»   » ಬಿಪಾಶಾ ಜೊತೆ ಗ್ರೀಸ್ ನಲ್ಲಿ ಶಾಹಿದ್ ರಜೆಯ ಮಜ

ಬಿಪಾಶಾ ಜೊತೆ ಗ್ರೀಸ್ ನಲ್ಲಿ ಶಾಹಿದ್ ರಜೆಯ ಮಜ

Posted By:
Subscribe to Filmibeat Kannada

ಯುರೋಪ್ ಪ್ರವಾಸಕ್ಕಾಗಿ ಹತ್ತು ದಿನಗಳ ರಜಾ ತೆಗೆದುಕೊಂಡಿರುವ ಬಾಲಿವುಡ್ ನಟ ಶಾಹಿದ್ ಕಪೂರ್, ರಜದಲ್ಲಿ ಮಜ ತೆಗೆದುಕೊಳ್ಳುವುದಕ್ಕೂ ಪ್ಲಾನ್ ಮಾಡಿದ್ದಾನೆ. ಅದೂ ಯಾರ ಜೊತೆ ಅಂತೀರಾ? ಬಿಪಾಶಾ ಬಸು, ಬೋಲ್ಡ್ ಸುಂದರಿ. ಯಾಕೋ ಶಾಹಿದ್ ಸರಿಯಾಗಿ ನಂಜೊತೆ ಮಾತಾಡ್ತಾ ಇಲ್ಲ ಅಂತ ಬಿಪ್ ಬೇಜಾರು ಮಾಡಿಕೊಂಡಿದ್ದಾಳಂತೆ. ಪಾಪ, ಕತ್ತಲಲ್ಲಿ ಜಾಮೂನು ತಿನ್ನಿಸೋಕೆ ಕರೆದಿದ್ದಾನೆ.

ಬಿಪಾಶಾ ಈಗ ತಮಿಳು-ಹಿಂದಿ ಎರಡು ದೋಣಿಯ ನಟ ಮಾಧವನ್ ಜೊತೆ 'ಶಾದಿ ಫಾಸ್ಟ್ ಫಾರ್ವರ್ಡ್' ಚಿತ್ರದ ಶೂಟಿಂಗ್ ಗೆ ಯುರೋಪ್ ನಲ್ಲಿ ತಂಗಲಿದ್ದಾಳೆ. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದವನಂತೆ ಶಾಹಿದ್ ತನಗೆ ಸಿಕ್ಕ ಬರೋಬ್ಬರಿ ಹತ್ತು ದಿನಗಳ ರಜೆಯನ್ನು ಬಿಪಾಶಾ ಜೊತೆಗಾಗಿ ಮೀಸಲಿಟ್ಟಿದ್ದಾನಂತೆ. ಅಲ್ಲಿಗೆ ಬಿಪಾಶಾಗೆ ಖುಷಿ, ಶಾಹಿದ್ ಗೆ ಬಿಸಿ.

ಪಾಪ, ತಮ್ಮಿಬ್ಬರ ಸ್ನೇಹದಲ್ಲಿ ಏನೋ ಎಡವಟ್ಟಾಗಿದೆ ಅನ್ನುವ ಬಿಪಾಶಾ ಬೇಸರಕ್ಕೆ ಶಾಹಿದ್ ಮಾತ್ರೆ ಈ ಯುರೋಫ್ ಯಾತ್ರೆ. ಇದಕ್ಕೆ ಬಿಪಾಶಾ 'ಓಲ್ಡ್ ಫ್ರೆಂಡ್' ಜಾನ್ ಏನಂತಾನೆ ಅಂತ ಯಾರೋ ಕೇಳಿದ್ದಕ್ಕೆ "ಯಾವ ಜಾನ್?" ಅಂದ್ಲಂತೆ ಬಿಪಾಶಾ. "ಯಾವ ಬಿಪಾಶಾ" ಅಂತ ಕೇಳದೇ ನಕ್ಕು ಸುಮ್ಮನಾದ್ನಂತೆ ಜಾನ್. ಶಾಹಿದ್ ಮಾತ್ರ ಕಣ್ಣು-ಕಿವಿ ಮುಚ್ಚಿಕೊಂಡು ಬಾಯಲ್ಲಿ ಬಿಪಾಶಾ ಮಂತ್ರ ಪಠಿಸುತ್ತಿದ್ದಾನೆ ಎಂಬುದು ಬಾಲಿವುಡ್ ಲೇಟೆಸ್ಟ್ ನ್ಯೂಸ್. (ಏಜೆನ್ಸೀಸ್)

English summary
Shahid Kapoor, who is on a ten day holiday to Europe had apparently planned his visit to Greece to spend more time with Bipasha Basu. Bipasha is reportedly in Greece shooting for her upcoming film Shaadi Fast Forward opposite R. Madhavan.
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X