»   » 61ನೇ ಫಿಲ್ಮ್ ಫೇರ್ ಪ್ರಶಸ್ತಿ: 'ಮಸ್ತಾನಿ' ಬಗಲಿಗೆ 9 ಪ್ರಶಸ್ತಿ

61ನೇ ಫಿಲ್ಮ್ ಫೇರ್ ಪ್ರಶಸ್ತಿ: 'ಮಸ್ತಾನಿ' ಬಗಲಿಗೆ 9 ಪ್ರಶಸ್ತಿ

Posted By:
Subscribe to Filmibeat Kannada

ಇಡೀ ಚಿತ್ರರಂಗಕ್ಕೆ ಸೀಮಿತವಾಗಿರುವ ಪ್ರಶಸ್ತಿ ಪ್ರಧಾನ ಸಮಾರಂಭಗಳಲ್ಲಿ ಒಂದಾದ 'ಫಿಲ್ಮ್ ಫೇರ್ ಆವಾರ್ಡ್ 2016' ಶುಕ್ರವಾರ ಸಂಜೆ 61ನೇ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಘೋಷಿಸಿತು.

ಈ ಬಾರಿಯ 61ನೇ ಫಿಲ್ಮ್ ಫೇರ್ ಸಮಾರಂಭದಲ್ಲಿ ಬಾಲಿವುಡ್ ನ ಬಿಗ್ ಬಜೆಟ್ ಸಿನಿಮಾ 'ಬಾಜೀರಾವ್ ಮಸ್ತಾನಿ' ಅತ್ಯಂತ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡು ಈ ವರ್ಷದ ಅತ್ಯುತ್ತಮ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅತ್ಯುತ್ತಮ ನಟ, ಅತ್ಯುತ್ತಮ ಪೋಷಕ ನಟಿ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಹಾಡುಗಾರ್ತಿ, ಅತ್ಯುತ್ತಮ ಕೊರಿಯೋಗ್ರಫಿ, ಅತ್ಯುತ್ತಮ ಆಕ್ಷನ್ ಹೀಗೆ ಅತೀ ಹೆಚ್ಚು ಪ್ರಶಸ್ತಿಗಳನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಬಾಜೀರಾವ್ ಮಸ್ತಾನಿ' ಸಿನಿಮಾ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಈ ಬಾರಿ ನಟ ರಣವೀರ್ ಸಿಂಗ್, ನಟಿ ದೀಪಿಕಾ ಪಡುಕೋಣೆ, ನಟಿ ಪ್ರಿಯಾಂಕ ಚೋಪ್ರಾ, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ಗಾಯಕಿ ಶ್ರೇಯಾ ಘೋಷಾಲ್ ಮುಂತಾದವರು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ತಮ್ಮ ಬಗಲಿಗೆ ಹಾಕಿಕೊಂಡಿದ್ದಾರೆ.

ಇಷ್ಟು ಜನ ತಾರೆಯರು ಯಾವ ಯಾವ ಸಾಧನೆಗೆ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು ಅನ್ನೋದನ್ನ ನಾವು ಹೇಳುತ್ತೇವೆ. ನೋಡಲು ಸ್ಲೈಡ್ಸ್ ಕ್ಲಿಕ್ ಮಾಡಿ..

ಈ ವರ್ಷದ ಅತ್ಯುತ್ತಮ ಚಿತ್ರ

ಮರಾಠಾ ಪೇಶ್ವೆಯ ಜೀವನಾಧಾರಿತ ಚಿತ್ರವಾದ ಐತಿಹಾಸಿಕ ಸಿನಿಮಾ 'ಬಾಜೀರಾವ್ ಮಸ್ತಾನಿ', ಈ ವರ್ಷದ ಅತ್ಯುತ್ತಮ ಸಿನಿಮಾವಾಗಿ ಹೊರಹೊಮ್ಮಿದೆ. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಆಕ್ಷನ್-ಕಟ್ ಹೇಳಿದ್ದ ಈ ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಪ್ರಿಯಾಂಕ ಚೋಪ್ರಾ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.

ಅತ್ಯುತ್ತಮ ನಟ

'ಬಾಜೀರಾವ್ ಮಸ್ತಾನಿ' ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ ನಟ ರಣವೀರ್ ಸಿಂಗ್ ಅವರು ಪೇಶ್ವ ಬಾಜೀರಾವ್ ನಟನೆಗೆ '61ನೇ ಫಿಲ್ಮ್ ಫೇರ್ ಆವಾರ್ಡ್' ಸಮಾರಂಭದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್ ಅವರು ತಮ್ಮ ತಲೆಯನ್ನು ಪೂರ್ತಿ ಬೋಳಿಸಿ ಪಕ್ಕಾ ಬ್ರಾಹ್ಮಣ ಕುಟುಂಬದವರಾಗಿ ನಟಿಸಿದ್ದರು.

ಅತ್ಯುತ್ತಮ ನಿರ್ದೇಶಕ

'ಬಾಜೀರಾವ್ ಮಸ್ತಾನಿ' ಎಂಬ ಐತಿಹಾಸಿಕ ಕಥೆಯಾಧರಿತ ಸಿನಿಮಾದ ನಿರ್ದೇಶನಕ್ಕೆ, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಈ ಬಾರಿ ಅತ್ಯುತ್ತಮ ನಿರ್ದೇಶಕ ಎಂಬ ಪಟ್ಟ ಲಭಿಸಿದೆ. ಇವರು ಬ್ಯಾಕ್ ಗ್ರೌಂಡ್, ಸಿನಿಮಾಟೋಗ್ರಫಿ ಮತ್ತು ವಿಶುವಲ್ಸ್ ನಿಂದ ತಮ್ಮ ಸಿನಿಮಾವನ್ನು ಅದ್ಭುತವಾಗಿಸುತ್ತಾರೆ.

ಅತ್ಯುತ್ತಮ ಪೋಷಕ ನಟಿ

'ಬಾಜೀರಾವ್ ಮಸ್ತಾನಿ' ಸಿನಿಮಾದಲ್ಲಿ ಪೇಶ್ವೆ ಬಾಜೀರಾವ್ ಪತ್ನಿ ಕಾಶೀಭಾಯಿಯಾಗಿ ನಟಿಸಿ ಮೆಚ್ಚುಗೆ ಗಳಿಸಿರುವ ನಟಿ ಪ್ರಿಯಾಂಕ ಚೋಪ್ರಾ ಅವರು ಈ ಬಾರಿ ಅತ್ಯುತ್ತಮ ಪೋಷಕ ನಟಿ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅತ್ಯುತ್ತಮ ಹಿನ್ನಲೆ ಗಾಯಕಿ

'ಬಾಜೀರಾವ್ ಮಸ್ತಾನಿ' ಸಿನಿಮಾದ 'ದೀವಾನಿ ಮಸ್ತಾನಿ' ಹಾಡಿಗೆ ಖ್ಯಾತ ಹಿನ್ನಲೆ ಗಾಯಕಿ ಶ್ರೇಯಾ ಘೋಷಾಲ್ ಅವರಿಗೆ ಅತ್ಯುತ್ತಮ ಹಿನ್ನಲೆ ಗಾಯಕಿ ಎಂಬ ಪ್ರಶಸ್ತಿ ಲಭಿಸಿದೆ.

ಅತ್ಯುತ್ತಮ ನಟಿ

ಅಮೀತಾಭ್ ಬಚ್ಚನ್, ಇರ್ಫಾನ್ ಖಾನ್ ಮತ್ತು ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದ 'ಪೀಕು' ಚಿತ್ರದ ಅಭಿನಯಕ್ಕೆ ನಟಿ ದೀಪಿಕಾ ಪಡುಕೋಣೆ ಅವರು ಈ ಬಾರಿಯ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸಿದರು. ಈ ಪ್ರಶಸ್ತಿಯನ್ನು ನಟಿ ಡಿಪ್ಪಿ ತನ್ನ ತಂದೆ-ತಾಯಿಗೆ ಅರ್ಪಿಸಿದ್ದಾರೆ.

English summary
The filmfare awards are probably the most fair and reasonable awards of this season. Sanjay Leela Bhansali’s 'Bajirao Mastani' walked away with 9 Filmfare awards on Friday night, including in major categories such as Best Film, Best Picture, Best Actor (Ranveer Singh), Best Actress In A Supporting Role (Priyanka Chopra), Best Singer Female (Shreya Ghosal), Best Choreography (Birju Maharaj) and Best Action (Sham Kaushal).
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada