Just In
Don't Miss!
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಯಾರಿಗೆ ಬೇಕು ಮಲ್ಲಿಕಾ ಜಿಲೇಬಿ ...
ಯಾಕೋ ಈ ಮುಂಬಯಿ ಸಿನಿ ಬೆಡಗಿಯರು ದೇಸೀ ಮಾಲ್ ಆಗೇ ಕಾಣಿಸಿಕೊಳ್ಳಲು ಹಾತೊರೆಯುತ್ತಿದ್ದಾರೆ. ಸೆಕ್ಸಿ ಮಲೈಕಾ ಅರೋರಾಗೆ 'ಮುನ್ನಿ'ಯಾಗೊ ಯೋಗ ಬಂದಿತ್ತು. ಬಳಿಕ ವಿದೇಶಿ ಬೆಡಗಿ ಕತ್ರಿನಾ ಕೈಫ್ ಅಪ್ಪಟ 'ಶೀಲಾ'ವಂತಳಾಗಿ ತನ್ನ ಸೊಬಗನ್ನು ಅಭಿಮಾನಿಗಳಿಗೆ ಧಾರೆಯೆರೆದಳು. ಇವರಿಗಿಂತ ನಾನೇನ್ ಕಡಿಮೆ ಎಂದು ಸ್ವಲ್ಪ ಪುರಾತನಳಾಗಿರುವ ನಮ್ಮ ಮಲ್ಲಿ... ಶೆರಾವತ್ 'ಜಲೇಬಿ ಭಾಯ್' ಸಾಂಗ್-ನ ಜಿಲೇಬಿಯಷ್ಟೇ ಸ್ವಾದಿಷ್ಟ ಐಟಂ ಆಗಿದ್ದಾಳೆ 'ಡಬಲ್ ಧಮಾಲ್' ಎಂಬ ಚಿತ್ರದಲ್ಲಿ.
ರಿಲಯನ್ಸ್ ಎಂಟರ್ ಟೈನ್ಮೆಂಟ್ ನಿರ್ಮಾಣ ಸಂಸ್ಥೆಯ 'ಡಬಲ್ ಧಮಾಲ್' ಎಂಬ ಕಾಮಿಡಿ ಚಿತ್ರದಲ್ಲಿ ಮಿಡಿ ಧರಿಸಿ ಸಖತ್ತಾಗಿ ಕುಣಿದಿದ್ದಾಳೆ. ಬೇಟಾ, ದಿಲ್, ಇಶ್ಕ್ ನಂತಹ ಸಂಗೀತಮಯ ಚಿತ್ರಗಳನ್ನು ನೀಡಿದ್ದ ನಿರ್ದೇಶಕ ಇಂದರ್ ಕುಮಾರ್ ಧಮಾಲ್-2ಕ್ಕೂ ನಿರ್ದೇಶನ ಮಾಡಿದ್ದಾರೆ. ಅಂದಹಾಗೆ 2007ರಲ್ಲಿ ಧಮಾಲ್ ಭರ್ಜರಿ ಹಿಟ್ ಆಗಿತ್ತು. ಇದರಿಂದ ಚಿತ್ರ ರಸಿಕರು 'ಡಬಲ್ ಧಮಾಲ್'ನಲ್ಲಿ ಮಲ್ಲಿಕಾ ಧಮಾಕಾಗೆ ಕಾದುಕುಳಿತಿದ್ದಾರೆ. ಕಾಮಿಡಿ ಕಚಗುಳಿ ಜತೆಗೆ ಮಲ್ಲಿಕಾ ಕಚಗುಳಿಗೆ ಅಭಿಮಾನಿಗಳು ಕಾದುನಿಂತಿದ್ದಾರೆ.
ಮಾರಿಷಸ್-ನಲ್ಲಿರುವ ಮೆಹಬೂಬ್ ಸ್ಟುಡಿಯೋನಲ್ಲಿ ನಾಲ್ಕು ದಿನಗಳ ಕಾಲ ಮಲ್ಲಿಕಾ ಬೇಬಿ ಜಿಲೇಬಿ ಡ್ಯಾನ್ಸ್ ಮಾಡಿದ್ದಾಳೆ. 'ಜಲೇಬಿ ಬಾಯ್' ಐಟಂ ಸಾಂಗ್-ನಲ್ಲಿ ಜಿಲೇಬಿಯಂತೆ ತನ್ನ ಅಂಕುಡೊಂಕುಗಳನ್ನು ತೆರೆದಿಟ್ಟಿದ್ದಾಳೆ. ಆದರೆ ಮುನ್ನಿ, ಶೀಲಾಗಳ ಲೋಕದಿಂದ ಹೊರಬಂದು ಜಿಲೇಬಿಯನ್ನೂ ಸ್ವಾದಿಸಲು ಅಭಿಮಾನಿಗಳು ಜೂನ್ ವರೆಗೂ ಕಾಯಬೇಕು. ಖ್ಯಾತ ಡ್ಯಾನ್ಸ್ ಮಾಸ್ಟರ್ ಗಣೇಶ್ ಆಚಾರ್ಯ ಕೊರಿಯೋಗ್ರಫಿ ಮಲ್ಲಿಕಾಳ ಸೌಂದರ್ಯವನ್ನು ಸೂರೆಗೊಂಡಿದೆ. ಹಾಲಿವುಡ್-ನಲ್ಲಿ ಹಿಸ್ ಎನ್ನುತ್ತಾ ಕಳೆದುಹೋಗಿದ್ದ ಮಲ್ಲಿಕಾ ಶೆರಾವತ್, 'ಧಮಾಲ್' ಬ್ರ್ಯಾಡ್-ನಲ್ಲಿ ಬಿಕಿನಿ ತೊಟ್ಟು ಕುಣಿಯಲು ಕಾಯುತ್ತಿದ್ದಳು ಎಂದು ಬಾಲಿವುಡ್ ಮಂದಿ ಹೇಳಿದ್ದಾರೆ. ಚಿತ್ರದಲ್ಲಿ ಮಲ್ಲಿಕಾ, ನಾಯಕ ಸಂಜಯ್ ದತ್-ನ ಹೆಂಡತಿಯಾಗಿ ಕಾಣಿಸಿಕೊಂಡಿದ್ದಾಳೆ.