»   » ಅಸಿನ್ ಗೆ ಆನೆ ಮೇಲೆ, ಒಂಟೆ ಮೇಲೆ ದೀಪಿಕಾ ಟೂ!

ಅಸಿನ್ ಗೆ ಆನೆ ಮೇಲೆ, ಒಂಟೆ ಮೇಲೆ ದೀಪಿಕಾ ಟೂ!

Posted By:
Subscribe to Filmibeat Kannada

ಬಾಲಿವುಡ್ ಚಿತ್ರೋದ್ಯಮದಲ್ಲಿ ಯಾವ ಘಳಿಗೆಯಲ್ಲಿ ಏನಾಗುತ್ತದೋ ಬಲ್ಲವರಾರು. ಇದಕ್ಕೆ ನಿದರ್ಶನವೆಂಬಂತೆ ಅನ್ಯೋನ್ಯವಾಗಿದ್ದ ಇಬ್ಬರು ಗೆಳತಿಯರ ಸ್ನೇಹ ಸಂಬಂಧದಲ್ಲಿ ಬಿರುಕು ಮೂಡಿದೆ. ಬಾಲಿವುಡ್ ಗೆ ಅಡಿಯಿಟ್ಟ ಮಲ್ಲು ಬೆಡಗಿ ಅಸಿನ್ ಗೆ ಆನೆ ಮೇಲೆ, ಒಂಟೆ ಮೇಲೆ, ಕತ್ತೆ ಮೇಲೆ, ಕುದುರೆ ಮೇಲೆ ಟೂ ಬಿಟ್ಟಿದ್ದಾರೆ ದೀಪಿಕಾ ಪಡುಕೋಣೆ!

ದೀಪಿಕಾ ಪಡುಕೋಣೆಗೆ ಪಾತ್ರವೊಂದು ಕೈತಪ್ಪಿಹೋಗಲು ಅಸಿನ್ ಕಾರಣವಾಗಿದ್ದೆ ಇವರಿಬ್ಬರ ನಡುವಿನ ಗೆಳೆತನ ಹಗೆತನವಾಗಿ ಮಾರ್ಪಟ್ಟಿದೆ. ಅನೀಸ್ ಬಜ್ಮಿ ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ ಚಿತ್ರದಲ್ಲಿ (ದಕ್ಷಿಣದ ಯಶಸ್ವಿ ಚಿತ್ರ ರೆಡಿ ರೀಮೇಕ್) ನಟಿಸಲು ಮೊದಲು ದೀಪಿಕಾ ಸಂಪರ್ಕಿಸಿದ್ದರಂತೆ. ಬಳಿಕ ಅಸಿನ್ ಕಾರಣ ಆ ಪಾತ್ರ ದೀಪಿಕಾ ಕೈತಪ್ಪಿ ಹೋಗಿದೆ ಎನ್ನುತ್ತವೆ ಮೂಲಗಳು.

ಐಪಿಎಲ್ ಹಾಗೂ ಚಿತ್ರೀಕರಣ ಅದೂ ಇದೂ ಎಂದು ಬ್ಯುಸಿಯಾಗಿರುವ ದೀಪಿಕಾಗೆ ಸಮಯ ಹೊಂದಾಣಿಕೆಯಾಗಲಿಲ್ಲವಂತೆ. ಕಡೆಗೆ ಬೇಸತ್ತ ಅನೀಸ್ ಮಲ್ಲು ಬೆಡಗಿ ಅಸಿನ್ ಗೆ ಕಾಲ್ ಶೀಟ್ ಕೊಟ್ಟಿದ್ದಾರೆ. ಇದೀಗ ಎದ್ದೆನೋ ಬಿದ್ದೆನೋ ಎಂದು ಓಡಿಬಂದಿರುವ ದೀಪಿಕಾ ಚಿತ್ರದಲ್ಲಿ ನಟಿಸುವುದಾಗಿ ಅನೀಸ್ ಬಳಿ ಅಲವತ್ತ್ತುಕೊಂಡಿದ್ದಾರಂತೆ. ಆದರೆ ಅನೀಸ್ ಮನಸು ಬದಲಿಸಿಕೊಳ್ಳುತ್ತಾರೋ ಇಲ್ಲವೋ ಕಾದು ನೋಡಬೇಕು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada