»   » ಅವಳಿ ಜವಳಿ ಕಂದಮ್ಮಗಳನ್ನು ಹಡೆದ ಸೆಲೀನಾ ಜೇಟ್ಲಿ

ಅವಳಿ ಜವಳಿ ಕಂದಮ್ಮಗಳನ್ನು ಹಡೆದ ಸೆಲೀನಾ ಜೇಟ್ಲಿ

Posted By:
Subscribe to Filmibeat Kannada

ಬಾಲಿವುಡ್ ತಾರೆ ಸೆಲೀನಾ ಜೇಟ್ಲಿ ಅವಳಿ ಜವಳಿ ಕಂದಮ್ಮಗಳಿಗೆ ಜನ್ಮ ನೀಡಿದ್ದಾರೆ. ಎರಡೂ ಗಂಡು ಮಕ್ಕಳು. ಸೆಲೀನಾ ಪತಿ ಪೀಟರ್ ಹಾಗ್ ಈ ಬಗ್ಗೆ ಟ್ವೀಟಿಸಿದ್ದು,"ಈ ಸುದ್ದಿಯನ್ನು ತಿಳಿಸಲು ತುಂಬ ಸಂತಸವಾಗುತ್ತಿದೆ. ಸೆಲೀನಾ ಎರಡು ಗಂಡು ಮಕ್ಕಳನ್ನು ಹಡೆದಿದ್ದಾರೆ, ವಿನ್ಸ್‌ಟನ್ ಹಾಗೂ ವಿರಾಜ್. I am over the moon" ಎಂದಿದ್ದಾರೆ.

ಜುಲೈ 2011ರಂದು ದುಬೈ ಮೂಲದ ಹಾಗ್ ಅವರನ್ನು ಸೆಲೀನಾ ರಹಸ್ಯವಾಗಿ ಮದುವೆಯಾಗಿದ್ದರು. ತಮ್ಮ ಮದುವೆ ಸುದ್ದಿಯನ್ನು ಸೆಲೀನಾ ಲೀಕ್ ಮಾಡಿದ್ದು ಮಾತ್ರ ಹಲವಾರು ರಾತ್ರಿಗಳು ಕಳೆದ ಮೇಲೆ. ಮದುವೆಯಾಗಿ ಎರಡು ಗುಟ್ಟಾಗಿ ಸಂಸಾರ ಮಾಡಿ ಬಳಿಕ ತಮಗೆ ಮದುವೆಯಾಗಿದೆ ಎಂದಿದ್ದರು.

ಮದುವೆ ಆದ ಮೇಲೆ ತಡಮಾಡದೆ ತಾನೀಗ ಗರ್ಭಿಣಿ ಎಂದು ಹೆಮ್ಮೆಯಿಂದ ಟ್ವೀಟಿಸಿದ್ದರು. ಐಶ್ವರ್ಯ ರೈರಷ್ಟು ಅಭಿಮಾನಿಗಳು ಸೆಲೀನಾ ಜೇಟ್ಲಿ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಅವರ ಪಾಡಿಗೆ ಅವರಿದ್ದರು. ಇವರ ಪಾಡಿಗೆ ಇವರು ಅವಳಿ ಜವಳಿ ಮಕ್ಕಳನ್ನು ಹಡೆದಿದ್ದಾರೆ.

ಸೆಲೀನಾ ಮದುವೆಗೆ ಮುಂಚೆಯೇ ತಪ್ಪು ಮಾಡಿ ಗರ್ಭಿಣಿ ಆಗಿದ್ದರು ಎಂಬ ಸುದ್ದಿಯೂ ಇದೆ. ಇಲ್ಲಾ ಅಂದರೆ ಗಂಡನೊಂದಿಗೆ ಹಾಯಾಗಿ ಆರು ತಿಂಗಳು ಕಳೆಯದೆನೇ ಅದೇಗೆ ಇಷ್ಟು ಬೇಗ ಮಕ್ಕಳಾಗಲು ಸಾಧ್ಯ ಎಂಬ ಬಲವಾದ ಅನುಮಾನ ಬಾಲಿವುಡ್‌ನಲ್ಲಿ ವ್ಯಕ್ತವಾಗಿದೆ. (ಏಜೆನ್ಸೀಸ್)

English summary
Bollywood actress Celina Jaitley delivers twin boys on Saturday morning. Her husband Peter Haag announced the good news, he tweeted, “I am so happy to inform you that celinajaitly and myself have been blessed happy healthy twin boys, Winston and Viraaj. I am over the moon!(sic)”.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X