»   » ಗಾಂಧಿನಗರಕ್ಕೆ ಮತ್ತೆ ಅಡಿಯಿಟ್ಟ ಸೆಕ್ಸ್ ಬಾಂಬ್ ಮಲ್ಲಿಕಾ

ಗಾಂಧಿನಗರಕ್ಕೆ ಮತ್ತೆ ಅಡಿಯಿಟ್ಟ ಸೆಕ್ಸ್ ಬಾಂಬ್ ಮಲ್ಲಿಕಾ

Posted By:
Subscribe to Filmibeat Kannada

ಸೆಕ್ಸ್ ಬಾಂಬ್ ಮಲ್ಲಿಕಾ ಶೆರಾವತ್ ಮತ್ತೊಮ್ಮೆ ಗಾಂಧಿನಗರಕ್ಕೆ ಅಡಿಯಿಟ್ಟಿದ್ದಾರೆ. ಈ ಹಿಂದೆ ಪ್ರೇಮ್ ಜೊತೆ 'ಈ ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರದಲ್ಲಿ "ಮಗಳು ದೊಡ್ಡವಳಾದಳು..." ಎಂಬ ಹಾಡಿಗೆ ಹೆಜ್ಜೆ ಹಾಕಿ ಪಡ್ಡೆ ಹೃದಯಲ್ಲಿ ಚಿತ್ತಾರ ಬಿಡಿಸಿದ್ದಳು ಮಲ್ಲಿಕಾ ಶೆರಾವತ್.

ಪ್ರೇಮ್ ಜೊತೆ ಕುಣಿಯಲು ಒಂದೇ ಒಂದು ಹಾಡಿಗೆ ರು.50 ಲಕ್ಷ ತೆಗೆದುಕೊಂಡಿದ್ದಳು ಮಲ್ಲಿಕಾ. ಈಗ ಮತ್ತೊಮ್ಮೆ ಇನ್ನೂ ಹೆಸರಿಡದ ಕನ್ನಡ ಚಿತ್ರದಲ್ಲಿ ಮಲ್ಲಿಕಾ ಅಭಿನಯಿಸುವುದು ಗ್ಯಾರಂಟಿಯಾಗಿದೆ. ಈ ಚಿತ್ರವನ್ನು ಎಸ್ ಕೆ ಬಷೀದ್ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಮಲ್ಲಿಕಾ ಅವರದು ಐಟಂ ಸಾಂಗ್ ಅಥವಾ ಅತಿಥಿ ಪಾತ್ರವೇ ಎಂಬುದು ಇನ್ನೂ ಗೊತ್ತಾಗಿಲ್ಲ.

ಈ ಚಿತ್ರದಲ್ಲಿ ಹಾಟ್ ಬೆಡಗಿ ರಿಷಿಕಾ ಸಿಂಗ್ ಹಾಗೂ ಕನ್ನಡದ ಲೇಡಿ ಬ್ರೂಸ್ಲಿ ಖ್ಯಾತಿಯ ಆಯೇಷಾ ಕೂಡ ಅಭಿನಯಿಸುತ್ತಿದ್ದಾರೆ. ಆಯೇಷಾ ಅವರದು ಪೊಲೀಸ್ ಪಾತ್ರ. ಜನವರಿ 2012ಕ್ಕೆ ಈ ಚಿತ್ರ ಸೆಟ್ಟೇರಲಿದೆ. ಇನ್ನೂ ಹೆಸರಿಡದ ಈ ಚಿತ್ರದ ಫೋಟೋ ಶೂಟನ್ನು ಮುಂಬೈನಲ್ಲಿ ನಡೆಸಲು ನಿರ್ಮಾಪಕ ಎಸ್ ಕೆ ಬಷೀದ್ ನಿರ್ಧರಿಸಿದ್ದಾರೆ. (ಏಜೆನ್ಸೀಸ್)

English summary
Item queen Mallika Sherawat signed one more Kannada film for item number. she will do an item number in SK Basheed's untitled movie. The film launched in January 2012.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada