾಧುರಿ

  By Rajendra
  |

  ಧಕ್ ಧಕ್ ಗರ್ಲ್ ಎಂದೇ ಖ್ಯಾತರಾಗಿರುವ ಬಾಲಿವುಡ್ ತಾರೆ ಮಾಧುರಿ ದೀಕ್ಷಿತ್ ಸಂಸಾರ ಸಮೇತ ಭಾರತಕ್ಕೆ ಮರಳಲಿದ್ದಾರೆ. ಅವರು ಇಷ್ಟು ದಿನ ಯುಎಸ್‌ನ ಡೆನ್ವರ್‌ನಲ್ಲಿ ವಾಸವಾಗಿದ್ದರು. ತನ್ನ ಪತಿ ಡಾ. ಶ್ರೀರಾಮ್ ಮಾಧವ್ ನೆನೆ ಹಾಗೂ ಇಬ್ಬರು ಮಕ್ಕಳಾದ ಅರಿನ್ ಮತ್ತು ರಿಯಾನ್ ಜೊತೆ ಅವರು ಮುಂಬೈಗೆ ಆಗಮಿಸುವುದಾಗಿ ಹೇಳಿದ್ದಾರೆ.

  ಮಾಧುರಿ ಪತಿ ವೃತ್ತಿಯಲ್ಲಿ ಹೃದ್ರೋಗ ತಜ್ಞ. ಅವರ ಪ್ರಕಾರ ಭಾರತದಲ್ಲೇ ಹೇರಳ ಅವಕಾಶಗಳಿವೆಯಂತೆ. ಹಾಗಾಗಿ ಭಾರತಕ್ಕೆ ಮರಳುತ್ತಿದ್ದೇವೆ (ಇಲ್ಲಿದೆ ನಮ್ಮನೆ ಅಲ್ಲಿ ಹೋದೆ ಸುಮ್ಮನೆ!). ಹಾಗೆಯೇ ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದಲೂ ತಾವು ಭಾರತಕ್ಕೆ ಮಳುತ್ತಿರುವುದಾಗಿ ಮಾಧುರಿ ಹೇಳಿದ್ದಾರೆ.

  ಅರಿನ್ ಮೂರನೇ ತರಗತಿ ಓದುತ್ತಿದ್ದು ರಿಯಾನ್ ಒಂದನೇ ಕ್ಲಾಸ್. ನಮ್ಮ ಮಕ್ಕಳ ಮೂಲ ಬೇರು ಇರುವುದು ಇಲ್ಲೇ. ಸಾಂಸ್ಕೃತಿಕವಾಗಿಯೂ ತಮಗೆ ಅನುಕೂಲವಾಗಲಿದೆ. ಅವರು ಹಲವಾರು ಗೆಳೆಯರನ್ನು ಕಳೆದುಕೊಂಡಿದ್ದಾರೆ. ಈಗ ಅವರೊಂದಿಗೆ ಮತ್ತೆ ಬೆರೆಯುವ ಉತ್ಸಾಹದಲ್ಲಿ ಮಕ್ಕಳಿದ್ದಾರೆ ಎನ್ನುತ್ತಾರೆ ಮಾಧುರಿ.

  ತಮ್ಮ ಮಕ್ಕಳಿಗೆ ಮರಾಠಿ ಹಾಗೂ ಹಿಂದಿಯನ್ನೂ ಕಲಿಸಬೇಕೆಂದಿದ್ದೇನೆ. ಅವರಿಗೂ ಈ ಭಾಷೆಗಳನ್ನು ಕಲಿಯಲು ಎಲ್ಲಿಲ್ಲದ ಉತ್ಸಾಹವಿದೆ. ಮತ್ತೊಂದು ಮುಖ್ಯ ಸಂಗತಿ ಎಂದರೆ ಮಾಧುರಿ ದೀಕ್ಷಿತ್ ಅವರಿಗೆ ಇಬ್ಬರು ಮಕ್ಕಳಾಗಿದ್ದರೂ ಇನ್ನೂ ಗ್ಲಾಮರ್ ಮಾತ್ರ ಎಂಟಾಣೆಯಷ್ಟೂ ಕಡಿಮೆ ಆಗಿಲ್ಲ ಎನ್ನುತ್ತಿದ್ದಾರೆ ಆಕೆಯ ಅಭಿಮಾನಿಗಳು. (ಏಜೆನ್ಸೀಸ್)

  English summary
  Madhuri Dixit, the dhak-dhak girl, who was touted as the Madhubala of the 1990's is relocating to Mumbai – And this time it is for good! Madhuri will be accompanied by husband Dr Sriram Madhav Nene and kids, Arin and Ryan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X