For Quick Alerts
  ALLOW NOTIFICATIONS  
  For Daily Alerts

  ಪಾಕ್ ಸಿನಿಮಾ ತಾರೆಗೆ ಮಹೇಶ್ ಭಟ್ ಕಪಾಳಮೋಕ್ಷ

  By Rajendra
  |

  ಬಾಲಿವುಡ್ ಚಿತ್ರ ನಿರ್ಮಾಪಕ, ನಿರ್ದೇಶಕ ಮಹೇಶ್ ಭಟ್ ಅವರು ತಮ್ಮನ್ನು ಮಾನಸಿಕಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಪಾಕಿಸ್ತಾನಿ ಸಿನಿಮಾ ತಾರೆ ಮೀರಾ ಆರೋಪಿಸಿದ್ದಾರೆ. 'ನಝರ್' ಎಂಬ ಚಿತ್ರದಲ್ಲಿ ಅಶ್ಮಿತ್ ಪಟೇಲ್‌ಗೆ ಜತೆಯಾಗಿ ಮೀರಾ ಅಭಿನಯಿಸಿದ್ದರು. ಬೇರೆ ನಿರ್ಮಾಪಕರ ಚಿತ್ರದಲ್ಲಿ ನಟಿಸಲಿದ್ದೇನೆ ಎಂಬ ಕಾರಣಕ್ಕೆ ಅವರು ತಮಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದಿದ್ದಾರೆ ಆಕೆ.

  ಈ ಸಿನಿಮಾ ತಾರೆ ಮಹೇಶ್ ಭಟ್ ಅವರನ್ನು ಗಾಡ್ ಫಾದರ್ ಎಂದೇ ನಂಬಿದ್ದರು. ಸುಭಾಷ್ ಘಾಯ್ ಅವರನ್ನು ಭೇಟಿ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದಾಗ ಮಹೇಶ್ ಭಟ್‌ ತಮ್ಮನ್ನು ಥಳಿಸಿದ್ದಾಗಿ ಮೀರಾ ಹೇಳಿಕೊಂಡಿದ್ದಾರೆ. "ಕೇವಲ ನನ್ನ ಚಿತ್ರಗಳಲ್ಲಿ ಮಾತ್ರ ಅಭಿನಯಿಸಬೇಕು. ಬೇರೆಯವರ ಚಿತ್ರಗಳಲ್ಲಿ ಅಭಿನಯಿಸುವಂತಿಲ್ಲ" ಎಂದು ತಾಕೀತು ಮಾಡಿದ್ದಾಗಿ ಆಕೆ ಆರೋಪಿಸಿದ್ದಾರೆ.

  ಒಮ್ಮೆ ಹೋಟೆಲ್‌ವೊಂದರಲ್ಲಿ ಸುಭಾಷ್ ಘಾಯ್ ಅವರನ್ನು ಭೇಟಿಯಾಗಿದ್ದೆ. ಅವರೊಂದಿಗೆ ಮಾತನಾಡುವ ಇಂಗಿತವನ್ನು ಮಹೇಶ್ ಬಳಿ ವ್ಯಕ್ತಪಡಿಸಿದ್ದೆ. ಅಷ್ಟಕ್ಕೇ ಕುಪಿತರಾದ ಮಹೇಶ್ ಸಿಕ್ಕಾಪಟ್ಟೆ ಕೂಗಾಡಿ ತನ್ನ ಕೆನ್ನೆಗೆ ಮೂರು ಸಲ ಹೊಡಿದಿದ್ದಾಗಿ ಆಕೆ ಕಣ್ಣೀರುಗರೆದಿದ್ದಾರೆ. ತಮ್ಮ ಏಳಿಗೆಯನ್ನು ಸಹಿಸದೆ ಅವರು ಹೀಗೆ ಮಾಡಿದ್ದಾಗಿಯೂ ಹೇಳಿಕೊಂಡಿದ್ದಾರೆ.

  English summary
  Pakistani actress Meera who debuted with Mahesh Bhatt’s banner opposite Ashmit Patel in ‘Nazar’ charges Mahesh Bhatt of physically and mentally abusing her. She claimed that Mahesh Bhatt who has been a Godfather to her slapped her when she wanted to work with other filmmakers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X