For Quick Alerts
  ALLOW NOTIFICATIONS  
  For Daily Alerts

  ಸೈಫ್ ಆಲಿ ಖಾನ್ ಚಿತ್ರಕ್ಕೆ ಪಾಕಿಸ್ತಾನದಲ್ಲಿ ನಿಷೇಧ

  By Rajendra
  |

  ಇನ್ನೇನು ಬಿಡುಗಡೆಗೆ (ಮಾ.23) ಸಜ್ಜಾಗಿರುವ ಸೈಫ್ ಆಲಿ ಖಾನ್ ಅವರ 'ಏಜೆಂಟ್ ವಿನೋದ್' ಚಿತ್ರಕ್ಕೆ ಭಾರಿ ವಿಘ್ನ ಒಂದು ಎದುರಾಗಿದೆ. ಈ ಚಿತ್ರಕ್ಕೆ ಪಾಕಿಸ್ತಾನದ ಸೆನ್ಸಾರ್ ಮಂಡಳಿ ನಿಷೇಧ ಹೇರಿದೆ. ಪಾಕಿಸ್ತಾನದೊಂದಿಗಿನ ಸಂಬಂಧಗಳ ಬಗ್ಗೆ ಚಿತ್ರದಲ್ಲಿ ಆಕ್ಷೇಪಾರ್ಹ ಸನ್ನಿವೇಶಗಳಿವೆ ಎಂಬ ಕಾರಣಕ್ಕೆ ಈ ನಿಷೇಧ ಹೇರಲಾಗಿದೆ.

  ಚಿತ್ರದ ನಾಯಕ ನಟ ರಹಸ್ಯವೊಂದನ್ನು ಭೇದಿಸುವ ಸಲುವಾಗಿ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಾನೆ. ಆ ರಹಸ್ಯ ಏನು ಎಂಬುದು ಚಿತ್ರ ಬಿಡುಗಡೆಯಾದ ಬಳಿಕಷ್ಟೇ ಗೊತ್ತಾಗಲಿದೆ. ಚಿತ್ರದಲ್ಲಿ ಪಾಕಿಸ್ತಾನಕ್ಕೆ ಸಂಬಂಧಿಸಿದ ಸನ್ನಿವೇಶಗಳಿರುವ ಬಗ್ಗೆ ಈ ಹಿಂದೆಯೇ ಸೈಫ್ ಆಲಿ ಖಾನ್ ಕೂಡ ಸುಳಿವು ನೀಡಿದ್ದರು.

  ವಿಶೇಷ ಎಂದರೆ ಈ ಚಿತ್ರದಲ್ಲಿ ಸೈಫ್ ಗರ್ಲ್‌ಫ್ರೆಂಡ್ ಕರೀನಾ ಕಪೂರ್ ಪಾಕಿಸ್ತಾನದ ಗೂಢಚಾರಿಣಿಯಾಗಿ ಅಭಿನಯಿಸಿದ್ದಾರೆ. ಬಾಲಿವುಡ್ ಚಿತ್ರಗಳಿಗೆ ಪಾಕಿಸ್ತಾನದಲ್ಲಿ ಭಾರಿ ಬೇಡಿಕೆ ಇದೆ. ಆದರೆ ಈಗ 'ಏಜೆಂಟ್ ವಿನೋದ್‌'ಗೆ ನಿಷೇಧ ಹೇರಿರುವುದು ಚಿತ್ರತಂಡಕ್ಕೆ ಭಾರಿ ಆಘಾತ ನೀಡಿದೆ. (ಏಜೆನ್ಸೀಸ್)

  English summary
  A leading daily learns about a post by Atrium cinema, a multiplex chain in Karachi, that states the Pakistan censor board has banned Saif Ali Khan's upcoming release Agent Vinod in the country.
  Tuesday, March 20, 2012, 14:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X