»   » ಬೆಳ್ಳಿತೆರೆಗೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ!

ಬೆಳ್ಳಿತೆರೆಗೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ!

Subscribe to Filmibeat Kannada
Former President Kalam to act in a movie
''ಕನಸು ಕಾಣುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ. ಹಾಗಾಗಿ ದೊಡ್ಡ ಕನಸನ್ನೇ ಕಾಣಿ'' ಎಂದು ಮಕ್ಕಳು ಮತ್ತು ಯುವ ಜನತೆಗೆ ಕರೆಕೊಟ್ಟವರು ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಚಿತ್ರವೊಂದರಲ್ಲಿ ನಟಿಸಲಿದ್ದಾರೆ. 'ಮೈ ಕಲಾಂ ಹೂಂ' (ನಾನು ಕಲಾಂ) ಎಂಬ ಹಿಂದಿ ಚಿತ್ರದಲ್ಲಿ ಅವರದೇ ಪಾತ್ರಕ್ಕೆ ಅವರು ಜೀವ ತುಂಬಲಿದ್ದಾರೆ.

ಕಲಾಂ ಅನುಸರಿಸಿದ ಹಾಗೂ ಮಕ್ಕಳಿಗೆ ಅನುಸರಿಸಲು ಕರೆಕೊಟ್ಟ ತತ್ವಗಳ ಮೇಲೆ ಚಿತ್ರಕತೆಯನ್ನು ಸಿದ್ಧಪಡಿಸಿದ್ದಾರೆ. 'ಮಿಸೈಲ್ ಮ್ಯಾನ್' ಎಂದೇ ಖ್ಯಾತರಾಗಿದ್ದ ಅಬ್ದುಲ್ ಕಲಾಂ ಈ ಚಿತ್ರದಲ್ಲಿ ಮಕ್ಕಳೊಂದಿಗೆ ಮಗುವಾಗಿ ನಟಿಸುತ್ತಿರುವುದು ವಿಶೇಷ. ಆ ಮೂಲಕವಾದರೂ ಮಕ್ಕಳೊಂದಿಗೆ ಕ್ಷಣಕಾಲ ಕಳೆದಂತಾಗುತ್ತದೆ ಎಂಬುದು ಕಲಾಂ ಎಣಿಕೆ!

ಚಿತ್ರದಲ್ಲಿ ಗುಲ್ಶನ್ ಗ್ರೋವರ್ ಮತ್ತು ಫ್ರೆಂಚ್ ನಟಿ ಸೋಫಿ ಬ್ರಾಸ್ಟೆಲ್ ಸಹ ಇದ್ದಾರೆ. ಭಾರತಕ್ಕೆ ಬರುವ ವಿದೇಶಿ ಪ್ರವಾಸಿಯ ಪಾತ್ರ ಸೋಫಿ ಅವರದು. ಆಕೆಗೆ ಗುಲ್ಶನ್ ಜತೆ ಪ್ರೇಮಾಂಕುರವಾಗತ್ತದೆ. ಗುಲ್ಶನ್ ಮತ್ತು ಸೋಫಿ ಇಬ್ಬರೂ ಪ್ರೇಮಿಗಳು ಎಂಬುದು ಬಿಡಿಸಿಹೇಳಬೇಕಾಗಿಲ್ಲ.

ರಾಜಸ್ತಾನ ಸ್ಲಂ ಒಂದರ ಪುಟ್ಟ ಬಾಲಕ ದೊಡ್ಡ ಕನಸು ಕಾಣುವ ಕತೆಯೇ ಮೈ ಕಲಾಂ ಹೂಂ ಎನ್ನುತ್ತಾರೆ ಗುಲ್ಶನ್. ಆದರೆ ಕಲಾಂ ಪಾತ್ರದ ಬಗ್ಗೆ ಹೆಚ್ಚು ವಿವರ ನೀಡಲು ಅವರು ನಿರಾಕರಿಸಿದ್ದಾರೆ. ಕೇನ್ಸ್ ಚಿತ್ರೋತ್ಸವ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಈ ಚಿತ್ರ ಪ್ರದರ್ಶನ ಕಾಣಲಿದೆಯಂತೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada