»   » ಮಿಸ್ ಬಿಕಿನಿ ಆರ್ತಿ ಈಗ ಬಾಲಿವುಡ್‌ ಮಂದಿಯ ರಸಿಕರ ರಾಣಿ

ಮಿಸ್ ಬಿಕಿನಿ ಆರ್ತಿ ಈಗ ಬಾಲಿವುಡ್‌ ಮಂದಿಯ ರಸಿಕರ ರಾಣಿ

Subscribe to Filmibeat Kannada

2007ರಲ್ಲಿ 'ಮಿಸ್ ಬಿಕಿನಿ'ಯಾಗಿ ಆಯ್ಕೆಯಾಗಿದ್ದ ನಟಿ ಆರ್ತಿ ಛಾಬ್ರಿಯಾ, ಈಗ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾಳೆ. ಇದು ಇನ್ನೊಂದು ಖ್ಯಾತಿಯೋ, ಕ್ಯಾತೆಯೋ, ಕುಖ್ಯಾತಿಯೋ ಆ ವಿಷಯ ಇಲ್ಲಿ ಅಮುಖ್ಯ. ಬಾಲಿವುಡ್‌ನ ರಸಿಕರ ರಾಣಿ ಎಂಬ ಖ್ಯಾತಿಯಿಂದ ಆರ್ತಿ, ಉಬ್ಬಿ ಹೋಗಿದ್ದಾಳೆ. ದೂರವಾಣಿ ಮೂಲಕ ಸಂಗ್ರಹಿಸಲಾದ ಜನಾಭಿಪ್ರಾಯದಲ್ಲಿ, ಇತರ ತಾರೆಯರನ್ನು ಹಿಂದಿಕ್ಕಿ ಈ ಪಟ್ಟ ಧರಿಸಿದ್ದಾಳೆ ಆರ್ತಿ.

ಐದು ದಿನಗಳ ಆನ್‌ಲೈನ್ ಮತದಾನದಲ್ಲಿ ಐದು ಲಕ್ಷ ಓಟುಗಳು ಈಕೆಯ ಮಡಿಲಿಗೆ ಬಿದ್ದಿವೆ. ಮಲ್ಲಿಕಾ ಶೆರಾವತ್, ಬಿಪಾಶ ಬಸು, ಪ್ರಿಯಾಂಕ ಚೋಪ್ರ ಈ ಎಲ್ಲಾ ಗಯ್ಯಾಳಿಗಳೂ ಸ್ಪರ್ಧೆಯಲ್ಲಿ ಇದ್ದರಾದರೂ. ರಸಿಕರ ರಾಣಿಯ ಪಟ್ಟ ಆರ್ತಿ ಛಾಬ್ರಿಯಾ ಪಾಲಾಗಿದೆ. ಸೆಲೀನಾ ಜೈಟ್ಲೆಗೆ ಕೇವಲ ಬೆರಳೆಣಿಕೆಯಷ್ಟು ಓಟುಗಳು ಮಾತ್ರ ಬಿದ್ದು ಠೇವಣಿ ಕಳೆದುಕೊಂಡಿದ್ದಾಳೆ.

ಆನ್‌ಲೈನಲ್ಲಿ 500ಕ್ಕೂ ಅಧಿಕ ಸಂದರ್ಶನಗಳನ್ನು ಮಾಡಿ, ಅಂತರ್ಜಾಲದಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ತಾಳೆ ಮಾಡಿ ನೋಡಿದಾಗ ಆರ್ತಿ ಛಾಬ್ರಿಯ ಎಲ್ಲರಿಗಿಂತ ಮುಂದಿದ್ದಳು. ಈಕೆ ಪ್ರತಿಸ್ಪರ್ಧಿಗಳನ್ನು ಮೈಲುಗಟ್ಟಲೆ ಹಿಂದಿಕ್ಕಿ ಮುನ್ನುಗ್ಗಿದ್ದಾಳೆ. ಹಿಂದಿ, ತಮಿಳು, ತೆಲುಗು ಮಾತ್ರವಲ್ಲದೇ ಕನ್ನಡದಲ್ಲೂ ಆರ್ತಿ ಛಾಬ್ರಿಯಾ ಕಾಲಿಟ್ಟಿದ್ದಾಳೆ. ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ ಚಿತ್ರಗಳಲ್ಲಿ(ಆಹಂ ಪ್ರೇಮಾಸ್ಮಿ ಮತ್ತು ಸಂತ) ಆರ್ತಿ ಮಿಂಚಿದ್ದಾಳೆ.

(ದಟ್ಸ್‌ ಎಂಟರ್‌ಟೈನ್ಮೆಂಟ್ ವಾರ್ತೆ)

ಮಿಸ್ ಬಿಕಿನಿಗೆ ಆರತಿ ಛಾಬ್ರಿಯಾ ಪೋಸ್ ನೀಡಿದ್ದು ಹೀಗೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada