For Quick Alerts
  ALLOW NOTIFICATIONS  
  For Daily Alerts

  ನೀರಾ ರಾಡಿಯಾ ಆಗಿ ಹಾಟ್ ಐಟಂ ಗರ್ಲ್ ಪೂನಂ

  By Rajendra
  |

  ಭಾರತದ ಪ್ರಭಾವಿ ಮಹಿಳೆಯಲ್ಲಿ ನೀರಾ ರಾಡಿಯಾ ಹೆಸರು ಈಗ ಪ್ರಮುಖವಾಗಿ ರಾರಾಜಿಸುತ್ತಿದೆ. ರು.1.76 ಲಕ್ಷ ಕೋಟಿಗಳ 2G ತರಂಗಾಂತರ ಹಗರಣ ಬಯಲಾಗುತ್ತಿದ್ದಂತೆ ನೀರಾ ರಾಡಿಯಾ ಹೆಸರು ಕೇಳಿಬಂತು. 2G ಸ್ಪೆಕ್ಟ್ರಂ ಹಗರಣ ಇಡೀ ದೇಶವೇ ಕಂಪಿಸಿತು. ಇದೇ ರೀತಿಯ ಕೋಟ್ಯಾಂತರ ರುಪಾಯಿಗಳ ಡೀಲ್‍ಗಳನ್ನು ಕುದಿರುಸುದಲ್ಲಿ ರಾಡಿಯಾ ಅವರದು ಎತ್ತಿದ ಕೈ. ಇದಿಷ್ಟು ಈಕೆಯ ಸಂಕ್ಷಿಪ್ತ ವಿವರಗಳು. [ರಾಡಿಯಾ ಯಾರು, ಏನು, ಎತ್ತ?]

  ಈಗ ನೇರವಾಗಿ ವಿಷಯಕ್ಕೆ ಬರೋಣ, ಈ ಕೆಯ ಜೀವನವೇ ಒಂಥರಾ ಆಸಕ್ತಿದಾಯಕವಾಗಿದೆ. ಇನ್ನು ಸಿನಿಮಾದವರು ಎಂದರೆ ಕೇಳಬೇಕೆ, ಈಕೆಯ ಜೀವನ ಚರಿತ್ರೆಯನ್ನು ಸಿನಿಮಾ ಮಾಡಲು ಹೊರಟಿದ್ದಾರೆ. ನೀರಾ ರಾಡಿಯಾ ಪಾತ್ರವನ್ನು ಬಾಲಿವುಡ್‌ನ ಹಾಟ್ ಐಟಂ ಗರ್ಲ್ ಪೂನಂ ಝಾವರ್ ಮಾಡಲಿದ್ದಾರೆ.

  ಪೂನಂ ಸಿನಿಮಾಗಳಿಗಿಂತ ಹೆಚ್ಚಾಗಿ ಮ್ಯೂಸಿಕ್ ವಿಡಿಯೋಗಳಲ್ಲಿ ಹೆಸರು ಮಾಡಿದವರು. 1994ರಲ್ಲಿ ತೆರೆಕಂಡ ಅಕ್ಷಯ್ ಕುಮಾರ್ ಅವರ 'ಮೊಹ್ರಾ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು ಪೂನಂ. ಬಳಿಕ ಬಾಲಿವುಡ್‌ನಲ್ಲಿ ಆಕೆಗೆ ಅವಕಾಶಗಳು ಅಷ್ಟಾಗಿ ಬರಲಿಲ್ಲ. ಆಕೆಯೇ 'ಅನಾಚಿ' ಎಂಬ ಚಿತ್ರವೊಂದನ್ನು ನಿರ್ಮಿಸಿ ನಟಿಸಿದ್ದರು.

  ಈಗ ಅಭಿನಯಿಸಲಿರುವ ರಾಡಿಯಾ ಕತೆಯಾಧಾರಿತ ಚಿತ್ರಕ್ಕೆ '2G ರಾಡಿಯಾ ಟಿಯಾನ್' ಎಂದು ಹೆಸರಿಡಲಾಗಿದೆ. "ಈ ಚಿತ್ರ ನನ್ನ ವೃತ್ತಿ ಜೀವನದಲ್ಲಿ ಮರೆಯಲಾಗದ ಚಿತ್ರವಾಗಲಿದೆ" ಎಂದಿದ್ದಾರೆ ಪೂನಂ. ಅಂದಹಾಗೆ ಈ ಚಿತ್ರಕ್ಕೆ ಆಕ್ಷನ್,ಕಟ್ ಹೇಳಲಿರುವವರು ಸತ್‌ಚಿತ್ ಪುರಾಣಿಕ್. ಚಿತ್ರವನ್ನು ಯುಕೆ ಮೂಲದ ಹಿಟೆನ್ ಗ್ರೂಫ್ ನಿರ್ಮಿಸಲಿದೆ. [2ಜಿ ಹಗರಣ]

  English summary
  Bollywood actress Poonam Jhawar to play Nira Radia in her forth coming movie "2G Radia-tion". Sources says that the film will be directed by Satchit Puranik and produced by UK based Hiten Group. The film is based on the corporate lobbyist Nira Radia and 2G spectrum telecom scam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X