For Quick Alerts
ALLOW NOTIFICATIONS  
For Daily Alerts

ಅಣ್ಣಾ ಹಜಾರೆ ಬೆಂಬಲಕ್ಕೆ ನಿಂತ ಬಾಲಿವುಡ್

|

ಮುಂಬೈ, ಆ. 28: ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಅಣ್ಣಾ ಹಜಾರೆ ನೇತೃತ್ವದ ಹೋರಾಟಕ್ಕೆ ಈಗಾಗಲೇ ರಾಲಿ ಹಾಗೂ ಸೋಷಿಯಲ್ ನೆಟ್ ವರ್ಕಿಂಗ್ ಮೂಲಕ ಸಾಕಷ್ಟು ಬೆಂಬಲ ಸೂಚಿಸಿರುವ ಬಾಲಿವುಡ್ ಈಗ ಬೆಂಬಲ ಮುಂದುವರಿಸುವ ನಿಟ್ಟಿನಲ್ಲಿ ಮುಂದಕ್ಕೆ ಹೆಜ್ಜೆ ಇಟ್ಟಿದೆ. ನಟ ಓಂ ಪುರಿಯ ಶುಕ್ರವಾರದ ಬೆಂಬಲ ಭಾಷಣದ ನಂತರ ಇದೀಗ ಖ್ಯಾತ ನಟ ಹಾಗೂ ನಿರ್ದೇಶಕ ಅಮೀರ್ ಖಾನ್ ಕೂಡ ದೆಹಲಿಗೆ ತೆರಳಿ ಸಾಥ್ ನೀಡುತ್ತಿದ್ದಾರೆ.

"ಪ್ರಧಾನ ಮಂತ್ರಿ ಕೂಡ ಲೋಕಪಾಲ ವ್ಯಾಪ್ತಿಗೆ ಬರಬೇಕು. ಭ್ರಷ್ಟಾಚಾರದ ವಿರುದ್ಧ ಈಗಾಗಲೇ ಕಾರ್ಯನಿತವಾಗಿರುವ CBI, ಲೋಕಪಾಲ ಸಂಸ್ಥೆಯ ಜೊತೆ ಕೈಜೋಡಿಸುವುದರ ಜೊತೆಗೆ ಕೆಳವರ್ಗದ ಸರ್ಕಾರಿ ಅಧಿಕಾರಿಗಳೂ ಕೂಡ ಇದರ ವ್ಯಾಪ್ತಿಗೆ ಒಳಪಡಬೇಕು" ಎಂದು ಹೇಳಿಕೆ ನೀಡಿದ್ದಾರೆ. ಲೋಕಪಾಲ ಸಂಸ್ಥೆ ಎಂಪಿಗಳ ವಿರುದ್ಧ ಕೂಡ ತನಿಖೆ ನಡೆಸಲು ಶಕ್ತವಾಗಿರಬೇಕು ಎಂದ ಅವರು ಈ ವಿಷಯದಲ್ಲಿ ಅಣ್ಣಾ ಹಜಾರೆಯ ಬೆಂಬಲಿಗರು ಹೇಗೆ ಮುಂದುವರಿಯಬೇಕೆಂಬ ಬಗ್ಗೆ ಕಿವಿಮಾತು ಕೂಡ ಹೇಳಿದ್ದಾರೆ.

ಬೃಹತ್ ಪ್ರಮಾಣದ ಈ ಜನಬೆಂಬಲ ಹಾಗೂ ಬಾಲಿವುಡ್ ಬೆಂಬಲ ಪ್ರವಾಹದಲ್ಲಿ ನಟ ಸಲ್ಮಾನ್ ಖಾನ್ ಕೂಡ ಸೇರಿಕೊಳ್ಳವ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ ಎನಿಸಿದೆ. ಆದರೆ ಹೊಸ ಸಿನಿಮಾ ಬಿಡುಗಡೆಯಲ್ಲಿ ಬ್ಯುಸಿ ಆಗಿರುವ ಸಲ್ಮಾನ್ ಖಾನ್ ಬೆಂಬಲ ಸಿಗುವುದು ಖಾತ್ರಿಯಲ್ಲ ಎಂಬುದು ಬಹಳಷ್ಟು ಜನರ ಅನಿಸಿಕೆ.

ಸಾಕಷ್ಟು ಬಾಲಿವುಡ್ ಸೆಲಿಬ್ರಿಟಿಗಳ ಬೆಂಬಲದ ಜೊತೆ ಅಂತರಾಷ್ಟ್ರೀಯ ವ್ರೆಸ್ಟಲರ್ ಮತ್ತು ನಟ ಖಾಲಿ ಕೂಡ ಅಣ್ಣಾ ಹಜಾರೆ ತಂಡಕ್ಕೆ ಬೆಂಬಲ ಸೂಚಿಸಿರುವುದು ಮಿಂಚಿನ ಸಂಚಾರಕ್ಕೆ ಕಾರಣವಾಗಿದೆ.

English summary
Through rallies and taking to social networking sites, Bollywood showed its solidarity towards social activist Anna Hazare's campaign, in its own way by pushing for the implementation of the Jan Lokpal Bill. After actor Om Puri took to stage to deliver a speech in support of Anna on Friday, actor Aamir Khan flew down to Delhi to voice his support for the 74-year-old who's been on a continuous fast.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more