For Quick Alerts
  ALLOW NOTIFICATIONS  
  For Daily Alerts

  ಮದುವೆಗೂ ಮುನ್ನವೇ ತಾರೆ ಜೆನಿಲಿಯಾ ಪಾರ್ಟಿ

  By Rajendra
  |

  ಬಾಲಿವುಡ್ ಸಿನಿಮಾ ತಾರೆ ಜೆನಿಲಿಯಾ ಡಿಸೋಜಾ ಮದುವೆಗೆ ಮುನ್ನವೇ ತನ್ನ ಭಾವಿ ಪತಿ ರಿತೇಶ್ ದೇಶ್‌ಮುಖ್ ಜೊತೆಗೆ ಪಾರ್ಟಿ ಮಾಡಿಕೊಂಡು ಸಂಭ್ರಮಿಸಿದ್ದಾರೆ. ಈ ಪಾರ್ಟಿಯನ್ನು ಚಿತ್ರ ನಿರ್ಮಾಪಕ ಸಜಿದ್ ನಡಿಯಾವಾಲಾ ಹಾಗೂ ಫರ್ದೀನ್ ಖಾನ್ ಆಯೋಜಿಸಿದ್ದರು.

  ಈ ಬಗ್ಗೆ ಪ್ರತಿಕ್ರಿಯಿಸಿರುವ ನಡಿಯಾವಾಲಾ, ಇವರಿಬ್ಬರ ನಡುವೆ ಏಳು ವರ್ಷಗಳಿಂದ ಗಟ್ಟಿಯಾದ ಸಂಬಂಧವಿತ್ತು. ಪಾರ್ಟಿಗೆ ಇಬ್ಬರೂ ಸ್ವಲ್ಪ ತಡವಾಗಿ ಬಂದರಾದರೂ ಒಳ್ಳೆಯ ಮೂಡ್‌ನಲ್ಲಿದ್ದರು. ಆಕರ್ಷಕವಾಗಿ ಕಂಗೊಳಿಸುತ್ತಿದ್ದ ಜೆನಿಲಿಯಾ ಪಾರ್ಟಿಯಲ್ಲಿ "ರಿತೇಶ್ ನನ್ನ ರಾಜಕುಮಾರ" ಎಂದಿದ್ದಾಗಿ ತಿಳಿಸಿದ್ದಾರೆ.

  ಇವರಿಬ್ಬರ ಪಾರ್ಟಿಗೆ ಸಿನಿಮಾ ತಾರೆಗಳಾದ ದೀಪಿಕಾ ಪಡುಕೋಣೆ, ಅರ್ಜುನ್ ರಾಂಪಾಲ್, ಮನೋಜ್ ಬಾಜ್‌ಪೈ, ಸೊಹೈಲ್ ಖಾನ್, ರವೀನಾ ಟಂಡನ್, ಅಮೀಷಾ ಪಟೇಲ್, ಅರ್ಬಾಜ್ ಖಾನ್ ಸೇರಿದಂತೆ ಹಲವರು ಆಗಮಿಸಿದ್ದರು. ಜೆನಿಲಿಯಾ ಮತ್ತು ರಿತೇಶ್ ಮದುವೆ ಫೆಬ್ರವರಿ 3ಕ್ಕೆ ಮುಂಬೈನಲ್ಲಿ ನೆರವೇರಲಿದೆ. (ಏಜೆನ್ಸೀಸ್)

  English summary
  Ritiesh Deshmukh and Genelia D'Souza's pre-wedding bash held at Royalty Bandra. The party hosted by Filmmaker Sajid Nadiawala and Fardeen Khan. The couple is all set to get married in February 2012

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X