ಮಾಧ್ಯಮಗಳ ಮುಂದೆ ಬೈಕೆತ್ತಿ ಹಾಕಿದ ಜಾನ್ ಅಬ್ರಹಾಂ

By Rajendra

ಮಾಧ್ಯಮಗಳ ಮುಂದೆ ತಮ್ಮ ತಾಕತ್ತು ತೋರಿಸಿ ಸೈ ಅನ್ನಿಸಿಕೊಂಡಿದ್ದಾರೆ ಬಾಲಿವುಡ್ ನಟ ಜಾನ್ ಅಬ್ರಹಾಂ. ಈತನಿಗೆ ದ್ವಿಚಕ್ರವಾಹನಗಳೆಂದರೆ ಎಲ್ಲಿಲ್ಲದ ಕ್ರೇಜ್. ಮೋಟಾರ್ ಬೈಕ್‌ಗಳಲ್ಲಿ ಮೋಜು ಮಸ್ತಿ ಉಡಾಯಿಸುವುದೆಂದರೆ ಜಾನ್‌ಗೆ ಏನೋ ಒಂಥರಾ ಆನಂದ.

ಸರಿಸುಮಾರು 115 ಕೆ.ಜಿ ತೂಕದ ಬೈಕನ್ನು ಬರಿಗೈಲಿ ವೇಟ್ ಲಿಫ್ಟರ್‌ ತರಹ ಎತ್ತಿಹಾಕಿದ್ದಾರೆ ಈ ಪುಣಾತ್ಮ. ಈ ಸ್ಟೆಂಟನ್ನು 'ಫೋರ್ಸ್' ಚಿತ್ರಕ್ಕಾಗಿ ಜಾನ್ ಮಾಡಿದ್ದಾರೆ. ಇದೇ ಸ್ಟಂಟನ್ನು ಅವರು ಮಂಗಳವಾರ (ಸೆ.27) ಸಂಜೆ ಮಾಧ್ಯಮಗಳ ಮುಂದೆ ಮಾಡಿ ತೋರಿಸಿದರು. ಬೈಕನ್ನು ಮೇಲಕ್ಕೆತ್ತಿ ಕೆಳಕ್ಕೆ ಕುಕ್ಕಿದರು.

ಈ ದೃಶ್ಯವನ್ನು ನೋಡಿದವರು ಅವಾಕ್ಕಾದರು. ಅಂದಹಾಗೆ 'ಫೋರ್ಸ್' ಚಿತ್ರ ಇದೇ ಶುಕ್ರವಾರ (ಸೆ.30)ರಂದು ತೆರೆಗೆ ಅಪ್ಪಳಿಸುತ್ತಿದೆ. ಚಿತ್ರದಲ್ಲಿ ಇನ್ನೇನು ಸ್ಟಂಟ್‌ಗಳಿವೆಯೋ ಎಂಬ ಕುತೂಹಲ ಮೂಡುವಂತೆ ಮಾಡಿದ್ದಾರೆ.

ಜಾನ್ ಅಬ್ರಹಾಂನ ತೋಳ್ಬಲಕ್ಕೆ ಈಗಾಗಲೆ ಹಲವಾರು ಯುವತಿಯರು ಮನಸೋತಿದ್ದಾರೆ. ಇತ್ತೀಚೆಗೆ ಬಾಲಿವುಡ್‌ನ ಅತ್ಯಂತ ಸೆಕ್ಸಿಯಸ್ಟ್ ಬ್ಯಾಚುಲರ್ ಎಂಬ ಟೈಟಲ್ ಬೇರೆ ಸಿಕ್ಕಿದೆ. ಕಾಲೇಜು ಯುವತಿಯರ ವಾರ್ಡ್‌ರೋಬ್‌ಗಳನ್ನು ತಡಕಾಡಿದರೆ ಒಂದಾದರೂ ಜಾನ್ ಅಬ್ರಹಾಂ ಪೋಸ್ಟರ್‌ಗಳು ಸಿಗಲಿಲ್ಲ ಅಂದ್ರೆ ಕೇಳಿ. ಅಷ್ಟರ ಮಟ್ಟಿಗೆ ಜಾನ್ ಯುವತಿಯರ ನಿದ್ದೆಗೆಡಿಸಿದ್ದಾನೆ.

"115 ಕೆ.ಜಿ ತೂಕ ಎತ್ತುವುದೆಂದರೆ ಅಷ್ಟೇನು ಸುಲಭದ ಕೆಲಸವಲ್ಲ. ನನ್ನ ದೇಹದ ತೂಕ 88 ಕೆ.ಜಿ. ನಾನು ಏನನ್ನು ಬೇಕಾದರೂ ಎತ್ತುತ್ತೇನೆ" ಎಂದಿದ್ದಾನೆ. ಅಂದಹಾಗೆ 'ಫೋರ್ಸ್' ಚಿತ್ರ ತಮಿಳಿನ ಯಶಸ್ವಿ 'ಕಾಕ್ಕ ಕಾಕ್ಕ' ಚಿತ್ರದ ರೀಮೇಕ್. ಚಿತ್ರದಲ್ಲಿ ಜಾನ್ ಎಸಿಪಿ ಯಶವರ್ಧನ್ ಆಗಿ ಕಾಣಿಸಲಿದ್ದಾರೆ. (ಪಿಟಿಐ)

More from Filmibeat

English summary
Actor John Abraham has lifted up a bike weighing 150 kg and thrown it in his upcoming action film Force, which will release this Friday. The Bollywood star performed the same bike action scene before the media. He lifted up and threw a 115-kg bike.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X