»   »  ಐಶ್, ಹೃತಿಕ್ ಯಶಸ್ವ್ ಜೋಡಿ ಮತ್ತೆ ತೆರೆಗೆ

ಐಶ್, ಹೃತಿಕ್ ಯಶಸ್ವ್ ಜೋಡಿ ಮತ್ತೆ ತೆರೆಗೆ

Subscribe to Filmibeat Kannada
Hrithik-Aishwarya film titled Guzaarish
ಐಶ್ವರ್ಯ ರೈ ಮತ್ತು ಹೃತಿಕ್ ರೋಷನ್ ಜೋಡಿಯನ್ನು ತೆರೆಯ ಮೇಲೆ ಮತ್ತಷ್ಟು, ಇನ್ನಷ್ಟು ನೋಡಬೇಕು ಅನ್ನಿಸುತ್ತದೆ! ಬಾಲಿವುಡ್ ನಿರ್ಮಾಪಕ, ನಿರ್ದೇಶಕರು ಈ ಯಶಸ್ವಿ ಜೋಡಿಗಾಗಿ ಹಾತೊರೆಯುತ್ತಾರೆ. ಆದರೆ ಎಲ್ಲರಿಗೂ ಆ ಅವಕಾಶ ಸಿಗುವುದಿಲ್ಲ. ಈಗ ಆ ಅವಕಾಶ ಹಿಂದಿ ಚಿತ್ರ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಪಾಲಾಗಿದೆ.

ಧೂಮ್ 2, ಜೋಧಾ ಅಕ್ಬರ್ ಚಿತ್ರಗಳಲ್ಲಿ ಅವರಿಬ್ಬರನ್ನೂ ನೋಡಿದ ಪ್ರೇಕ್ಷಕ ಮಹಾಶಯ ಇನ್ನೂ ಮರೆತಿಲ್ಲ. ಮುಖ್ಯವಾಗಿ ಧೂಮ್ 2ರಲ್ಲಿನ ಹಸಿಬಿಸಿ ದೃಶ್ಯಗಳು ಪ್ರೇಕ್ಷಕನನ್ನು ಬಹಳಷ್ಟು ಸೆಳೆದವು. ಈಗ ಐಶ್ ಮತ್ತು ಹೃತಿಕ್ ರನ್ನು ಮತ್ತೊಮ್ಮೆ ಕ್ಯಾಮೆರಾ ಮುಂದೆ ತರುತ್ತಿದ್ದಾರೆ ಸಂಜಯ್ ಲೀಲಾ ಭನ್ಸಾಲಿ.

ಭನ್ಸಾಲಿ ನಿರ್ದೇಶಿಸುತ್ತಿರುವ 'ಗುಜಾರಿಷ್' ಚಿತ್ರದಲ್ಲಿ ನಟಿಸಲು ಐಶ್ ಮತ್ತು ಹೃತಿಕ್ ಒಪ್ಪಿಗೆ ಸೂಚಿಸಿದ್ದಾರಂತೆ. ಜುಲೈನಿಂದ ಚಿತ್ರೀಕರಣ ಆರಂಭವಾಗಲಿದೆಯಂತೆ. ಚಿತ್ರದಲ್ಲಿ ಎಂಟು ಹಾಡುಗಳು ಇರುತ್ತವಂತೆ. ಈಗಾಗಲೇ ನಾಲ್ಕು ಹಾಡುಗಳಿಗೆ ರೀರೆಕಾರ್ಡಿಂಗ್ ಕಾರ್ಯ ಮುಗಿದಿದೆ. ಮತ್ತೆ ಮತ್ತೆ ನೋಡಬೇಕು ಅನ್ನಿಸುವ ರೀತಿಯಲ್ಲಿ ಇರುತ್ತಾರೆ ಐಶ್ ಮತ್ತು ಹೃತಿಕ್. ನಾನು ಆಯ್ಕೆ ಮಾಡಿಕೊಂಡಿರುವ ಕತೆಗೆ ಅವರಿಬ್ಬರು ಮಾತ್ರ ನ್ಯಾಯ ಸಲ್ಲಿಸಲು ಸಾಧ್ಯ ಎನ್ನುತ್ತಾರೆ ಭನ್ಸಾಲಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada