For Quick Alerts
  ALLOW NOTIFICATIONS  
  For Daily Alerts

  'ಹೀರೋಯಿನ್'ಗೆ ಸ್ಪೂರ್ತಿಯಾದ ಮನಿಷಾ ಕೊಯಿರಾಲಾ

  |

  ನಟಿ ಮನಿಷಾ ಕೊಯಿರಾಲಾ ಸಿನಿಮಾವೊಂದಕ್ಕೆ ಸ್ಪೂರ್ತಿಯಾಗಿದ್ದಾರೆ. ಬಾಲಿವುಡ್ ಖ್ಯಾತ ನಿರ್ದೇಶಕ ಮಧುರ್ ಭಂಡಾರ್ಕರ್ ಅವರ ಚಿತ್ರೀಕರಣದ ಹಂತದಲ್ಲಿರುವ, ಕರೀನಾ ಕಪೂರ್ ಮುಖ್ಯ ಭೂಮಿಕೆಯಲ್ಲಿರುವ 'ಹೀರೋಯಿನ್' ಚಿತ್ರದ ಕಥೆಗೆ ನಟಿ ಮನಿಷಾ ಕೊಯಿರಾಲ ಜೀವನ ಸ್ಪೂರ್ತಿಯಂತೆ. ಆಕೆಯ ಜೀವನದ ಕೆಲ ಘಟನೆಗಳನ್ನು ಈ ಚಿತ್ರದಲ್ಲಿ ಅಳವಡಿಸಲಾಗಿದೆಯಂತೆ.

  ಒಂದಾನೊಂದು ಕಾಲದಲ್ಲಿ ಕೆರಿಯರ್ ಆರಂಭವಾಗಿ ಬಾಲಿವುಡ್ ನಲ್ಲಿ ಸ್ಟಾರ್ ಅನ್ನಿಸಿಕೊಂಡಿದ್ದ ಮನಿಷಾ, ನಂತರ ವೈಯಕ್ತಿಕ ಜೀವನದಲ್ಲಿ ಕಂಡ ಏಳು-ಬೀಳುಗಳು ಆಕೆಯ ಚಿತ್ರರಂಗದ ಪ್ರಯಾಣಕ್ಕೆ ಕರಿನೆರಳಾಗಿ ಕಾಡಿತ್ತು. ಅದರಿಂದ ಆಕೆ ಚೇತರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ನಂತರ ಮದುವೆಯಾದರೂ ಕುಡಿತಕ್ಕೆ ದಾಸಳಾದ ಮನಿಷಾ, ವೈವಾಹಿಕ ಬದುಕಿನಲ್ಲಿಯೂ ಹಳಿತಪ್ಪಿ ಒದ್ದಾಡುತ್ತಿದ್ದಾರೆ.

  ಈ ಕಥೆಯೇ 'ಹೀರೋಯಿನ್' ಚಿತ್ರಕ್ಕೆ ಸ್ಪೂರ್ತಿ ಎಂಬುದು ಸುದ್ದಿಮೂಲಗಳಿಂದ ಬಂದ ಸುದ್ದಿಯಾದರೆ ಅದನ್ನು ನಿರಾಕರಿಸಿ ಮಾತನಾಡಿದ್ದಾರೆ ನಿರ್ದೇಶಕ ಮಧುರ್ ಭಂಡಾರ್ಕರ್. 'ಇದು ಯಾವುದೇ ಒಬ್ಬ ನಟಿಯ ನಿಜ ಜೀವನವನ್ನಾಧರಿಸಿದ ಕಥೆ ಅಲ್ಲ" ಎಂದಿದ್ದಾರೆ ಅವರು. ಒಟ್ಟಿನಲ್ಲಿ ಈ ಚಿತ್ರ ಬಿಡುಗಡೆ ಆಗುವವರೆಗೂ ಗೊಂದಲ ತಪ್ಪಿದ್ದಲ್ಲ ಎನ್ನಬಹುದೇನೋ! (ಏಜೆನ್ಸೀಸ್)

  English summary
  Actress Manisha Koirala life is said to have inspired Madhur Bhandarkar for his next film Heroine starring Kareena Kapoor and Arjun Rampal.
 
  Tuesday, February 28, 2012, 16:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X