»   »  ಸಿಖ್ಖರ ಆಕ್ರೋಶಕ್ಕೆ ಗುರಿಯಾದ ಲವ್ ಆಜ್ ಕಲ್

ಸಿಖ್ಖರ ಆಕ್ರೋಶಕ್ಕೆ ಗುರಿಯಾದ ಲವ್ ಆಜ್ ಕಲ್

Subscribe to Filmibeat Kannada

ಸಿಖ್ ಜನಾಂಗವನ್ನು ಸಿನಿಮಾಗಳಲ್ಲಿ ಅವಹೇಳನಕಾರಿಯಾಗಿ ತೋರಿಸುವುದು ಪರಿಪಾಠವಾಗಿ ಹೋಗುತ್ತಿದೆ ಎಂದು ಪಂಜಾಬ್ ಕಲ್ಚರಲ್ ಅಂಡ್ ಹೆರಿಟೇಜ್ ಮಂಡಳಿ ಕೆಂಡಾಮಂಡಲವಾಗಿದೆ. 'ಲವ್ ಆಜ್ ಕಲ್' ಚಿತ್ರದ ಟ್ರೈಲರ್ ನಲ್ಲೂ ಈ ರೀತಿಯ ಅವಹೇಳನಕಾರಿ ದೃಶ್ಯಗಳಿವೆ ಎಂದು ಅವರು ಆರೋಪಿಸಿದ್ದಾರೆ.

ಜುಲೈ 31ರಂದು ಸೈಫ್ ಅಲಿಖಾನ್ ಅಭಿನಯದ ಲವ್ ಆಜ್ ಕಲ್ ಚಿತ್ರ ಬಿಡುಗಡೆಯಾಗಬೇಕಿದೆ. ಈಗ ಈ ವಿವಾದ ತಲೆಯೆತ್ತಿರುವ ಕಾರಣ ಚಿತ್ರ ಬಿಡುಗಡೆ ತಡವಾಗುವ ಸಾಧ್ಯತೆಗಳಿವೆ. ಲವ್ ಆಜ್ ಕಲ್ ಚಿತ್ರವನ್ನು ಇಂತಿಯಾಜ್ ಅಲಿ ನಿರ್ದೇಶಿಸಿದ್ದಾರೆ. ಸೈಫ್ ಅಲಿಖಾನ್, ದೀಪಿಕಾ ಪಡುಕೋಣೆ ಚಿತ್ರದ ಭೂಮಿಕೆಯಲ್ಲಿದ್ದಾರೆ.

ಈ ತಾಜಾ ವಿವಾದ ಬಗ್ಗೆ ನಿರ್ಮಾಪಕ ಸೈಫ್ ಅಲಿ ಖಾನ್ ಮಾತನಾಡುತ್ತಾ, ಚಿತ್ರದಲ್ಲಿ ವೀರ್ ಸಿಂಗ್ ಪಾತ್ರದಲ್ಲಿ ನಟಿಸಿದ್ದೇನೆ. ಸರ್ದಾಜಿಗಳನ್ನು ಅವಮಾನಿಸುವ ರೀತಿಯಲ್ಲಿ ಯಾವ ಸನ್ನಿವೇಶವೂ ಇಲ್ಲ. ಈ ವಿಷಯವನ್ನು ಮಂಡಳಿಗೆ ತಿಳಿಸಿದ್ದೇನೆ. ಎರಡು ಮೂರು ದಿನಗಳಲ್ಲಿ ಸಂಪೂರ್ಣ ಚಿತ್ರವನ್ನು ಅವರ ಮುಂದೆ ಪ್ರದರ್ಶಿಸಲಿದ್ದೇನೆ ಎಂದರು.

ಚಿತ್ರದಲ್ಲಿರುವ ಸರ್ದಾರ್ ಜೋಕನ್ನು ತೆಗೆಯುವುವಂತೆ ಈಗಾಗಲೇ ಸೆನ್ಸಾರ್ ಮಂಡಳಿ ಸೈಫ್ ಅಲಿಖಾನ್ ಗೆ ಸೂಚಿಸಿದೆ. ಚಿತ್ರದಲ್ಲಿ 'ಒಬ್ಬ ಸರ್ದಾರ್ ಜಿ ಇದ್ದ...' ಎಂದು ಜೋಕ್ ಆರಂಭವಾಗುತ್ತದೆ. ಇದನ್ನು ಬದಲಾಯಿಸಿ 'ಒಬ್ಬ ವ್ಯಕ್ತಿಯಿದ್ದ...' ಎಂದು ಬದಲಾಯಿಸಿಕೊಳ್ಳಲು ಸೆನ್ಸಾರ್ ಮಂಡಳಿ ಸಲಹೆ ನೀಡಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada