»   » ಹೃತಿಕ್ ಜೊತೆ ರೋಮಾನ್ಸ್ ಗೆ ಕ್ರಿಸ್ಟೇನ್

ಹೃತಿಕ್ ಜೊತೆ ರೋಮಾನ್ಸ್ ಗೆ ಕ್ರಿಸ್ಟೇನ್

Posted By:
Subscribe to Filmibeat Kannada

ಹೃತಿಕ್ ರೋಷನ್ ಜೊತೆ ಮತ್ತೊಬ್ಬ ಫಿರಂಗಿ ಚೋರಿ ಕುಣಿಯುವುದು ಖಾತ್ರಿಯಾಗಿದೆ. ಬರ್ಬರಾ ಮೋರಿ ನಂತರ ಈಗ 20 ವರ್ಷದ ಚೆಲುವೆ ಕ್ರಿಸ್ಟೆನ್ ಸ್ಟೀವರ್ಟ್ ಬಾಲಿವುಡ್ ಅಂಗಳಕ್ಕೆ ಕಾಲಿಡಲಿದ್ದಾರೆ. ಖ್ಯಾತ ನಿರ್ದೇಶಕ ಶೇಖರ್ ಕಪೂರ್ ಅವರ ಪಾನಿ ಚಿತ್ರದಲ್ಲಿ ಈ ಚೆಲುವೆ ಹೃತಿಕ್ ಜೊತೆ ರೋಮಾನ್ಸ್ ಮಾಡಲಿದ್ದಾಳೆ.

ಎಲಿಜಬೇತ್ ಚಿತ್ರ ಖ್ಯಾತಿಯ ಶೇಖರ್ ಕಪೂರ್ ಅವರ ಅಭಿಮಾನಿಯಾದ ಈ 'ಟ್ವಿಲೈಟ್ 'ತಾರೆ ಕ್ರಿಸ್ಟೆನ್, ಶೇಖರ್ 'ಪಾನಿ' ಚಿತ್ರದ ಬಗ್ಗೆ ಹೇಳಿದ ತಕ್ಷಣ ಒಪ್ಪಿಕೊಂಡಿದ್ದಾರೆ. ಚಿತ್ರದ ಕಥೆಯ ಬಗ್ಗೆ ಶೇಖರ್ ಹೆಚ್ಚು ಸುಳಿವು ನೀಡಿಲ್ಲ. ಆದರೆ ಮೂಲಗಳ ಪ್ರಕಾರ ಇದು ಮತ್ತೊಂದು ಹಾಲಿವುಡ್ ಬಾಲಿವುಡ್ ಮಿಶ್ರಣದ ಚಿತ್ರ. ಮೊದಲು ಇಂಗ್ಲೀಷ್ ನಲ್ಲಿ ಚಿತ್ರೀಕರಿಸಿ ನಂತರ ಹಿಂದಿಗೆ ಡಬ್ಬಿಂಗ್ ಮಾಡುವ ಸಾಧ್ಯತೆಯಿದೆ. ಮುಂಬೈನ ಬಡವ ಶ್ರೀಮಂತರ ಕಥೆ ಇದಾಗಿದ್ದು, ಹೃತಿಕ್ ಕೆಳವರ್ಗದ ಯುವಕನ ಪಾತ್ರವಹಿಸಿದ್ದರೆ, ಕ್ರಿಸ್ಟೆನ್ ಶ್ರೀಮಂತ ಹುಡುಗಿ ಪಾತ್ರ ಧರಿಸಲಿದ್ದಾರೆ. ಇವರಿಬ್ಬರ ಪ್ರೇಮಕಥೆಯೇ ಪಾನಿ ಎನ್ನಲಾಗಿದೆ.

ಕೈಟ್ಸ್ ನಲ್ಲಿ ಮೆಕ್ಸಿಕನ್ ಬೆಡಗಿ ಬರ್ಬರಾ ಮೋರಿ ಜೊತೆ ಸ್ವಲ್ಪ ಹೆಚ್ಚಾಗೆ ರೋಮಾನ್ಸ್ ಮಾಡಿ ಪತ್ನಿ ಸುಜಾನ್ ಕಣ್ಣು ಕೆಂಪಗಾಗುವಂತೆ ನೀಲಿ ಕಂಗಳ ಚೆಲುವ ಹೃತಿಕ್ ಮಾಡಿದ್ದುಂಟು. ಈ ಜೋಡಿ ಈಗಳೂ ಚಿತ್ರ ಪ್ರಚಾರಕ್ಕಾಗಿ ಮಾರಿಷಸ್ ,ಮುಂಬೈ ಅಲ್ಲಿ ಇಲ್ಲಿ ಎಂದು ಒಟ್ಟಿಗೆ ಓಡಾಡಿಕೊಂಡಿದೆ. ಮತ್ತೊಂದು ವಿದೇಶಿ ಬ್ಯೂಟಿ ಗೆ ಬಾಲಿವುಡ್ ನ ಬೇಡಿಕೆ ನಟನ ಜೊತೆ ಹೆಜ್ಜೆ ಹಾಕುವ ಅದೃಷ್ಟ ಒದಗಿದೆ. ಪಾನಿ ಎಲ್ಲಿಂದ ಎಲ್ಲಿಗೆ ಹರಿಯುವುದೋ ಕಾದು ನೋಡೋಣ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada