ನಟಿ ಅನುಷ್ಕಾ ಮುಂಬೈ ವಿಮಾನ ನಿಲ್ದಾಣದಲ್ಲಿ ಸೆರೆ

ಭಾರತ ಬಿಟ್ಟು ಕೆನಡಾಕ್ಕೆ ಹೋದಾಗ ಆಕೆ ಲಗ್ಗೇಜ್ ನಲ್ಲಿದ ವಸ್ತುಗಳಿಗೆ ಟ್ಯಾಕ್ಸ್ ಕೊಡದೆ ತಪ್ಪಿಸಿಕೊಂಡಿದ್ದರು. ಈ ಬಗ್ಗೆ ಪ್ರಶ್ನಿಸಲಾಗುತ್ತಿದೆ. ಸುಂಕ ಕಟ್ಟದೆ ಹೊರಗೆ ಬಿಡುವುದು ಸಾಧ್ಯವಿಲ್ಲ. ಆಕೆ ಬಳಿ ಇರುವ ಸಾಮಾಗ್ರಿಯ ಮೌಲ್ಯ ಇನ್ನು ಸ್ಪಷ್ಟಪಡಿಸಲು ಸಾಧ್ಯವಿಲ್ಲ. ಸ್ಯಾಂಡಲ್ಸ್, ಸನ್ ಗ್ಲಾಸ್, ಪರ್ಫ್ಯೂಮ್ ಗಳು ಕೂಡಾ ತೆರಿಗೆ ಒಳಪಡುತ್ತವೆ ಎಂಬ ಜ್ಞಾನ ಕೂಡಾ ನಟಿಯರಿಗಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಸುಮಾರು 45ಲಕ್ಷಕ್ಕೂ ಅಧಿಕ ಬೆಲೆ ಬಾಳುವ ವಸ್ತುಗಳಿಗೆ ತೆರಿಗೆ ಕಟ್ಟದೆ ವಂಚನೆ ಮಾಡಲಾಗುತ್ತಿತ್ತು ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.
ಕಳೆದ ತಿಂಗಳು ಕೃಷ್ಣ ಸುಂದರಿ ಬಿಪಾಶಾ ಕೂಡಾ ಮುಂಬೈ ವಿಮಾನ ನಿಲ್ದಾಣದಲ್ಲಿ ಲೆಕ್ಕಕ್ಕೆ ಸೇರಿಸದಂತೆ ನಗದು ಹಾಗೂ ಆಭರಣಗಳನ್ನು ಒಯ್ಯುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ಕೇನ್ಸ್ ಚಿತ್ರೋತ್ಸವದಿಂದ ಮರಳಿದ ಮಿನಿಷಾ ಲಂಬಾ ಕೂಡಾ ಸುಮಾರು 30 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಹೊಂದಿದ್ದರು.
More from Filmibeat
English summary
After Minissha Lamba and Bipasha Basu Actress Anushka Sharma has been detained at the Mumbai International Airport for for not declaring goods in her luggage which are countable for tax. Customs officials are questioning the Actress Anushka


Click it and Unblock the Notifications











