For Quick Alerts
  ALLOW NOTIFICATIONS  
  For Daily Alerts

  ಮತ್ತೆ ಒಂದಾದ ರಣಬೀರ್ ದೀಪಿಕಾ ಕಹಾನಿ, ಓದಿ

  |

  ಹಿಂದೊಮ್ಮೆ ಬಾಲಿವುಡ್ ನಲ್ಲಿ ರಿಯಲ್ ಪ್ರೇಮಿಗಳಾಗಿದ್ದ ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ, ರೀಲ್ (ತೆರೆಯಲ್ಲಿ) ನಲ್ಲಿ ಮತ್ತೆ ಒಂದಾಗಿದ್ದಾರೆ. 'ಯೇ ಜವಾನಿ ಹೈ ದಿವಾನಿ' ಚಿತ್ರದಲ್ಲಿ ಒಟ್ಟಿಗೆ ನಟಿಸಿರುವ ಮಾಜಿ ಪ್ರೇಮಿಗಳ ಈ ಜೋಡಿ, ಚಿತ್ರದಲ್ಲಿ ಯಾವುದೇ ಪ್ರೇಮಸಲ್ಲಾಪದ ಸನ್ನಿವೇಶಗಳಲ್ಲಿ ಪಾಲ್ಗೊಂಡಿಲ್ಲ ಎನ್ನಲಾಗಿದೆ.

  ನಿರ್ದೇಶಕ ಅಯ್ಯನ್ ಮುಖರ್ಜಿ ಈ ಚಿತ್ರದಲ್ಲಿ ಯಾವುದೇ ಸರಸ-ಸಲ್ಲಾಪದ ದೃಶ್ಯಗಳನ್ನು ಈ ಜೋಡಿಯ ಮೇಲೆ ಚಿತ್ರಕರಿಸಿಲ್ಲ. ಆ ಮೂಲಕ ಈ ಜೋಡಿ ಆಗಬಹುದಾದ ಮುಜುಗರದಿಂದ ತಪ್ಪಿಸಿಕೊಂಡಿದೆ. ಆದರೆ ಈ ಹಿಂದೆ ತೆರೆಯಲ್ಲಿ ಅದ್ಭುತ ಕೆಮೆಸ್ಟ್ರಿ ನೀಡಿದ್ದ ಈ ಜೋಡಿ, ಈ 'ಯೇ ಜವಾನಿ ಹೈ ದಿವಾನಿ' ಚಿತ್ರದಲ್ಲೂ ಅದನ್ನು ಮುಂದುವರಿಸಿದೆ.

  ದೀಪಿಕಾ ಮತ್ತು ರಣಬೀರ್ ಮೊದಲಿಗಿಂತ ಸಾಕಷ್ಟು ವೃತ್ತಿಪರತೆ ಮೈಗೂಡಿಸಿಕೊಂಡಿರುವುದರಿಂದ ಚಿತ್ರಕ್ಕಾಗಲೀ ಅಥವಾ ನಿರ್ದೇಶಕರಿಗಾಗಲೀ ಅವರಿಂದ ಯಾವುದೇ ರೀತಿಯಲ್ಲಿ ಅನ್ಯಾಯವಾಗಿಲ್ಲವಂತೆ. ಆದರೆ ನಿರ್ದೇಶಕ ಅಯ್ಯನ ಪ್ರಕಾರ ಯಾವುದೇ ಮಾಜಿ ಪ್ರೇಮಿಗಳಿಗೆ ಕ್ಯಾಮರಾ ಮುಂದೆ ಪ್ರಣಯ ದೃಶ್ಯಗಳಲ್ಲಿ ಅಭಿನಯಿಸುವುದು ಕಷ್ಟದ ಕೆಲಸವಂತೆ. ಹಾಗಾಗಿ ಅಂತಹ ದೃಶ್ಯಗಳೇ ಇರದಂತೆ ನೋಡಿಕೊಂಡು ಜಾಣತನ ಮೆರೆದಿದ್ದಾರೆ ನಿರ್ದೇಶಕ ಅಯ್ಯನ್ ಮುಖರ್ಜಿ. (ಏಜೆನ್ಸೀಸ್)

  English summary
  Ex lovers Ranbir Kapoor, Deepika Padukone will not do sex or intimate scenes in their upcoming movie Yeh Jawani Hai Deewani.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X