For Quick Alerts
  ALLOW NOTIFICATIONS  
  For Daily Alerts

  ಚಾರ್ಲ್ಸ್ ಶೋಭ್ ರಾಜ್ ಪಾತ್ರದಲ್ಲಿ ಶಾರುಖ್ ಖಾನ್

  By Srinath
  |

  ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಸದ್ಯದಲ್ಲೇ ಭಯಾನಕ ಪಾತಕಿ, 'ಬಿಕಿನಿ' ಕಿಲ್ಲರ್ ಚಾರ್ಲ್ಸ್ ಶೋಭ್ ರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ! ಇದು ನಿಜ. ಫ್ರೆಂಚ್ ನಿರ್ಮಾಪಕ ಅಲೈನ್ ಆಂಡ್ರ್ಯೂ ಚಾರ್ಲ್ಸ್ ಶೋಭ್ ರಾಜ್ ನಿಜಜೀವನವನ್ನು ಬೆಳ್ಳಿ ಪರದೆಯಲ್ಲಿ ಭಟ್ಟಿಯಿಳಿಸಲು ನಿರ್ಧರಿಸಿದ್ದು, ಬಾಲಿವುಡ್ ನ ಮುಕುಟವಿಲ್ಲದ ರಾಜ ಶಾರುಖ್ ಮಾತ್ರ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲರು ಎಂದಿದ್ದಾರೆ. ಅಂದಹಾಗೆ, ಖತರ್ನಾಕ್ ಶೋಭರಾಜ್ ತನ್ನ ಜೀವನಚರಿತ್ರೆ ಆಧರಿತ ಸಿನಿಮಾ ನಿರ್ಮಾಣದ ಹಕ್ಕನ್ನು ಆಂಡ್ರ್ಯೂಗೆ ದಯಪಾಲಿಸಿದ್ದಾನೆ.

  ದೆಹಲಿಯ ತಿಹಾರ್ ಜೈಲಿನಲ್ಲಿದ್ದಾಗಲೇ ಚಾರ್ಲ್ಸ್ ನ ಮೊದಲ ಪತ್ನಿ ಚಂತಲಾ ತನ್ನ ಪತಿರಾಯನ ಲೀಲೆಗಳ ಬಗ್ಗೆ ಸುಂದರ ಚಿತ್ರ ನಿರ್ಮಿಸಿಕೊಡಿ ಎಂದು ನಿರ್ಮಾಪಕ ಆಂಡ್ರ್ಯೂ ಮತ್ತು ಅವರ ಗೆಳೆಯ ಫ್ರಾಂಕೋಯಿಸ್ ಗೆ ಗಂಟುಬಿದ್ದಿದ್ದಳಂತೆ. ಚಾರ್ಲ್ಸ್ ಶೋಭ್ ರಾಜ್ ಕುರಿತ ಚಿತ್ರ ನಿರ್ಮಾಣಕ್ಕಾಗಿ ಆಂಡ್ರ್ಯೂ ಇದೀಗ ಸಹ ನಿರ್ಮಾಪಕನ ತಲಾಶೆಯಲ್ಲಿದ್ದಾರೆ. ಪಾತಕಿ ಚಾರ್ಲ್ಸ್ ಭಾರತವನ್ನು ದೀರ್ಘಕಾಲ ತನ್ನ ಅಡ್ಡೆಯಾಗಿಸಿಕೊಂಡಿದ್ದ. ಆದ್ದರಿಂದ ಭಾರತದಲ್ಲಿಯೇ ಚಿತ್ರದ ಶೂಟ್ ಮಾಡುವುದಾಗಿ ಆಂಡ್ರ್ಯೂ ಘೋಷಿಸಿದ್ದಾರೆ.

  ಕುಖ್ಯಾತನಾಗಿಯೇ ಚಾಲ್ತಿಯಲ್ಲಿರಲು ಬಯಸಿದ ಶೋಬ್ ರಾಜ್ ತನ್ನ ಕುರಿತಾದ ಪುಸ್ತಕ, ಕಾದಂಬರಿಗಳ ಮೂಲಕ ಕುಖ್ಯಾತಿಗಳಿಸಿದ್ದಾನೆ. ಇದೀಗ ಮೊದಲ ಬಾರಿಗೆ ಬೆಳ್ಳಿಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾನೆ. ಕುತೂಹಲಕಾರಿ ಸಂಗತಿಯೆಂದರೆ ಚಿತ್ರದಲ್ಲಿ ತನ್ನನ್ನು ಖೂನಿಕೋರನಂತೆ ಪ್ರತಿಬಿಂಬಿಸಬಾರದು. ಒಟ್ಟಾರೆ ಚಿತ್ರಕತೆಯು ತನ್ನ ವಕೀಲ ಇಸಾಬೆಲ್ಲೆ ಕೋಟಂಟ್ ಪೇರಿ ನಿಯಂತ್ರಣದಲ್ಲಿಯೇ ಇರಬೇಕು ಎಂಬ ಷರತ್ತು ವಿಧಿಸಿದ್ದಾನೆ. 'ಇತ್ತೀಚಿನ ದಿನಗಳಲ್ಲಿ ನನ್ನ ಅಭಿಮಾನಿಗಳು ಒಂದೇ ತೆರೆನಾದ ಪಾತ್ರಗಳಿಗಿಂತ ತುಸು ಬದಲಾವಣೆಯನ್ನು ಬಯಸುತ್ತಿದ್ದಾರೆ. ಈ ಪಾತ್ರ ಅಂತಹ ಉತ್ತಮ ಅವಕಾಶ ಒದಗಿಸಲಿದೆ ಎಂದು ಶಾರುಖ್ ಪ್ರತಿಕ್ರಿಯಿಸಿದ್ದಾರೆ.

  English summary
  Buzz has it that Shahrukh Khan is all set to don the part of Bikini Killer Charles Shobraj! French filmmaker Alain Andre is making a flick on the serial killer and he has wished to cast none other than the undisputed king of Bollywood in the film as the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X