For Quick Alerts
  ALLOW NOTIFICATIONS  
  For Daily Alerts

  ನಾಗಚೈತನ್ಯ-ಸಮಂತಾ ವಿಚ್ಛೇದನಕ್ಕೆ ಆಮಿರ್ ಖಾನ್ ಕಾರಣ: ಅವರದ್ದು ಬ್ಲ್ಯಾಕ್ ಹಾರ್ಟ್!

  |

  ದಕ್ಷಿಣ ಭಾರತದ ಮುದ್ದಾದ ಜೋಡಿಗಳಲ್ಲಿ ಸಮಂತಾ ಹಾಗೂ ನಾಗಚೈತನ್ಯ ಕೂಡ ಒಬ್ಬರಾಗಿದ್ದರು. ಹಲವು ವರ್ಷಗಳು ಪ್ರೀತಿ ಮಾಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಜೋಡಿ ವೈವಾಹಿಕ ಜೀವನಕ್ಕೂ ಕಾಲಿಟ್ಟಿತ್ತು. ಆದರೆ, ಬಹುಬೇಗನೇ ಕೌಟುಂಬಿಕ ಜೀವನಕ್ಕೆ ತಿಲಾಂಜಲಿ ಹೇಳಿದ್ದರು. ಕಳೆದ ವರ್ಷವೇ ಇಬ್ಬರೂ ವಿಚ್ಛೇದನ ನೀಡುವುದಾಗಿ ಘೋಷಿಸಿದ್ದರು. ಅಲ್ಲಿಂದಲೂ ಇವರಿಬ್ಬರ ಡಿವೋರ್ಸ್ ಸದ್ದು ಮಾಡುತ್ತಲೇ ಇದೆ.

  ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನಕ್ಕೆ ಮುಂದಾಗಿದ್ದು ಯಾಕೆ? ಅನ್ನೋದನ್ನು ಇಬ್ಬರೂ ಸ್ಪಷ್ಟಪಡಿಸಿಲ್ಲ. ಇದೇ ವಿಚಾರವಾಗಿ ಆಗಾಗ ಚರ್ಚೆಯಾಗುತ್ತಲೇ ಇರುತ್ತೆ. ಆಗಾಗಾ ಸಮಂತಾ ಕೂಡ ವಿಚ್ಛೇದನದ ಬಗ್ಗೆ ಮಾತಾಡುತ್ತಾರೆ ಹೊರತು ಇಬ್ಬರ ನಡುವೆ ವೈಮಸ್ಸು ಮೂಡಿದ್ದೇಕೆ? ಅನ್ನುವುದನ್ನು ಅಪ್ಪಿ-ತಪ್ಪಿಯೂ ಬಾಯಿಬಿಟ್ಟಿಲ್ಲ.

  ಯಶ್ ಆಯ್ತು ಆಮಿರ್ ಮೇಲೆ ಕಣ್ಣು: 'ಲಾಲ್ ಸಿಂಗ್ ಚಡ್ಡ' ಬಾಕ್ಸಾಫೀಸ್‌ ದುರಂತ ಎಂದ ಕಮಾಲ್! ಯಶ್ ಆಯ್ತು ಆಮಿರ್ ಮೇಲೆ ಕಣ್ಣು: 'ಲಾಲ್ ಸಿಂಗ್ ಚಡ್ಡ' ಬಾಕ್ಸಾಫೀಸ್‌ ದುರಂತ ಎಂದ ಕಮಾಲ್!

  ಇತ್ತೀಚೆಗೆ ಕರಣ್ ಜೋಹರ್ ನಡೆಸಿಕೊಡುವ 'ಕಾಫಿ ವಿಥ್ ಕರಣ್ ಸೀಸನ್ 7' ಕಾರ್ಯಕ್ರಮದಲ್ಲಿಯೂ ಸಮಂತಾ ವಿಚ್ಛೇದನದ ಬಗ್ಗೆ ಮಾತಾಡಿದ್ದರು. ಒಂದೇ ರೂಮಿನಲ್ಲಿ ಇಬ್ಬರನ್ನು ಬಿಟ್ಟರೆ, ಮೊನಚಾದ ವಸ್ತುಗಳನ್ನು ಇಡಬೇಡಿ ಎಂದು ಹೇಳಿದ್ದರು. ಈಗ ಬಾಲಿವುಡ್‌ನ ವಿವಾದಾತ್ಮಕ ವಿಮರ್ಶಕ ಕಮಾಲ್ ಆರ್ ಖಾನ್ ಇವರಿಬ್ಬರ ವಿಚ್ಛೇದನದ ಮಧ್ಯೆ ಆಮಿರ್ ಖಾನ್ ಹೆಸರು ತಂದು ಹೊಸ ಬಾಂಬ್ ಸಿಡಿಸಿದ್ದಾರೆ.

  ಆಮಿರ್ ಖಾನ್ ಅರಸಿ ಬಂದ ಹಾಲಿವುಡ್ ಸ್ಟಾರ್ ನಿರ್ದೇಶಕರು, ಜೊತೆಗೆ ಧನುಶ್!ಆಮಿರ್ ಖಾನ್ ಅರಸಿ ಬಂದ ಹಾಲಿವುಡ್ ಸ್ಟಾರ್ ನಿರ್ದೇಶಕರು, ಜೊತೆಗೆ ಧನುಶ್!

  'ಆಮಿರ್ ಖಾನ್ ಕೈವಾಡವಿದೆ'

  'ಆಮಿರ್ ಖಾನ್ ಕೈವಾಡವಿದೆ'

  ನಾಗಚೈತನ್ಯ ಹಾಗೂ ಆಮಿರ್ ಖಾನ್ ಇಬ್ಬರೂ ಇತ್ತೀಚೆಗೆ ತುಂಬಾನೇ ಕ್ಲೋಸ್ ಆಗಿದ್ದರು. 'ಲಾಲ್ ಸಿಂಗ್ ಚಡ್ಡಾ' ಸಿನಿಮಾ ಇಬ್ಬರನ್ನೂ ಹತ್ತಿರಕ್ಕೆ ತಂದಿತ್ತು. ಇಲ್ಲಿಂದ ಶುರುವಾಗಿದ್ದ ಸ್ನೇಹ ಇನ್ನೂ ಮುಂದುವರೆದಿದೆ. ಇದೇ ಆತ್ಮೀಯತೆ ನಾಗಚೈತನ್ಯ ಹಾಗೂ ಸಮಂತಾ ಜೊತೆ ಬ್ರೇಕಪ್ ಆಗಲು ಕಾರಣ ಎಂದು ಕೆಆರ್‌ಕೆ ಆರೋಪ ಮಾಡಿದ್ದಾರೆ. ಇವರಿಬ್ಬರೂ ಬೇರೆಯಾಗಲೂ ಆಮಿರ್ ಖಾನ್ ಕೈವಾಡವಿದೆ ಎಂದು ವಿವಾದಾತ್ಮಕ ವಿಮರ್ಶಕ ಕೆಆರ್‌ಕೆ ಆರೋಪ ಮಾಡಿದ್ದಾರೆ.

  ಆಮಿರ್ ಖಾನ್‌ರದ್ದು 'ಕಪ್ಪು ಹೃದಯ'

  ಆಮಿರ್ ಖಾನ್‌ರದ್ದು 'ಕಪ್ಪು ಹೃದಯ'

  ಕೆಆರ್‌ಕೆ ಮಾಡಿರುವ ಟ್ವೀಟ್‌ನಲ್ಲಿ ಆಮಿರ್ ಖಾನ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. "ಸಮಂತಾಗೆ ವಿಚ್ಛೇದನ ನೀಡುವಂತೆ ಆಮಿರ್ ಖಾನ್ ಹೇಗೆ ಮನವೊಲಿಸಿದ್ದರು ಎಂಬ ಸಂಪೂರ್ಣ ಮಾಹಿತಿ ನನಗೆ ಸಿಕ್ಕಿದೆ. ಅವರದ್ದು ಕಪ್ಪು ಹೃದಯ." ಎಂದು ಕೆಆರ್‌ಕೆ ಆರೋಪ ಮಾಡಿದ್ದಾರೆ. ಇಂತಹವರ ಸಿನಿಮಾ ಯಾವತ್ತಿಗೂ ಗೆಲ್ಲುವುದಿಲ್ಲ. ಶೀಘ್ರದಲ್ಲಿಯೇ ನನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ. ಎಂದು ಆಮಿರ್ ಖಾನ್ ಹೇಳಿದ್ದಾರೆ.

