For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟ ರಾಜೇಶ್ ಖನ್ನಾ ಆಸ್ಪತ್ರೆಗೆ ದಾಖಲು

  By Rajendra
  |

  ಒಂದು ಕಾಲದ ಬಾಲಿವುಡ್ ಸೂಪರ್ ಸ್ಟಾರ್ ರಾಜೇಶ್ ಖನ್ನ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದೀರ್ಘ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಪರಿಸ್ಥಿತಿ ವಿಷಮಿಸಿದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ವಿಐಪಿ ವಾರ್ಡ್‌ನಲ್ಲಿ ರಾಜೇಶ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಅವರ ಪತ್ನಿ ಡಿಂಪಲ್ ಕಪಾಡಿಯಾ ಕೂಡ ಜೊತೆಗಿದ್ದಾರೆ.

  ಆಸ್ಪತ್ರೆ ಮೂಲಗಳ ಪ್ರಕಾರ, ತೀವ್ರವಾಗಿ ಬಳಲಿದ್ದ ರಾಜೇಶ್ ಅವರ ಆರೋಗ್ಯ ಪರಿಸ್ಥಿತಿಯನ್ನು ಹಿರಿಯ ವೈದ್ಯರು ಪರೀಕ್ಷಿಸುತ್ತಿದ್ದಾರೆ. ಸೋಮವಾರ ರಾತ್ರಿಯಿಂದಲೇ ಅವರ ಆರೋಗ್ಯ ಕೈಕೊಟ್ಟಿತ್ತು. ರಾಜೇಶ್ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗಬಹುದು ಎನ್ನುತ್ತವೆ ಮೂಲಗಳು.

  ಇನ್ನೊಂದು ಕಡೆ ಡಿಂಪಲ್ ಕಪಾಡಿಯಾ ಅವರು ಆಸ್ಪತ್ರೆಯ ವೈದ್ಯಕೀಯ ಪರೀಕ್ಷೆಗಳ ಬಗ್ಗೆ ಅಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವರು ಆಸ್ಪತ್ರೆ ಸಿಬ್ಬಂದಿ ಜೊತೆಗೂ ಮಾತಿನ ಚಕಮಕಿ ನಡೆದಿದೆ ಎನ್ನುತ್ತವೆ ಮೂಲಗಳು. ರಾಜೇಶ್ ಅವರನ್ನು ದಕ್ಷಿಣ ಮುಂಬೈನ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಿದ್ದಾರಂತೆ. (ಏಜೆನ್ಸೀಸ್)

  English summary
  Superstar Rajesh Khanna, who has been battling with his debilitating disease for quite long now, has been admitted to Lilavati Hospital. Khanna has been admitted to the VIP room, where wife Dimple Kapadia has been by his side, overseeing the complicated treatment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X