ನಟ ಶೈನಿ ಮೇಲೆ ಮತ್ತೆ ಲೈಂಗಿಕ ಕಿರುಕುಳ ಆರೋಪ

By Mahesh

ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ನಡೆಸಿ ಕೆಲ ಕಾಲ ಜೈಲುವಾಸ ಅನುಭವಿಸಿ ಬಂದಿರುವ ಬಾಲಿವುಡ್ ನಟ ಶೈನಿ ಅಹುಜಾ ತನ್ನ ಚಾಳಿ ಮತ್ತೆ ಮುಂದುವರೆಸಿದ್ದಾನೆ, ಹೈಕೊರ್ಟು ಜಾಮೀನು ಮೇರೆಗೆ ಬಿಡುಗಡೆ ಹೊಂದಿದ ಮೇಲೆ 'ಗೋಸ್ಟ್' ಎಂಬ ಚಿತ್ರದಲ್ಲಿ ನಟಿಸುತ್ತಿರು ಶೈನಿ ಅಹುಜಾ ಮೇಲೆ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ.

ಶೈನಿ ಹಾಗೂ ಆತನ ಪತ್ನಿ ಅನಪಮ ನನಗೆ ಕಿರುಕುಳ ನೀಡಿ, ಅಸಭ್ಯ ಸಂದೇಶಗಳನ್ನು ಕಳಿಸುತ್ತಿದ್ದಾರೆ ಎಂದು ಗೋಸ್ಟ್ ಚಿತ್ರದ ನಾಯಕಿ ಸಯಾಲಿ ಭಗತ್ ಆರೋಪಿಸಿದ್ದಾಳೆ. 'ಗೋಸ್ಟ್' ಚಿತ್ರದ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಆತ ವಿನಾ ಕಾರಣ ಮೈಮೇಲೆ ಕೈಯಾಡಿಸಿ, ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಹಲವು ಬಾರಿ ತನ್ನ ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಸಯಾಲಿ ಆರೋಪಿಸಿದ್ದಾಳೆ. ಈ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಬಾರದು ಹಾಗೂ ಮಾಧ್ಯಮಗಳಿಗೆ ತಿಳಿಸಬಾರದು ಆತನ ಪತ್ನಿ ಅನುಪಮಾ ಬೆದರಿಕೆ ಒಡ್ದಿದ್ದಾರೆ.

ಈ ಮಧ್ಯೆ ಅವನ ಕಾಟ ತಡೆಯಲಾರದೆ ನಾನು ಸಂದರ್ಶನವೊಂದರಲ್ಲಿ ಅಹುಜಾನ ಲಜ್ಜೆಗೇಡಿತನ ಬಹಿರಂಗಪಡಿಸಿದೆ. ಈ ಬಗ್ಗೆ ಸಯಾಲಿ ಮೊದಲಿಗೆ ಅಹುಜಾನ ವಿರುದ್ಧ ಪೊಲೀಸ್ ದೂರು ನೀಡದಿದ್ದರೂ ಇದೀಗ ಆತನ ಪತ್ನಿ ಹೆಸರು ಸೇರಿಸಿ ಮಲಾಡ್ ಠಾಣೆಯಲ್ಲಿ ದೂರು ನೀಡಲು ನಿರ್ಧರಿಸಿದ್ದಾಳೆ.

ಹಿಂದಿನ ಅತ್ಯಾಚಾರ ಪ್ರಕರಣದಲ್ಲೂ ತನ್ನ ಪತಿ ಪ್ರಾಮಾಣಿಕ ಎಂದಿದ್ದ ಅನುಪಮಾ, ಈ ಕೇಸಿನಲ್ಲೂ ಪತಿಯನ್ನು ಪ್ರಾಮಾಣಿಕ, ಅಮಾಯಕ ಎಂದು ಸಮರ್ಥಿಸಿಕೊಂಡಿದ್ದಾಳೆ. ಶೈನಿ ಕಂಡರೆ ಆಗದೆ ಇರುವವರು ಈ ರೀತಿ ಮಾಡಿಸಿದ್ದಾರೆ ಎಂದು ಅನುಪಮಾ ಹೇಳಿದ್ದಾರೆ.

More from Filmibeat

English summary
Model turned actress Sayali Bhagat alleges that co star of 'Ghost' movie Shiney Ahuja has sexually harassed her. The Bollywood actor Shiney was accused in raping maid earlier. Now he and his wife Anupama facing another charge against them.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X