»   » ಹೊರಗೆ ಅಂಡರ್‌ವೇರ್ ಹಾಕಲು ಇಷ್ಟವಿಲ್ಲ: ಸಲ್ಮಾನ್ ಖಾನ್

ಹೊರಗೆ ಅಂಡರ್‌ವೇರ್ ಹಾಕಲು ಇಷ್ಟವಿಲ್ಲ: ಸಲ್ಮಾನ್ ಖಾನ್

Posted By:
Subscribe to Filmibeat Kannada

ಇದು ಸಲ್ಮಾನ್ ಖಾನ್ ಅವರ ಅಂದರ್ ಕಿ ಬಾತ್! ಈ ಒಳಚಡ್ಡಿ (ಅಂಡರ್‌ವೇರ್) ಬಗ್ಗೆ ಸಾಕಷ್ಟು ಜೋಕ್‌ಗಳಿವೆ. ಅವುಗಳಲ್ಲಿ ಒಂದು ಜೋಕ್ ಹೀಗಿದೆ. ಅಂಡರ್‌ವೇರ್ ಒಳಗಡೆ ಹಾಕಿದರೆ ಜಂಟಲ್ ಮ್ಯಾನ್ ಹೊರಗೆ ಹಾಕಿದರೆ ಸೂಪರ್ ಮ್ಯಾನ್! ಈಗ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಕೂಡ ಸೂಪರ್ ಹೀರೋ ಆಗಲು ಹೊರಟಿದ್ದಾರೆ ಎಂಬ ಸುದ್ದಿ ಇದೆ.

ಕಿಂಗ್ ಖಾನ್ ಶಾರುಖ್ ಖಾನ್ 'ರಾ.ಒನ್' ಚಿತ್ರದ ಬಳಿಕ ಅದೇ ರೀತಿಯ ಆಕ್ಷನ್ ಪ್ರಧಾನ ಚಿತ್ರವೊಂದರಲ್ಲಿ ಸಲ್ಲು ನಟಿಸಲಿದ್ದಾರಂತೆ. ಸೂಪರ್ ಹೀರೋ ಆಗಲು ಹೊರಟಿರುವ ಸಲ್ಲು ಚಿತ್ರಕ್ಕೆ ಕಬೀರ್ ಖಾನ್ ಆಕ್ಷನ್ ಕಟ್ ಹೇಳಲಿದ್ದು ಕತ್ರಿನಾ ಕೈಫ್ ನಾಯಕಿಯಂತೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಬೇಜಾನ್ ಸುದ್ದಿ ಮಾಡಿತ್ತು.

'ರೆಡಿ' ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಲ್ಲು ಸೂಪರ್ ಹೀರೋ ಸುದ್ದಿಯನ್ನು ಅಲ್ಲಗಳೆದಿದ್ದಾರೆ. "ಸೂಪರ್ ಹೀರೋ ಆಗಲು ನನಗೆ ಇಷ್ಟವಿಲ್ಲ. ಹೊರಗೆ ಅಂಡ‌ವೇರ್ ಹಾಕಿಕೊಳ್ಳುವುದು ಹಾಗೆಯೇ ಜೇಡರಹುಳ ಕೈಯಲ್ಲಿ ಕಚ್ಚಿಸಿಕೊಳ್ಳುವುದೂ ನನಗೆ ಬಿಲ್ ಕುಲ್ ಆಗದ ಕೆಲಸ" ಎಂದಿದ್ದಾರೆ ಸಲ್ 'ಮಾನ್'!

English summary
Reacting to a question on doing a superhero film at the music launch of his film Ready Salman retorted, "I am not interested in being a superhero. I don't want to wear my underwear on the outside nor do I want to be bitten by a spider. I prefer being SAL-MAN.''

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada