»   » ರಣಬೀರ್ ನೊಂದಿಗೆ ಅವಕಾಶ ಗಿಟ್ಟಿಸಿದ ಅಸಿನ್

ರಣಬೀರ್ ನೊಂದಿಗೆ ಅವಕಾಶ ಗಿಟ್ಟಿಸಿದ ಅಸಿನ್

Posted By:
Subscribe to Filmibeat Kannada
Asin, Ranbir Kapoor in sci-fi films
ದಕ್ಷಿಣ ಭಾರತದ ಖ್ಯಾತ ನಟಿ ಅಸಿನ್ ಗೆ ಬಾಲಿವುಡ್ ನಲ್ಲಿ ಭರ್ಜರಿ ಅವಕಾಶಗಳು ಹುಡುಕಿಕೊಂಡು ಬಂದಿವೆ. ಆಕೆ ನಟಿಸಿದ ಬಾಲಿವುಡ್ ನ ಯಾವೊಂದು ಚಿತ್ರವೂ ಇನ್ನೂ ತೆರೆ ಕಂಡಿಲ್ಲ. ಹೀಗಿದ್ದುಕೊಂಡು ನಿರ್ಮಾಪಕರು ಆಕೆಯ ಮನೆ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ಕ್ರಿಸ್ಮಸ್ ಗೆ 'ಗಜಿನಿ' ಚಿತ್ರ ದೇಶದಾದ್ಯಂತ ತೆರೆಕಾಣಲಿದೆ. ಈ ಚಿತ್ರದಲ್ಲಿ ಅಮೀರ್ ಗೆ ಜೊತೆಯಾಗಿ ಅಸೀನ್ ನಟಿಸಿದ್ದಾರೆ. 'ಲಂಡನ್ ಡ್ರೀಮ್ಸ್ 'ಎಂಬ ಚಿತ್ರವೂ ನಿರ್ಮಾಣ ಹಂತದಲ್ಲಿದೆ. ಸಲ್ಮಾನ್ ಖಾನ್, ಅಜಯ್ ದೇವಗನ್ ಈ ಚಿತ್ರದ ಮುಖ್ಯ ಪಾತ್ರಧಾರಿಗಳು. ಪ್ರಮುಖ ಹಾಲಿವುಡ್ ಚಿತ್ರ ನಿರ್ಮಾಣ ಸಂಸ್ಥೆ ವಾಲ್ಟ್ ಡಿಸ್ನಿ, ವಾರ್ನರ್ ಬ್ರದರ್ಸ್ ನಿರ್ಮಿಸಲಿರುವ ಚಿತ್ರದಲ್ಲೂ ಈಕೆಗೆ ಸ್ಥಾನ ದೊರಕಿದೆ. ಸದರಿ ಕಂಪನಿಯ ಪ್ರತಿನಿಧಿಗಳು ಈಕೆಯೊಂದಿಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.

ತಾಜಾ ಬೆಳವಣಿಗೆಯೊಂದರಲ್ಲಿ ಯುವ ನಟ ರಣಬೀರ್ ಕಪೂರ್ ನೊಂದಿಗೆ ನಟಿಸುವ ಅವಕಾಶವನ್ನು ಅಸೀನ್ ಪಡೆದುಕೊಂಡಿದ್ದಾರೆ. ಈ ಚಿತ್ರ ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಳ್ಳಲಿದೆ. ಎರಡು ಚಿತ್ರಗಳಲ್ಲಿ ಅಸೀನ್ ನಾಯಕಿ. ಹಿಂದಿ ಚಿತ್ರದಲ್ಲಿ ರಣಬೀರ್ ನಾಯಕ ನಟ. ತಮಿಳಿನಲ್ಲಿ ನಾಯಕ ನಟನಿಗಾಗಿ ಹುಡುಕಾಟ ನಡೆದಿದೆ. ಜೀವಿ ಫಿಲ್ಮ್ ಸಂಸ್ಥೆ ನಿರ್ಮಿಸುತ್ತಿರುವ ಸೈನ್ಸ್ ಫಿಕ್ಷನ್ ಚಿತ್ರ ಇದಾಗಿದ್ದು ತಮಿಳಿನಲ್ಲಿ ರಜನಿಕಾಂತ್ ನಟಿಸುತ್ತಿರುವ 'ರೋಬೋ' ರೀತಿಯ ಕಥೆಯನ್ನು ಹೊಂದಿದೆಯಂತೆ.

(ಏಜೆನ್ಸೀಸ್)


ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada