For Quick Alerts
  ALLOW NOTIFICATIONS  
  For Daily Alerts

  ಕೋಲ್ಕತ್ತಾದ ದುರ್ಗ ಪೂಜೆ ಪೆಂಡಲ್‌ನಲ್ಲಿ ನಟ ಸೋನು ಸೂದ್‌ಗೆ ಗೌರವ

  |

  ಕೊರೊನಾ ವೈರಸ್ ಲಾಕ್‌ಡೌನ್‌ ವೇಳೆ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮನೆಗೆ ಹೋಗಲು ಸಹಾಯ ಮಾಡಿದ ಬಾಲಿವುಡ್ ನಟ ಸೋನು ಸೂದ್ ಅವರಿಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ರಿಯಲ್ ಹೀರೋ ಎಂದು ಅನೇಕರು ಶ್ಲಾಘಿಸಿದರು.

  ಇದೀಗ, ಕೋಲ್ಕತ್ತಾದ ಕೇಶ್ತಪುರ್ ಪ್ರಫುಲ್ಲಾ ಕಾನನ್ ದುರ್ಗಾ ಪೂಜಾ ಸಮಿತಿ ಸೋನು ಸೂದ್ ಅವರನ್ನು ಬಹಳ ವಿಶೇಷವಾಗಿ ಗೌರವಿಸಿದೆ.

  ಸೋನು ಸೂದ್ ಗೆ 'ಭಾರತ ರತ್ನ' ಸಿಗಬೇಕು: ಪ್ರಧಾನಿ ಮೋದಿ ಬಳಿ ಅಭಿಮಾನಿಗಳ ಮನವಿ

  ದಸರಾ ಹಬ್ಬದ ವಿಶೇಷವಾಗಿ ಕೋಲ್ಕತ್ತಾದ ದುರ್ಗಾ ಪೂಜಾ ಪೆಂಡಲ್‌ನಲ್ಲಿ ಸೋನು ಸೂದ್ ಅವರ ವಿಗ್ರಹ ನಿರ್ಮಿಸುವ ಮೂಲಕ ನಟನ ನಿಸ್ವಾರ್ಥ ಸೇವೆಗೆ ಗೌರವ ಸಮರ್ಪಣೆ ಮಾಡಿದೆ. ಜೊತೆಗೆ ಹಲವು ಹೃದಯ ವಿದ್ರಾವಕ ಕ್ಷಣಗಳನ್ನು ಸಹ ಪೆಂಡಲ್‌ನಲ್ಲಿ ಪ್ರದರ್ಶಿಸಲಾಗಿದೆ.

  ಲಾಕ್‌ಡೌನ್ ವೇಳೆ ಮನೆಗೆ ತೆರಳಲು ಸಾಧ್ಯವಾಗದೇ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರಿಗೆ ತಮ್ಮ ಮನೆ ತಲುಪಲು ಬಸ್ಸುಗಳು, ರೈಲುಗಳು ಮತ್ತು ವಿಮಾನಗಳನ್ನು ಏರ್ಪಡಿಸಿದ್ದರು.

  ಸೋನು ಸೂದ್‌ ಗೆ ಶಿಲ್ಪಾ ಶೆಟ್ಟಿ ಮಗ ಸಲ್ಲಿಸಿದ ಗೌರವ ಅಭಿನಂದನಾರ್ಹ

  ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಸಹಕಾರಿಯಾಗಲಿ ಎಂದು ಪೂರ್ಣ ವಿದ್ಯಾರ್ಥಿವೇತನವನ್ನು ನೀಡಲು ಯೋಜನೆಯೊಂದನ್ನು ಸೋನು ಸೂದ್ ಪ್ರಾರಂಭಿಸಿದ್ದಾರೆ.

  English summary
  A Durga Puja pandal in Kolkata has installed a life-sized idol of Sonu Sood, after his selfless act of helping migrant labourers return to their houses during COVID19 pandemic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X