For Quick Alerts
  ALLOW NOTIFICATIONS  
  For Daily Alerts

  ಅಕ್ಷಯ್ ಕುಮಾರ್ ಹೆಸರಿನಲ್ಲಿ ವಿಶೇಷ ದಾಖಲೆ ಬರೆದ '2.0'

  |
  2.0 movie : ಅಕ್ಷಯ್ ಕುಮಾರ್ ಹೆಸರಿನಲ್ಲಿ ವಿಶೇಷ ದಾಖಲೆ ಬರೆದ '2.0'..! | Oneindia Kannada

  ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ '2.0' ಸಿನಿಮಾ ಗಳಿಕೆಯಲ್ಲಿ ದೊಡ್ಡ ಮೊತ್ತದತ್ತ ದಾಪುಗಾಲಿಟ್ಟಿದೆ.

  ಬಿಡುಗಡೆಯಾದ 8 ದಿನಗಳಲ್ಲಿ ಜಗತ್ತಿನಾದ್ಯಂತ ಒಟ್ಟು 520 ಕೋಟಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಭಾರತದಲ್ಲಿ 392 ಕೋಟಿ ಹಾಗೂ ಹೊರದೇಶದಲ್ಲಿ 128 ಕೋಟಿ ಗಳಿಕೆ ಕಂಡಿದೆಯಂತೆ.

  ವಿಶ್ವಾದ್ಯಂತ ಅಬ್ಬರಿಸುತ್ತಿರುವ '2.0' ಕರ್ನಾಟಕದಲ್ಲಿ ಗಳಿಸಿದೆಷ್ಟು.? ವಿಶ್ವಾದ್ಯಂತ ಅಬ್ಬರಿಸುತ್ತಿರುವ '2.0' ಕರ್ನಾಟಕದಲ್ಲಿ ಗಳಿಸಿದೆಷ್ಟು.?

  ಈ ನಡುವೆ '2.0' ಸಿನಿಮಾ ಅಕ್ಷಯ್ ಕುಮಾರ್ ವೃತ್ತಿ ಜೀವನದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಇದುವರೆಗೂ ಅಕ್ಷಯ್ ಕರಿಯರ್ ನಲ್ಲಿ ಅತಿ ಹೆಚ್ಚು ಗಳಿಕೆ ಕಂಡಿರುವ ಸಿನಿಮಾ '2.0' ಆಗಿ ಹೊರಹೊಮ್ಮಿದೆ. ಅಂದ್ರೆ, ಹಿಂದಿ ಭಾಷೆಯಲ್ಲಿ '2.0' ಗಳಿಸಿರುವ ಮೊತ್ತವನ್ನ ಲೆಕ್ಕಾಚಾರ ಮಾಡಿದಾಗ 137 ಕೋಟಿ ಬಾಚಿದೆ.

  'ಬಾಹುಬಲಿ' ಮುಂದೆ ಬಹುದೊಡ್ಡ ಸೋಲು ಕಂಡ ರಜನಿ '2.0' 'ಬಾಹುಬಲಿ' ಮುಂದೆ ಬಹುದೊಡ್ಡ ಸೋಲು ಕಂಡ ರಜನಿ '2.0'

  ಮೊದಲ ದಿನ 22 ಕೋಟಿ ಗಳಿಸಿದ್ದ 2.0 ಹಿಂದಿ ಸಿನಿಮಾ 8 ನೇ ದಿನ 8 ಕೋಟಿ ಕಲೆಕ್ಷನ್ ಮಾಡಿದೆ. ಒಟ್ಟಾರೆ, 8 ದಿನದಲ್ಲಿ 137 ಕೋಟಿ ತನ್ನ ಖಾತೆಗೆ ಹಾಕಿಕೊಳ್ಳುವ ಮೂಲಕ ಅಕ್ಕಿಗೆ ವಿಶೇಷವೆನಿಸಿಕೊಂಡಿದೆ.

  ರಜನಿ '2.0' ಕಲೆಕ್ಷನ್: ನಿರೀಕ್ಷೆ ಪರ್ವತದಷ್ಟು, ಗಳಿಸಿದ್ದು ಬೆಟ್ಟದಷ್ಟು.!ರಜನಿ '2.0' ಕಲೆಕ್ಷನ್: ನಿರೀಕ್ಷೆ ಪರ್ವತದಷ್ಟು, ಗಳಿಸಿದ್ದು ಬೆಟ್ಟದಷ್ಟು.!

  ಇದುವರೆಗೂ ಅಕ್ಷಯ್ ಕುಮಾರ್ ಅಭಿನಯಿಸಿದ್ದ ಚಿತ್ರಗಳ ಪೈಕಿ 'ಟಾಯ್ಲೆಟ್ ಏಕ್ ಪ್ರೇಮ ಕಥಾ' ಸಿನಿಮಾ 133 ಕೋಟಿ ಗಳಿಸಿ ಮೊದಲ ಸ್ಥಾನದಲ್ಲಿತ್ತು. ಇದೀಗ, ಈ ಚಿತ್ರದ ದಾಖಲೆಯನ್ನ 2.0 ಸಿನಿಮಾ ಮುರಿದು ಹಾಕಿದೆ.

  ಹಾಗ್ನೋಡಿದ್ರೆ, ಅಕ್ಷಯ್ ಕುಮಾರ್ ಅಭಿನಯದ ಹತ್ತು ಸಿನಿಮಾಗಳು ನೂರು ಕೋಟಿ ಕ್ಲಬ್ ನಲ್ಲಿ ಸ್ಥಾನ ಪಡೆದುಕೊಂಡಿದೆ. ರೌಡಿ ರಾಥೋರ್, ಏರ್ ಲಿಫ್ಟ್, ರುಸ್ತುಂ, ಜಾಲಿ ಎಲ್.ಎಲ್.ಬಿ 2, ಹೌಸ್ ಫುಲ್ 2, ಹಾಲಿಡೇ, ಹೌಸ್ಫುಲ್ 3 ಹಾಗೂ ಗೋಲ್ಡ್ ಸಿನಿಮಾಗಳು ನೂರು ಕೋಟಿ ಕಲೆಕ್ಷನ್ ಮಾಡಿತ್ತು.

  English summary
  2.0 has emerged as a highest grossing movie of Akshay Kumar. after taking a flying start of 20.25 crores (Hindi version), the movie collected amazingly well to make a grand total of 139.75 crores in its 8-day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X