For Quick Alerts
  ALLOW NOTIFICATIONS  
  For Daily Alerts

  ಸೈಫ್ ನೆರವಿಗೆ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್

  |

  ನಟ ಸೈಫ್ ಅಲಿ ಖಾನ್ ವಿದೇಶಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಇದೀಗ ಕಾನೂನು ಹೋರಾಟದಲ್ಲಿ ಸಿಲುಕಿಕೊಂಡಿರುವುದು ಗೊತ್ತೇ ಇದೆ. ಇದೀಗ ಅವರ ನೆರವಿಗೆ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಧಾವಿಸಿದ್ದಾರೆ. ಅಷ್ಟೇ ಅಲ್ಲ, ಮಾಧ್ಯಮದ ವಿರುದ್ಧ ಸಲ್ಲೂ ತಿರುಗಿಬಿದ್ದಿದ್ದಾರೆ.

  "ಸೈಫ್ ಮತ್ತು ವಿದೇಶಿಗನ ಮೇಲೆ ಹಲ್ಲೆ ವಿಚಾರದಲ್ಲಿ ಮಾಧ್ಯಮಗಳು ಕೇವಲ ಏಕಪಕ್ಷೀಯವಾಗಿ ವರ್ತಿಸಿವೆ. ವಿದೇಶಿಗ ಇಕ್ಬಾಲ್ ಪರವಾಗಿ ಇದ್ದು ಘಟನೆಯನ್ನು ವರದಿ ಮಾಡಿವೆ ಎಂದು ಸಲ್ಮಾನ್ ಮಾಧ್ಯಮದ ಮಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ವರದಿಮಾಡುವಷ್ಟು ತಾಳ್ಮೆ ಮಾಧ್ಯಮಕ್ಕೆ ಇರಲಿಲ್ಲವೇ" ಎಂದು ಗುಡುಗಿದ್ದಾರೆ.

  ಕೊಲಾಬಾ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಗಲಾಟೆಯಲ್ಲಿ ಮೊದಲು ನಟ ಸೈಫ್ ಮೇಲೆ ಕೈ ಮಾಡಿದ್ದು ವಿದೇಶಿಗ ಇಕ್ಬಾಲ್ ಎಂಬುದನ್ನು ಅಲ್ಲಿದ್ದ ಪ್ರತ್ಯಕ್ಷದರ್ಶಿ ಹೇಳಿದ್ದಾನೆ. ಆದರೂ ಕೂಡ ಮಾಧ್ಯಮಗಳು ಆತನ ಪರವಾಗಿ ಹಾಗೂ ಸೈಫ್ ವಿರುದ್ಧವಾಗಿ ವರದಿ ಮಾಡಿವೆ ಎಂದು ಇಂತಹ ಸಾಕಷ್ಟು ಕೇಸುಗಳಲ್ಲಿ ಈ ಮೊದಲು ಸಿಕ್ಕಿಕೊಂಡು ಒದ್ದಾಡಿದ್ದ ಸಲ್ಲೂ ಹೇಳಿದ್ದಾರೆ. ಒಟ್ಟಿನಲ್ಲಿ ಸೈಫ್ ಅಲಿ ಖಾನ್ ಗೆ ಆತನ ಕಷ್ಟಕಾಲದಲ್ಲಿ ಸಲ್ಮಾನ್, ಆಪದ್ಬಾಂಧವ ಎನಿಸಿಕೊಂಡಿದ್ದಾನೆ. (ಏಜೆನ್ಸೀಸ್)

  English summary
  Saif Ali Khan gets support from Salman Khan over NRI Iqbal Sharma assault case. Salman blamed the media for supporting Sharma and showing only one side of the story. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X