  'ಲಾಲ್ ಸಿಂಗ್ ಚಡ್ಡಾ'ಗೆ ಸೋಲು

  'ಲಾಲ್ ಸಿಂಗ್ ಚಡ್ಡಾ'ಗೆ ಸೋಲು

  ಮೊದಲಿನಿಂದಲೂ ಕೆಆರ್‌ಕೆ ಲಾಲ್ ಸಿಂಗ್ ಚಡ್ಡಾ ಬಗ್ಗೆ ಕಿಡಿಕಾರುತ್ತಲೇ ಇದ್ದಾರೆ. 'ಲಾಲ್ ಸಿಂಗ್ ಚಡ್ಡಾ' ಆಮಿರ್ ಖಾನ್ ಕರಿಯರ್‌ನ ಅತೀ ಕೆಟ್ಟ ಸಿನಿಮಾ ಅಂತ ಹೇಳಿದ್ದು, ಹೀನಾಯವಾಗಿ ಸೋಲುತ್ತೆ ಎಂದು ಕೆಆರ್‌ಕೆ ಆರೋಪ ಮಾಡಿದ್ದರು. ಈಗ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನಕ್ಕೆ ಆಮಿರ್ ಖಾನ್ ಕಾರಣ ಅನ್ನುವುದನ್ನು ಟ್ವೀಟ್ ಮಾಡುವ ಮೂಲಕ ಮತ್ತಷ್ಟು ಕಿಡಿ ಹಚ್ಚಿದ್ದಾರೆ. ಸದ್ಯ ಇದೇ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  ಆಮಿರ್ ಖಾನ್ ಪತ್ನಿಗೆ ಡಿವೋರ್ಸ್

  ಆಮಿರ್ ಖಾನ್ ಪತ್ನಿಗೆ ಡಿವೋರ್ಸ್

  ಆಮಿರ್ ಖಾನ್ ಕೂಡ ಎರಡನೇ ಪತ್ನಿ ಕಿರಣ್ ರಾವ್‌ಗೆ ವಿಚ್ಛೇದನ ನೀಡಿದ್ದರು. ತಮ್ಮ 15 ವರ್ಷಗಳ ಸುದೀರ್ಘ ಪಯಣಕ್ಕೆ ಇಬ್ಬರೂ ಅಂತ್ಯ ಹಾಡಿದ್ದರು. ಆ ವೇಳೆ ನಾಗಚೈತನ್ಯ 'ಲಾಲ್ ಸಿಂಗ್ ಚಡ್ಡಾ' ಸಿನಿಮಾದಲ್ಲಿ ನಟಿಸುತ್ತಿದ್ದರು. ಆಗಲೇ ಸಮಂತಾ ಹಾಗೂ ನಾಗಚೈತನ್ಯ ಕೂಡ ವಿಚ್ಛೇದನಕ್ಕೆ ಮುಂದಾಗಿದ್ದರು. ನಾಗಚೈತನ್ಯ ಸಿನಿಮಾ 'ಲವ್‌ ಸ್ಟೋರಿ'ಯ ಪ್ರೀ- ರಿಲೀಸ್ ಈವೆಂಟ್‌ಗೆ ಆಮಿರ್ ಖಾನ್ ಬಂದು ಹೋದಮೇಲೆ ಕಂಗನಾ ರನೌತ್ ವ್ಯಂಗ್ಯವಾಗಿ ಕಮೆಂಟ್ ಮಾಡಿದ್ದರು. " ವಿಚ್ಛೇದನದಿಂದ ಸ್ಕೋಪ್ ಕಡಿಮೆಯಾಗಿದೆ. ಅದಕ್ಕಾಗಿ ಮತ್ತೊಬ್ಬ ವಿಚ್ಛೇದಿತ ವ್ಯಕ್ತಿ ಆಮಿರ್ ಖಾನ್ ಕರೆದು ಕೊಂಡು ಬಂದಿದ್ದಾರೆ." ಎನ್ನುವ ಅರ್ಥದಲ್ಲಿ ಟೀಕೆ ಮಾಡಿದ್ದರು.

  Recommended Video

  ಮಗಳನ್ನು ಮುಂದಿಟ್ಟುಕೊಂಡು ಹಣ ಸಂಪಾದಿಸುತ್ತಿದ್ದೀರಾ ಎಂದಿದ್ದಕ್ಕೆ ವಂಶಿಕಾ ಬಗ್ಗೆ ಮಾ.ಆನಂದ್ ಹೇಳಿದ್ದೇನು?
  English summary
  Aamir Khan Convinced Naga Chaitanya To Divorce Samantha Tweets KRK, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X