»   »  ಶಾರುಖ್, ಐಶ್ ನಡುವೆ ಮತ್ತೆ ಚಿಗುರಿತು ಸ್ನೇಹ

ಶಾರುಖ್, ಐಶ್ ನಡುವೆ ಮತ್ತೆ ಚಿಗುರಿತು ಸ್ನೇಹ

Subscribe to Filmibeat Kannada
Shah Rukh says sorry Ash
ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಮತ್ತು ಐಶ್ವರ್ಯ ರೈ ನಡುವಿನ ಸ್ನೇಹ ಸಂಬಂಧ ಬಹಳಷ್ಟು ಹಿಂದೆಯೇ ಹಳಸಿತ್ತು. ಮಹಾಭಾರತದ ಕರ್ಣನ ಸಾವಿಗೆ ಎಷ್ಟು ಕಾರಣಗಳಿವೆಯೋ ಇವರಿಬ್ಬರ ನಡುವಿನ ಹಗೆತನಕ್ಕೂ ಅಷ್ಟೇ ಕಾರಣಗಳನ್ನು ಕೊಡಬಹುದು!

'ಚಲ್ತೆ ಚಲ್ತೆ' ಚಿತ್ರದಿಂದ ಆರಂಭವಾದ ದ್ವೇಷ ಇಲ್ಲಿಯವರೆಗೂ ಮುಂದುವರೆದುಕೊಂಡು ಬಂದಿತ್ತು. ಆ ಚಿತ್ರದಲ್ಲಿ ಐಶ್ ಗೆ ಬದಲಾಗಿ ರಾಣಿ ಮುಖರ್ಜಿಗೆ ಅವಕಾಶ ಕೊಟ್ಟಿದ್ದಕ್ಕೆ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಯಿತು. ಶಾರುಕ್ ಮೇಲೆ ಐಶ್ ಕೆಂಡಾಮಂಡಲವಾಗಿದ್ದರು. ಅಷ್ಟೇ ಅಲ್ಲ ತನ್ನ ಮದುವೆಗೆ ಶಾರುಖ್ ದಂಪತಿಗಳನ್ನು ಐಶ್ ಆಹ್ವಾನಿಸಲೇ ಇಲ್ಲ. ಇದರಿಂದ ಇವರಿಬ್ಬರ ನಡುವಿನ ಅಂತರ ಮತ್ತಷ್ಟು ಹೆಚ್ಚಾಯಿತು.

ಕತ್ರಿಕಾ ಕೈಫ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಐಶ್ ಮೇಲೆ ಶಾರುಖ್ ಕೊಟ್ಟಂತಹ ಹೇಳಿಕೆಗಳು ಇವರಿಬ್ಬರನ್ನೂ ಸಂಪೂರ್ಣವಾಗಿ ದೂರ ಮಾಡಿದವು. ಆದರೆ ಕರಣ್ ಜೋಹರ್ ಹುಟ್ಟುಹಬ್ಬದ ಸಂಭ್ರಮ ಇವೆಲ್ಲವನ್ನೂ ಅಳಿಸಿ ಹಾಕಿತು. ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಐಶ್ ಮತ್ತು ಶಾರುಖ್ ತಮ್ಮ ನಡುವಿನ ವೈರತ್ವವನ್ನು ಶಾಶ್ವತವಾಗಿ ದೂರ ಮಾಡಿಕೊಂಡಿದ್ದಾರೆ.

ಐಶ್ ಬಳಿ ಹೋಗಿ ಶಾರುಖ್, ನಾನು ನಿನ್ನ ಬಗ್ಗೆ ಗೊತ್ತಿಲ್ಲದೆ ಕೆಲವೊಂದು ತಪ್ಪುಗಳನ್ನು ಮಾಡಿದ್ದೇನೆ. ಅವುಗಳನ್ನು ತಲೆಗೆ ಹಾಕಿಕೊಳ್ಳದೆ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಅಂಗಲಾಚಿದ್ದಾರೆ. ಅದಕ್ಕೆ ಐಶ್ ಸಹ ಐಸ್ ನಂತೆ ಕರಗಿ ಹೋಗಿ ಆಗಿದ್ದೆಲಾ ಒಳ್ಳೆದಕ್ಕೆ ಎಂದು ಒಪ್ಪಿಗೆ ಸೂಚಿಸಿದ್ದಾರೆ. ನಂತರ ಇಬ್ಬರೂ ಜತೆಯಾಗಿ ಸ್ವಲ್ಪ ಸಮಯ ಡ್ಯಾನ್ಸ್ ಮಾಡಿ ತಮ್ಮ ಸ್ನೇಹವನ್ನು ಇಡೀ ಜಗತ್ತಿಗೆ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada